ಬ್ರೇಕಿಂಗ್ ನ್ಯೂಸ್
09-05-22 10:30 pm Udupi Correspondent ಕ್ರೈಂ
ಉಡುಪಿ, ಮೇ 9 : ತಾಯಿ ಮತ್ತು ಆಕೆಯ ಹತ್ತು ವರ್ಷದ ಮಗು ಸಂಶಯಾಸ್ಪದ ನೆಲೆಯಲ್ಲಿ ಸಾವನ್ನಪ್ಪಿದ ಘಟನೆ ಹಿರಿಯಡ್ಕ ಬಳಿಯ ಆತ್ರಾಡಿ ಎಂಬಲ್ಲಿ ನಡೆದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಆತ್ರಾಡಿ ಗ್ರಾಮದ ಮದಗ ನಿವಾಸಿಗಳಾದ ಚೆಲುವಿ (28) ಮತ್ತು ಆಕೆಯ ಮಗಳು ಪ್ರಿಯಾ (10) ಮೃತರು. ಚೆಲುವಿ ಮಣಿಪಾಲದ ಖಾಸಗಿ ಕಂಪನಿ ಒಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದು ಇಬ್ಬರು ಮಕ್ಕಳೊಂದಿಗೆ ಮದಗದಲ್ಲಿ ನೆಲೆಸಿದ್ದಳು.
ಮೇ 8 ರ ಭಾನುವಾರ ಚೆಲುವಿಯ ತಾಯಿ ಮದಗದ ಮನೆಗೆ ಬಂದಿದ್ದು ಅಜ್ಜಿಯ ಜೊತೆಗೆ ಈಕೆಯ ಮಗನೂ ಅಜ್ಜಿ ಮನೆಗೆ ತೆರಳಿದ್ದ. ಹೀಗಾಗಿ ಭಾನುವಾರ ರಾತ್ರಿ ಚೆಲುವಿ ಮತ್ತು ಆಕೆಯ ಮಗಳು ಮಾತ್ರ ಮನೆಯಲ್ಲಿದ್ದರು. ಸೋಮವಾರ ಬೆಳಗ್ಗೆ ಅಜ್ಜಿ ಚೆಲುವಿಗೆ ಫೋನ್ ಮಾಡಿದಾಗ, ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಏನೋ ಡೌಟ್ ಬಂದು ಚೆಲುವಿಯ ನೆರೆಮನೆಯ ನಿವಾಸಿಗಳಿಗೆ ಮಾಹಿತಿ ನೀಡಿದ್ದರು. ಅವರು ಚೆಲುವಿ ಮನೆಗೆ ತೆರಳಿ ನೋಡಿದಾಗ, ತಾಯಿ, ಮಗಳು ಸಂಶಯಾಸ್ಪದವಾಗಿ ಸಾವು ಕಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಚೆಲುವಿ ಶವ ಮನೆ ಬಾಗಿಲ ಬಳಿ ಇದ್ದರೆ, ಮಗಳು ಪ್ರಿಯಾ ಕೊಠಡಿ ಒಳಗೆ ಸಾವನ್ನಪ್ಪಿದ್ದಳು. ಸ್ಥಳೀಯರು ಕೊಲೆ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ವಿಧಿ ವಿಜ್ಞಾನ ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ. ಎಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯ್ಕ್, ಸಿಪಿಐ ಅನಂತ ಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udupi: In a Suspicious manner, a mother and her 10-year-old daughter were found dead in the house on Monday, May 9 at Madaga near Atradi under the Hiriyadka Police Station Limits. The deceased have been identified as Cheluvi (28) and her daughter Priya (10), residents of Madaga near Atradi.
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm