ಮೈ ಜಿಯೋ ಏಪ್ ಅಪ್ಡೇಟ್ ಹೆಸರಲ್ಲಿ ಮೋಸ ; ಬಂಟ್ವಾಳದ ಮಕ್ಕಳ ತಜ್ಞರಿಂದ 1.65 ಲಕ್ಷ ದೋಚಿದ ಖದೀಮ ! 

03-05-22 04:35 pm       Mangalore Correspondent   ಕ್ರೈಂ

ಬಿ.ಸಿ.ರೋಡ್ ನಲ್ಲಿ ಮಕ್ಕಳ ತಜ್ಞರಾಗಿರುವ ಡಾ.ಅಶ್ವಿನ್ ಬಾಳಿಗಾ ಅವರನ್ನು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ಮೈ ಜಿಯೋ ಏಪ್ ಡೌನ್ಲೋಡ್ ಮಾಡುವ ಹೆಸರಲ್ಲಿ ವೈದ್ಯರ ಖಾತೆಯಿಂದ 1.65 ಲಕ್ಷ ರೂಪಾಯಿ ಹಣ ದೋಚಿದ ಘಟನೆ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ. 

ಬಂಟ್ವಾಳ, ಮೇ 3 : ಬಿ.ಸಿ.ರೋಡ್ ನಲ್ಲಿ ಮಕ್ಕಳ ತಜ್ಞರಾಗಿರುವ ಡಾ.ಅಶ್ವಿನ್ ಬಾಳಿಗಾ ಅವರನ್ನು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ಮೈ ಜಿಯೋ ಏಪ್ ಡೌನ್ಲೋಡ್ ಮಾಡುವ ಹೆಸರಲ್ಲಿ ವೈದ್ಯರ ಖಾತೆಯಿಂದ 1.65 ಲಕ್ಷ ರೂಪಾಯಿ ಹಣ ದೋಚಿದ ಘಟನೆ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ. 

ಡಾ.ಅಶ್ವಿನ್ ಬಾಳಿಗಾ ಅವರಿಗೆ ಎ.28 ರಂದು ಸಂಜೆ 5.30 ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು ನಿಮ್ಮ ಜಿಯೋ ನಂಬರನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಗೂಗಲ್ ಪ್ಲೇ ಸ್ಟೋರ್ ನಿಂದ ಕ್ವಿಕ್ ಈಝೀ ಏಪ್ ಡೌನ್ಲೋಡ್ ಮಾಡಲು ಹೇಳಿದ್ದಾನೆ. ಆನಂತರ, ಅಶ್ವಿನ್ ಬಾಳಿಗಾ ಅವರಿಗೆ ಮೈ ಜಿಯೋ ಏಪ್ ನಲ್ಲಿ ಮೊಬೈಲ್ ನಲ್ಲಿ ಹತ್ತು ರೂಪಾಯಿ ರಿಚಾರ್ಜ್ ಮಾಡಲು ತಿಳಿಸಿದ್ದ. ಅದರಂತೆ, ಅಶ್ವಿನ್ ಬಾಳಿಗಾ ಅವರು ತನ್ನ ಎಚ್ ಡಿಎಫ್ ಸಿ ಬ್ಯಾಂಕ್ ಖಾತೆ ಮತ್ತು ಎಟಿಎಂ ಕಾರ್ಡ್ ವಿವರಗಳನ್ನು ಮೈ ಜಿಯೋ ಏಪ್ ನಲ್ಲಿ ದಾಖಲಿಸಿ, ಹತ್ತು ರೂ. ರಿಚಾರ್ಜ್ ಮಾಡಿದ್ದಾರೆ. 

Pune: Cyber fraud cases during online shopping jump by over 4 times in two  years | Pune News

ಕೂಡಲೇ ವೈದ್ಯರ ಬ್ಯಾಂಕ್ ಖಾತೆಯುಳ್ಳ ಎಚ್ ಡಿಎಫ್ ಸಿ ಖಾತೆಯಿಂದ ಹತ್ತು ಸಾವಿರ ರೂ. ಮೂರು ಬಾರಿ ಕಟ್ ಆಗಿದೆ. ಆನಂತರ ರೂ.45 ಸಾವಿರದಂತೆ ಮೂರು ಬಾರಿ ಕಟ್ ಆಗಿದ್ದು ಅಪರಿಚಿತನ ಖಾತೆಗೆ ಹಣ ವರ್ಗಾವಣೆ ಆಗಿದೆ. ಒಟ್ಟು 1.65 ಲಕ್ಷ ರೂ. ಹಣ ಖಾತೆಯಿಂದ ಬೇರೆ ಖಾತೆಗೆ ಜಮಾ ಆಗಿದ್ದು ವೈದ್ಯರು ಮೋಸ ಹೋಗಿದ್ದಾರೆ. ಈ ಬಗ್ಗೆ ವೈದ್ಯ ಡಾ.ಅಶ್ವಿನ್ ಬಾಳಿಗಾ ಮಂಗಳೂರಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

Mangalore Fraud in the name of My Jio app update, doctor looted of 1.65 lakh in Bantwal.