ಬ್ರೇಕಿಂಗ್ ನ್ಯೂಸ್
29-04-22 10:29 pm Mangalore Correspondent ಕ್ರೈಂ
ಉಳ್ಳಾಲ, ಎ.29: ನಗರಸಭೆಯ ವತಿಯಿಂದ ಸರಬರಾಜು ಮಾಡುವ ನೀರನ್ನ ತನ್ನ ಮನೆಗೆ ಏಕೆ ಪೂರೈಸಿಲ್ಲ ಎಂದು ಪ್ರಶ್ನಿಸಿದ ಯುವಕನೊಬ್ಬನಿಗೆ ನೀರಿನ ಟ್ಯಾಂಕರ್ ಚಾಲಕ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಮೇಲಂಗಡಿ ಬಳಿ ನಡೆದಿದೆ.
ಬಬ್ಬುಕಟ್ಟೆ ನಿವಾಸಿ ರಿಜ್ವಾನ್(24) ಚೂರಿ ಇರಿತಕ್ಕೊಳಗಾದವರು.ಟ್ಯಾಂಕರ್ ಚಾಲಕ ಬಸ್ತಿಪಡ್ಪು ನಿವಾಸಿ ಖಲೀಲ್ ಚೂರಿಯಿಂದ ಇರಿದ ಆರೋಪಿ. ರಿಜ್ವಾನ್ ಎಂಬಾತನ ಮನೆಗೆ ಟ್ಯಾಂಕರ್ ಚಾಲಕ ಖಲೀಲ್ ನೀರು ಸರಬರಾಜು ಮಾಡಿರದ ವಿಚಾರ ಮುಂದಿಟ್ಟು ರಿಜ್ವಾನ್ ಅವರ ತಾಯಿ ಖಲೀಲ್ ನನ್ನ ತರಾಟೆಗೆ ತೆಗೆದಿದ್ದರು. ಈ ವೇಳೆ ಖಲೀಲ್ ರಿಜ್ವಾನ್‌ರವರ ತಾಯಿಗೆ ಅಸಭ್ಯ ರೀತಿಯಲ್ಲಿ ಬೈಯ್ದು ಬಳಿಕ ನೀರು ಸರಬರಾಜು ಮಾಡಿ ಹೋಗಿದ್ದನಂತೆ. ಇದೇ ಘಟನೆಗೆ ಸಂಬಂಧಿಸಿ ಇಂದು ಸಂಜೆ ವೇಳೆ ರಿಜ್ವಾನ್ ಮೇಲಂಗಡಿಯಲ್ಲಿ ಖಲೀಲ್ ನಲ್ಲಿ ವಿಚಾರಿಸಿದ್ದಾನೆ.
ಈ ಸಂದರ್ಭ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕುಪಿತಗೊಂಡ ಟ್ಯಾಂಕರ್ ಚಾಲಕ ಖಲೀಲ್, ರಿಜ್ವಾನ್ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯಿಂದಗಾಯಗೊಂಡ ರಿಜ್ವಾನ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಿಜ್ವಾನ್ ಜೊತೆಗಿದ್ದ ಸೈಫುದ್ದೀನ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Tanker driver stabs man for asking drinking water at Ullal. The arrested has been identified as Rizwan (24).
29-10-25 09:12 pm
Bangalore Correspondent
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 10:47 pm
Mangalore Correspondent
ಕೊಳಲನ್ನೂದುತ್ತ ಈಜಿನಲ್ಲಿ ವಿಶ್ವದಾಖಲೆ ; ಅಲೋಶಿಯಸ್...
29-10-25 06:55 pm
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm