ಬ್ರೇಕಿಂಗ್ ನ್ಯೂಸ್
24-04-22 01:15 pm Hk Desk, Bengaluru ಕ್ರೈಂ
ಕಲಬುರಗಿ, ಎ.24: ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಕಿಂಗ್ ಪಿನ್ ಎನ್ನಲಾಗಿರುವ, ಕಾಂಗ್ರೆಸ್ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆಯ ಆಪ್ತನೂ ಆಗಿರುವ ಕಾಂಗ್ರೆಸ್ ನಾಯಕ ಆರ್.ಡಿ. ಪಾಟೀಲನನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದು, ಇಂದು ನಸುಕಿನಲ್ಲಿ ಕಲಬುರಗಿಯ ಅಫಜಲಪುರ ಠಾಣೆಗೆ ಕರೆತಂದಿದ್ದಾರೆ. ಎರಡು ದಿನದ ಹಿಂದೆ ಸಿಐಡಿ ಅಧಿಕಾರಿಗಳಿಗೆ ಆವಾಜ್ ಹಾಕಿದ್ದ ವ್ಯಕ್ತಿ ಕೈಗೆ ಸಿಕ್ಕಿದ್ದು, ಇವತ್ತು ಭಾನುವಾರ ಆಗಿರುವುದರಿಂದ ಕೋರ್ಟಿಗೆ ಹಾಜರುಪಡಿಸದೆ ದಿನವಿಡೀ ಫುಲ್ ಡ್ರಿಲ್ ಮಾಡಲಿದ್ದಾರೆ.
ಪಾಟೀಲ ಪಿಎಸ್ಐ ಅಕ್ರಮದ ಜೊತೆಗೆ ಕಲುಬರಗಿ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಹಲವಾರು ಅಕ್ರಮದಲ್ಲಿ ತೊಡಗಿದ್ದಾನೆ ಎನ್ನುವ ಮಾಹಿತಿಗಳಿವೆ. ಆರ್.ಡಿ.ಪಾಟೀಲ ಬಂಧನದೊಂದಿಗೆ ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೇರಿದೆ. ಉತ್ತರ ಕರ್ನಾಟಕ ಮತ್ತು ಬೆಂಗಳೂರಿನ ಕಾಂಗ್ರೆಸ್ ಪ್ರಮಖರ ಖಾಸಾ ನಂಟು ಹೊಂದಿದ್ದ ಆರ್.ಡಿ.ಪಾಟೀಲ, ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲನ ಸೋದರ. ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ನಲ್ಲಿ ಉತ್ತರಗಳನ್ನು ಅಳವಡಿಸಿ, ಅದನ್ನು ಅಭ್ಯರ್ಥಿಗಳಿಗೆ ನೀಡುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.


ನರೇಗಾದಲ್ಲಿ 5 ಕೋಟಿ ನುಂಗಿ ಹಾಕಿದ್ದ ಪಾಟೀಲ !
ಈ ಹಿಂದೆ ಅಫಜಲಪುರದ ಗೌರ್ ಬಿ. ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷನಾಗಿದ್ದ ವೇಳೆ ಆರ್.ಡಿ.ಪಾಟೀಲ ನರೇಗಾ ಯೋಜನೆಯಲ್ಲಿ ಕಾಮಗಾರಿಯನ್ನೇ ನಡೆಸದೆ, ಕಾಮಗಾರಿ ಆಗಿರುವಂತೆ ದಾಖಲೆಗಳಲ್ಲಿ ತೋರಿಸಿ 5 ಕೋಟಿ ರೂಪಾಯಿ ನುಂಗಿ ಹಾಕಿದ್ದ. ಈ ಬಗ್ಗೆ ಅಫಜಲಪುರ ಠಾಣೆಯಲ್ಲಿ ಪಾಟೀಲನ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ದಾಖಲಾಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಅವಿತುಕೊಂಡು ಬಳಿಕ ಜಾಮೀನು ಪಡೆದು ಹೊರಬಂದಿದ್ದ. ಬಳಿಕ ಕೋರ್ಟ್ ಕೇಸು ಆಗಿ ದಂಡದ ರೂಪದಲ್ಲಿ ಎರಡು ಕೋಟಿ ರೂಪಾಯಿ ಸರಕಾರಕ್ಕೆ ಪಾವತಿಸಿ, ಮೂರು ಕೋಟಿ ರೂ. ಪಂಗನಾಮ ಹಾಕಿ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದ್ದ.

ಸರಕಾರಿ ಕೆಲಸ ಕೊಡಿಸುವ ದಲ್ಲಾಳಿ ಆಗಿದ್ದ
ಅವ್ಯವಹಾರದ ಬಳಿಕ ಬೆಂಗಳೂರಿನಲ್ಲಿದ್ದ ಪಾಟೀಲ, ಅಲ್ಲಿ ಹಿರಿಯ ರಾಜಕಾರಣಿಗಳ ಜೊತೆ ಸೇರಿಕೊಂಡು ಬ್ರೋಕರ್ ಕೆಲಸ ಮಾಡಿಕೊಂಡಿದ್ದ. ಆನಂತರ ಕೆಪಿಎಸ್ಸಿ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ, ಎಫ್ ಡಿಸಿ ಹುದ್ದೆ ಕೊಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಹಣ ಪಡೆದು ಗುಳುಂ ಮಾಡಿದ್ದ. ಹಲವರಿಗೆ ಹುದ್ದೆಯನ್ನೂ ಮಾಡಿಕೊಟ್ಟಿದ್ದರಿಂದ ಹಳ್ಳಿ ಜನರಿಗೆ ನಂಬಿಕೆಯೂ ಬಂದಿತ್ತು. ಅಫಜಲಪುರ ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಕೆಲಸ ಮಾಡಿಸಿಕೊಡುವ ದಲ್ಲಾಳಿ ಎಂದೇ ಬಿಂಬಿತವಾಗಿದ್ದ ಪಾಟೀಲನ ಬಗ್ಗೆ ಹಳ್ಳಿ ಜನರು ತುಂಬ ಗೌರವ ನೀಡುತ್ತಿದ್ದರು. ಸರಕಾರಿ ಕೆಲಸ ಕೊಡಿಸುವ ವ್ಯಕ್ತಿಯೆಂದು ಹಳ್ಳಿ ಜನರು ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು. ಒಂದೆಡೆ ಬೇಕಾಬಿಟ್ಟಿ ಕಾಸು ಮಾಡಿ, ಹಣ ಬಿಚ್ಚುತ್ತಿದ್ದುದರಿಂದ ಜೊತೆಗೆ ಓಡಾಡಲು ಪಟಾಲಂ ಕೂಡ ಇತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡು ಶಾಸಕನಾಗಲು ಪ್ಲಾನ್ ಹಾಕಿದ್ದ.
ಸರಕಾರಿ ಕೆಲಸ ಕೊಡಿಸುವ ರಾಜಕಾರಣಿ ಎಂದೇ ಬಿಂಬಿತವಾಗಿದ್ದರಿಂದ ಈ ಬಾರಿ ಪಿಎಸ್ಐ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಹಲವಾರು ಆಕಾಂಕ್ಷಿಗಳು ಕೆಲಸ ದೊರಕಿಸಲು ಆರ್.ಡಿ.ಪಾಟೀಲ ಮೊರೆ ಹೋಗಿದ್ದರು. ಇದೇ ಸೂಕ್ತ ಸಮಯ ಎಂದುಕೊಂಡು ಭರಪೂರ ಕಲೆಕ್ಷನ್ ಮಾಡಿದ್ದಲ್ಲದೆ, ಕಲಬುರ್ಗಿಯಲ್ಲಿ ಪರೀಕ್ಷೆ ಬರೆದವರಿಗೆ ಹುದ್ದೆ ಗ್ಯಾರಂಟಿ ಅನ್ನುವಂತೆ ಪೋಸು ಕೊಟ್ಟಿದ್ದ. ಅಫಜಲಪುರ ಶಾಸಕರ ಗನ್ ಮ್ಯಾನ್ ಹಯ್ಯಾಳಿ ಜೊತೆಗೆ ಇದೇ ಭರವಸೆಯಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಮೇಲಿನವರೆಲ್ಲ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ, ಏನೂ ತೊಂದರೆ ಇಲ್ಲ. ಎಲ್ಲ ಖರೇ ಆಗುತ್ತದೆ ಎಂದು ಹೇಳಿಕೊಂಡಿದ್ದ.

ಮುಂದಿನ ಬಾರಿ ಶಾಸಕನಾಗಲು ಯೋಜನೆ
ಚುನಾವಣೆ ಹೊತ್ತಲ್ಲಿ ಜನಾದರ ಮತ್ತು ಜನರ ಸಂಪರ್ಕ ಗಳಿಸುವುದಕ್ಕಾಗಿಯೇ ಎ.23ರ ಶನಿವಾರ ಅಫಜಲಪುರದಲ್ಲಿ ಆರ್.ಡಿ.ಪಾಟೀಲ ಸಾಮೂಹಿಕ ವಿವಾಹ ಕಾರ್ಯ ಏರ್ಪಡಿಸಿದ್ದ. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು, ಅದಕ್ಕಾಗಿ ಗಡದ್ದು ಊಟದ ತಯಾರಿ ನಡೆಸುವುದಕ್ಕೂ ಏರ್ಪಾಡು ಮಾಡಿದ್ದ. ಆದರೆ ಅಷ್ಟರಲ್ಲೇ ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಹೊರಬಿದ್ದಿದ್ದು, ಸಿಐಡಿ ಪೊಲೀಸರು ಬೆನ್ನು ಬಿದ್ದಿದ್ದರು. ವಿಚಾರ ಗೊತ್ತಾಗುತ್ತಲೇ ಪಾಟೀಲ, ತಲೆಮರೆಸಿಕೊಂಡು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅಡಗಿಕೊಂಡಿದ್ದ. ಪೊಲೀಸರು ವಿವಾಹ ಕಾರ್ಯಕ್ಕೆ ಸಿದ್ಧತೆ ನಡೆಯುವ ಜಾಗಕ್ಕೇ ಬಂದು ಅಲ್ಲಿದ್ದ ಸೋದರ ಮಹಾಂತೇಶ ಪಾಟೀಲನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ನಾನೇನು ಮಾಡಿಲ್ಲರೀ, ಅದೆಲ್ಲ ಅವನದ್ದು ಕೆಲಸ ಎಂದು ಮಹಾಂತೇಶ ಬಾಯಿಬಿಟ್ಟಿದ್ದಾನೆ. ಕೂಡಲೇ ಅವನಿಗೆ ಫೋನ್ ಹಚ್ಚು ಎಲ್ಲಿದ್ದಾನೆ, ನೋಡೋಣ ಎಂದು ಸಿಐಡಿ ಅಧಿಕಾರಿಗಳು ಮಹಾಂತೇಶನಲ್ಲಿಯೇ ಕರೆ ಮಾಡಿಸಿದ್ದರು. ತನ್ನ ಅಧಿಕೃತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೇರೊಂದು ಮೊಬೈಲ್ ಜೊತೆಗೆ ಅಡಗಿಕೊಂಡಿದ್ದ ಆರ್.ಡಿ.ಪಾಟೀಲ ಸೋದರನ ಫೋನ್ ಬರುತ್ತಲೇ ರಿಸೀವ್ ಮಾಡಿದ್ದ.
ಇತ್ತ ಸಿಐಡಿ ಡಿವೈಎಸ್ಪಿ ಶರಣು ಗೌಡ ಮಾತನಾಡಿದ್ದು, ಕೂಡಲೇ ಪಾಟೀಲನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಪಾಟೀಲ ಸಿಐಡಿ ಅಧಿಕಾರಿಗೇ ಆವಾಜ್ ಹಾಕಿದ್ದು, ಸೋದರನನ್ನು ಬಂಧಿಸಿದರೆ ಪರಿಣಾಮ ನೆಟ್ಟಗಿರಲ್ಲ. ನಂಗೆ ಹೈಲೆವೆಲ್ ಟಚ್ ಇದೆಯೆಂದು ಹೇಳಿ ದಬಾಯಿಸಿದ್ದ. ಆದರೆ ಪೊಲೀಸ್ ಅಧಿಕಾರಿಗಳು ಆತನ ಮಾತಿಗೆ ಕ್ಯಾರೆನ್ನದೆ, ಮಹಾಂತೇಶ ಪಾಟೀಲನನ್ನು ದರದರನೆ ಎಳೆದೊಯ್ದಿದ್ದರು. ಇತ್ತ ಆರ್.ಡಿ.ಪಾಟೀಲ ಅಡಗಿಕೊಂಡಿದ್ದ ಜಾಗವೂ ಮೊಬೈಲಿನಲ್ಲಿ ಟ್ರೇಸ್ ಆಗಿತ್ತು. ಪೊಲೀಸರು ಕೂಡಲೇ ಅಲರ್ಟ್ ಆಗಿದ್ದು ಮಹಾರಾಷ್ಟ್ರ ಪೊಲೀಸರ ಮೂಲಕ ಶನಿವಾರ ಸೆರೆಹಿಡಿದಿದ್ದಾರೆ. ಇಂದು ನಸುಕಿನಲ್ಲಿ ಪಾಟೀಲನನ್ನು ಅಫಜಲಪುರಕ್ಕೆ ಕರೆತಂದಿದ್ದು, ಇವತ್ತು ದಿನವಿಡೀ ಫುಲ್ ಡ್ರಿಲ್ ಮಾಡಲಿದ್ದಾರೆ.
Criminal Investigation Department (CID) detained the main accused in the Karnataka PSI scam Rudragowda D Patil from Maharashtra and brought him to its office late Saturday night. The case is related to the irregularities in the appointment of police sub-inspectors in the state.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm