ಬ್ರೇಕಿಂಗ್ ನ್ಯೂಸ್
14-05-22 04:04 pm Mangalore Correspondent ಕ್ರೈಂ
ಮಂಗಳೂರು, ಮೇ 14: ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಪೊಲೀಸರಿಗೆ ಪ್ರಭಾವ ಬೀರಿ ಅರೆಸ್ಟ್ ಮಾಡದಂತೆ ನೋಡಿಕೊಳ್ಳುತ್ತೇವೆಂದು ನಂಬಿಸಿ ಬರೋಬ್ಬರಿ 2.95 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಿದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಪಾವೂರು ಗ್ರಾಮ ಪಂಚಾಯತ್ ಸದಸ್ಯ, ಸ್ಥಳೀಯ ಎಸ್ಡಿಪಿಐ ಮುಖಂಡ ಅಬ್ದುಲ್ ಖಾದರ್ ರಿಜ್ವಾನ್(28) ಬಂಧಿತ. ಕಳೆದ ಡಿಸೆಂಬರ್ ತಿಂಗಳಲ್ಲಿ ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ನಡೆದಿತ್ತು. ಸ್ಕೂಟರನ್ನು ಅಡ್ಡಗಟ್ಟಿ ವ್ಯಕ್ತಿಯೊಬ್ಬನನ್ನು ದರೋಡೆ ನಡೆಸಿದ್ದ ಪ್ರಕರಣದಲ್ಲಿ ನಟೋರಿಯಸ್ ರೌಡಿ ಆಕಾಶಭವನ್ ಶರಣ್ ಮತ್ತಾತನ ತಂಡದ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಅದೇ ಪ್ರಕರಣದಲ್ಲಿ ಆಕಾಶಭವನ್ ಶರಣ್ ಜೊತೆಗೆ ಗುರುತಿಸಿದ್ದ ಅವಿನಾಶ್ ಎಂಬಾತ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ.
ಇದೇ ವೇಳೆ, ಉಳ್ಳಾಲದ ಎಸ್ಡಿಪಿಐ ಮುಖಂಡ ಅಬ್ದುಲ್ ಖಾದರ್ ರಿಜ್ವಾನ್ ಮತ್ತು ಇನ್ನೊಬ್ಬ ವ್ಯಕ್ತಿ ದರೋಡೆ ಪ್ರಕರಣದ ಆರೋಪಿ ಅವಿನಾಶ್ ನನ್ನು ಸಂಪರ್ಕಿಸಿ ಡೀಲ್ ಕುದುರಿಸಿದ್ದಾರೆ. ಪೊಲೀಸರಿಗೆ ಹಣ ನೀಡಿ, ಪ್ರಕರಣದಲ್ಲಿ ನಿನ್ನ ಹೆಸರನ್ನು ತೆಗೆಸುತ್ತೇವೆ. ಮೂರು ಲಕ್ಷ ಕೊಟ್ಟರೆ ಎಲ್ಲ ನೋಡಿಕೊಳ್ಳುತ್ತೇವೆ ಎಂದು ಹೇಳಿ ನಂಬಿಸಿದ್ದಾರೆ. ಬಳಿಕ ಹಂತ ಹಂತವಾಗಿ 2.95 ಲಕ್ಷ ರೂಪಾಯಿ ಹಣವನ್ನು ಪಡೆದು ಡೀಲ್ ಕುದುರಿಸುವುದಾಗಿ ಹೇಳಿದ್ದರು. ಹಾಗಿದ್ದರೂ, ಪೊಲೀಸರು ತನ್ನನ್ನು ಹುಡುಕಾಡುತ್ತಿದ್ದಾರೆಂದು ತಿಳಿದು ಆರೋಪಿ ಅವಿನಾಶ್, ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ.
ಆನಂತರ ತನ್ನಿಂದ ಹಣ ಪಡೆದಿದ್ದ ಅಬ್ದುಲ್ ಖಾದರ್ ಮತ್ತು ಇನ್ನೊಬ್ಬನಲ್ಲಿ ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. ಆದರೆ, ಹಣ ಪಡೆದಿದ್ದವರು ತಿರುಗಿ ಬೆದರಿಕೆ ಹಾಕಿದ್ದು, ನಮಗೆ ಪೊಲೀಸರ ಸಂಪರ್ಕ ಇದೆ, ಹಣದ ವಿಚಾರದಲ್ಲಿ ಕರೆ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಇದಲ್ಲದೆ, ಹೇಗೂ ಜಾಮೀನು ಪಡೆದಿದ್ದೀರಿ. ಪ್ರಕರಣದ ಚಾರ್ಜ್ ಶೀಟ್ ನಲ್ಲಿ ನಿಮ್ಮ ಹೆಸರು ಬಾರದಂತೆ ಮಾಡುತ್ತೇವೆ ಎಂದು ಹೇಳಿ ಮತ್ತೆ 30 ಸಾವಿರ ಹಣ ಕೇಳಿ ಪಡೆದುಕೊಂಡಿದ್ದಾರೆ. ಇದೇ ವೇಳೆ, ಪೊಲೀಸರು ಅವಿನಾಶ್ ಗೆ ಕರೆ ಮಾಡಿ ಠಾಣೆಗೆ ಬರಹೇಳಿದ್ದರು. ಪೊಲೀಸರು ಮಾತುಕತೆ ನಡೆಸುತ್ತಿದ್ದ ವೇಳೆ ತಾನು ಹಣ ಕೊಟ್ಟಿದ್ದ ವಿಚಾರವನ್ನು ತಿಳಿಸಿದ್ದಾನೆ. ಪೊಲೀಸರ ಸೂಚನೆಯಂತೆ, ಅವಿನಾಶ್ ತನ್ನಲ್ಲಿ ಹಣ ಪಡೆದು ವಂಚಿಸಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದ.
ತನಿಖೆ ನಡೆಸಿದ ಪೊಲೀಸರು ಹಣ ಪಡೆದು ವಂಚಿಸಿದ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ರಿಜ್ವಾನನ್ನು ಬಂಧಿಸಿದ್ದಾರೆ. ರಿಜ್ವಾನ್ ಇನ್ನೊಬ್ಬ ವ್ಯಕ್ತಿಯ ಜೊತೆ ಸೇರಿ ವಂಚನೆ ನಡೆಸಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
A gram panchayat (GP) member was arrested by the Surathkal police for using the name of police to extort Rs 2.95 lac from Rowdy Shetter Akash Bhavan Sharan gang. On the pretext of clearing the name of another accused in a case using police influence, the GP member had demanded an amount of Rs 2.95 lac. The person who has been arrested is identified as Abdul Qadar Rizwan (28), a resident of Malhar Mane in Akshara Nagar of Pavoor in Mangaluru.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm