ನೀರು ಕೇಳಿದ ಯುವಕನಿಗೆ ಇರಿದು ಪರಾರಿಯಾಗಿದ್ದ ಟ್ಯಾಂಕರ್ ಚಾಲಕನ ಬಂಧಿಸಿದ ಉಳ್ಳಾಲ ಪೊಲೀಸರು 

08-05-22 12:15 pm       Mangalore Correspondent   ಕ್ರೈಂ

ಕುಡಿಯುವ ನೀರು ಸರಬರಾಜು ಮಾಡುವ ವಿಚಾರದಲ್ಲಿ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದನ್ನ ವಿಚಾರಿಸಲು ಹೋದ ರಿಜ್ವಾನ್ ಎಂಬವರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಟ್ಯಾಂಕರ್ ಚಾಲಕ ಮೇಲಂಗಡಿ ನಿವಾಸಿ ಖಲೀಲ್  ಎಂಬಾತನನ್ನು ಜಪ್ಪು ನೇತ್ರಾವತಿ ಸೇತುವೆ ಬಳಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಉಳ್ಳಾಲ, ಮೇ 8 : ಕುಡಿಯುವ ನೀರು ಸರಬರಾಜು ಮಾಡುವ ವಿಚಾರದಲ್ಲಿ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದನ್ನ ವಿಚಾರಿಸಲು ಹೋದ ರಿಜ್ವಾನ್ ಎಂಬವರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಟ್ಯಾಂಕರ್ ಚಾಲಕ ಮೇಲಂಗಡಿ ನಿವಾಸಿ ಖಲೀಲ್  ಎಂಬಾತನನ್ನು ಜಪ್ಪು ನೇತ್ರಾವತಿ ಸೇತುವೆ ಬಳಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಎಪ್ರಿಲ್ 29 ರಂದು ಉಳ್ಳಾಲ ನಗರಸಭೆಯ ನೀರು ಸರಬರಾಜು ಮಾಡದ ಬಗ್ಗೆ  ಚೆಂಬುಗುಡ್ಡೆ ನಿವಾಸಿ ರಿಜ್ವಾನ್ ಎಂಬವರ ತಾಯಿ ಟ್ಯಾಂಕರ್ ಚಾಲಕ ಖಲೀಲ್ ನಲ್ಲಿ ವಿಚಾರಿಸಿದ್ದರು. ಈ ವೇಳೆ ಆರೋಪಿ ಖಲೀಲ್ ರಿಜ್ವಾನ್ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತಾಯಿಗೆ ನಿಂದಿಸಿದ ಬಗ್ಗೆ ರಿಜ್ವಾನ್ ಮಾಸ್ತಿಕಟ್ಟೆ ಬಳಿ ಟ್ಯಾಂಕರ್ ಚಾಲಕ ಖಲೀಲ್ ನನ್ನು ವಿಚಾರಿಸಿದ್ದ ವೇಳೆ ಮಾತಿಗೆ ಮಾತು ಬೆಳೆದು ರಿಜ್ವಾನ್ ಗೆ ಖಲೀಲ್ ಚೂರಿಯಿಂದ ಇರಿದು ಪರಾರಿಯಾಗಿದ್ದ. ಈ ಬಗ್ಗೆ ರಿಜ್ವಾನ್ ಸ್ನೇಹಿತ ಸೈಫುದ್ದೀನ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ  ತಲೆಮರೆಸಿಕೊಂಡಿದ್ದ ಟ್ಯಾಂಕರ್ ಚಾಲಕ ಖಲೀಲ್ ನನ್ನು ಉಳ್ಳಾಲ ಪೊಲೀಸರು ಶನಿವಾರ ಜಪ್ಪು ನೇತ್ರಾವತಿ ಸೇತುವೆ ಬಳಿ ಬಂಧಿಸಿದ್ದಾರೆ.

Mangalore Tanker driver arrested for stabbing man for asking water in Ullal.