ಜಿಎಸ್ ಟಿ ಮಾಡಿಸುವ ನೆಪದಲ್ಲಿ 10 ಕೋಟಿಗೂ ಹೆಚ್ಚು ತೆರಿಗೆ ಹಣ ಲೂಟಿ ; ಬೆಂಗಳೂರಿನಲ್ಲಿ ನಕಲಿ ಆಡಿಟರ್ ಬಂಧನ 

10-05-22 02:18 pm       Bangalore Correspondent   ಕ್ರೈಂ

ಜಿಎಸ್ ಟಿ ಆಡಿಟ್ ಮಾಡಿಕೊಡುವುದಾಗಿ ಹೇಳಿ ಬರೋಬ್ಬರಿ 10 ಕೋಟಿಗೂ ಹೆಚ್ಚು ತೆರಿಗೆ ಹಣ ವಂಚಿಸಿದ್ದ ನಕಲಿ ಆಡಿಟರ್ ನನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ‌

ಬೆಂಗಳೂರು, ಮೇ 9 : ಜಿಎಸ್ ಟಿ ಆಡಿಟ್ ಮಾಡಿಕೊಡುವುದಾಗಿ ಹೇಳಿ ಬರೋಬ್ಬರಿ 10 ಕೋಟಿಗೂ ಹೆಚ್ಚು ತೆರಿಗೆ ಹಣ ವಂಚಿಸಿದ್ದ ನಕಲಿ ಆಡಿಟರ್ ನನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ‌

ಇಂದಿರಾ ನಗರ ನಿವಾಸಿ ವೀರಭದ್ರಪ್ಪ ಬಂಧಿತ ಆರೋಪಿ.‌ ಜಿಎಸ್ಟಿ ಅಡಿಟ್ ಮಾಡುವುದಾಗಿ ಹೇಳಿ ಗ್ರಾಹಕರಿಂದ ಹಣ ಪಡೆದು ವಂಚನೆ ಎಸಗಿದ್ದ. ಬೆಂಗಳೂರು ಮತ್ತು ದಾವಣೆಗೆರೆಯಲ್ಲಿ ಆರೋಪಿ ವಂಚಿಸಿದ್ದು 12 ಪ್ರಕರಣಗಳಲ್ಲಿ 10 ಕೋಟಿಗೂ ಹೆಚ್ಚು ತೆರಿಗೆ ಹಣವನ್ನು ವಂಚಿಸಿದ್ದಾಗಿ ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಆರೋಪಿ ವೀರಭದ್ರಪ್ಪನಿಗೆ ಸೇರಿದ ಬೆಂಗಳೂರಿನ ಇಂದಿರಾ ನಗರದ ಮನೆ ಮತ್ತು ದಾವಣಗೆರೆ ಜಿಲ್ಲೆಯ ಮನೆಗಳ ಮೇಲೆ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯಕ್ಕೆ ಆರೋಪಿಯಿಂದ 5.31 ಕೋಟಿ ರೂ. ವಸೂಲಿ ಮಾಡಲಾಗಿದೆ. ಆರೋಪಿ ವೀರಭದ್ರಪ್ಪ ವಿರುದ್ದ ರಾಮಮೂರ್ತಿ ಮತ್ತು ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Bangalore Fake GST auditor arrested for duping people of 10 Crores. The arrested has been identified as Veerabadrappa. Ramurthynagara police have succeeded in arresting him.