ಕಿಟಕಿ ಗ್ರಿಲ್ಸ್ ನಲ್ಲಿ ಸಾವು ಕಂಡ ಕಾಸರಗೋಡು ಮೂಲದ ಮಾಡೆಲ್ ! ಪತಿ ಪೊಲೀಸ್ ವಶಕ್ಕೆ, ಪತ್ನಿಯ ಜಾಹೀರಾತು ಕ್ಷೇತ್ರದ ಹಣಕ್ಕಾಗಿ ಪತಿಯ ಕಲಹ, ಗಂಡನ ಬಗ್ಗೆ ಸಂಶಯ  

14-05-22 09:07 pm       HK Desk News   ಕ್ರೈಂ

ಕಾಸರಗೋಡು ಮೂಲದ ನಟಿ ಕಂ ಮಾಡೆಲ್ ಸಹನಾ ಅನುಮಾನಾಸ್ಪದವಾಗಿ ಸಾವು ಕಂಡ ಘಟನೆ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆಕೆಯ ಪತಿಯನ್ನು ವಶಕ್ಕೆ ಪಡೆದಿದ್ದಾರೆ.

ಕೋಝಿಕ್ಕೋಡ್, ಮೇ 14: ಕಾಸರಗೋಡು ಮೂಲದ ನಟಿ ಕಂ ಮಾಡೆಲ್ ಸಹನಾ ಅನುಮಾನಾಸ್ಪದವಾಗಿ ಸಾವು ಕಂಡ ಘಟನೆ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆಕೆಯ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಸಹನಾ ಕೋಝಿಕ್ಕೋಡ್ ನಗರದಿಂದ 14 ಕಿಮೀ ದೂರದ ಪರಂಬಿಲ್ ಬಾಝಾರ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಕಿಟಕಿ ಗ್ರಿಲ್ಸ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೇ 13ರ ಬೆಳಗ್ಗೆ ಪತ್ತೆಯಾಗಿದ್ದಳು.

ಸಹನಾ ಸಾವಿನ ಬಗ್ಗೆ ತಾಯಿ ಮತ್ತು ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಗಂಡನ ಕಿರುಕುಳದಿಂದ ಸಾವು ಆಗಿದೆ, ಆತನೇ ಕೊಲೆ ಮಾಡಿದ್ದಾನೆ ಎನ್ನುವ ಬಗ್ಗೆ ಆರೋಪ ಮಾಡಿದ್ದಾರೆ. 20 ವರ್ಷದ ಸಹನಾಳನ್ನು ಒಂದೂವರೆ ವರ್ಷದ ಹಿಂದೆ ಸಜ್ಜದ್ ಎಂಬ ಕಾಸರಗೋಡಿನದ್ದೇ ಯುವಕನಿಗೆ ಮದುವೆ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ ಸಜ್ಜದ್ ಕತಾರ್ ನಲ್ಲಿ ಕೆಲಸಕ್ಕಿದ್ದ. ಮದುವೆಯ ಬಳಿಕ ಸಹನಾ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದರಿಂದ ಆನಂತರ ಕತಾರ್ ಗೆ ಹಿಂತಿರುಗಿರಲಿಲ್ಲ.

Malayalam actress Sahana Sajad found dead, family accuses husband |  NewsBytes

ಬದಲಿಗೆ, ಜಾಹೀರಾತು ಕ್ಷೇತ್ರದಲ್ಲಿ ಆಕೆಗೆ ಬಹಳಷ್ಟು ಹಣ ಹರಿದು ಬಂದಿತ್ತು. ಆಲುಕ್ಕಾಸ್ ಸೇರಿದಂತೆ ಬಹಳಷ್ಟು ಜುವೆಲ್ಲರಿ ಇನ್ನಿತರ ಪ್ರಖ್ಯಾತ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಳು. ಇದರಿಂದ ಬರುತ್ತಿದ್ದ ಹಣದ ವಿಚಾರದಲ್ಲಿ ಸಜ್ಜದ್ ಮತ್ತು ಸಹನಾ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಜಾಹೀರಾತು ಒಂದರಲ್ಲಿ ಸಹನಾಗೆ ಸಿಕ್ಕಿದ್ದ ಚೆಕ್ ವಿಚಾರದಲ್ಲಿ ಗಲಾಟೆ ನಡೆದಿದ್ದೇ ಸಾವಿಗೆ ಕಾರಣ ಎನ್ನಲಾಗಿದೆ. ಪತ್ನಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಹಣ ಗಳಿಸತೊಡಗಿದ ಬಳಿಕ ಕತಾರ್ ಬಿಟ್ಟು ಬಂದಿದ್ದ ಸಜ್ಜದ್ ಕೋಜಿಕ್ಕೋಡ್ ನಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದ. ಅಲ್ಲಿ ಪತ್ನಿಯಿಂದಲೇ ಹಣ ಪಡೆದು ಗೆಳೆಯರ ಜೊತೆ ಶೋಕಿ ಮಾಡುತ್ತಿದ್ದ. ಅಲ್ಲದೆ, ಸಹನಾ ಕುಟುಂಬಸ್ಥರನ್ನು ತನ್ನ ಮನೆಗೆ ಬರದಂತೆ ತಡೆಯೊಡ್ಡಿದ್ದ. ಮನೆಯವರ ಜೊತೆಗೆ ಮಾತನಾಡದಂತೆಯೂ ಅಡ್ಡಿ ಪಡಿಸುತ್ತಿದ್ದ. ಹೀಗಿದ್ದರೂ, ಸಹನಾ ಹೆಸರಿನಲ್ಲಿಯೇ ಕಾಸರಗೋಡಿನ ಚೀಮೇನಿಯಲ್ಲಿ ಸಣ್ಣ ಮನೆಯನ್ನು ಖರೀದಿಸಿದ್ದ ಆಕೆಯ ತಾಯಿ ಉವೆಯಮ್ಮಾ ತನ್ನಿಬ್ಬರು ಗಂಡು ಮಕ್ಕಳ ಜೊತೆ ಮನೆಯ ಕೆಲಸ ಪೂರ್ತಿಯಾಗುವ ಮೊದಲೇ ಅದರಲ್ಲಿ ನೆಲೆಸಿದ್ದರು.

Model's death: Husband Sajad was involved in drug business under guise of  food delivery, say police - KERALA - CRIME | Kerala Kaumudi Online

ಈ ನಡುವೆ, ಮಾಡೆಲಿಂಗ್ ಜೊತೆಗೆ ತಮಿಳು ಚಿತ್ರವೊಂದರಲ್ಲಿ ಸಹನಾ ನಟಿಸುತ್ತಿದ್ದಳು. ಎರಡು ದಿನಗಳ ಹಿಂದೆ ತಾಯಿಗೆ ಫೋನ್ ಮಾಡಿದ್ದ ಸಹನಾ ತನ್ನ 20 ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ತವರು ಮನೆಗೆ ಬರುವುದಾಗಿ ಹೇಳಿಕೊಂಡಿದ್ದಳು. ಮನೆಯಲ್ಲಿಯೇ ಬಂದು ಹುಟ್ಟಿದ ಹಬ್ಬವನ್ನು ಆಚರಿಸುವುದಾಗಿ ಹೇಳಿದ್ದಳು. ಗುರುವಾರ ನಡುರಾತ್ರಿಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗುತ್ತಿದ್ದು, ಸ್ಥಳೀಯರು ಫೋನ್ ಮಾಡಿ ಸಹನಾ ತಾಯಿ ಮನೆಯವರಿಗೆ ತಿಳಿಸಿದ್ದರು. ರಾತ್ರಿ 2 ಗಂಟೆ ವೇಳೆಗೆ ಸಹನಾ ಮೃತಪಟ್ಟಿರುವುದನ್ನೂ ತಿಳಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದು, ತಾಯಿ ಮನೆಯವರ ದೂರಿನಂತೆ ಸಜ್ಜದ್ ನನ್ನು ವಶಕ್ಕೆ ಪಡೆದಿದ್ದಾರೆ.

Shahana Model Husband: Who Is Sajjad And Why Was He Arrested? - Stiest

ಅಲ್ಲದೆ, ಮನೆಯಲ್ಲಿ ಪೊಲೀಸರು ತಲಾಶ್ ನಡೆಸಿದ ವೇಳೆ ಎಂಡಿಎಂಎ ಮತ್ತು ಮರಿಜುವನಾ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು. ಹೀಗಾಗಿ ಸಜ್ಜದ್ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸೇವಿಸುತ್ತಿದ್ದನೇ ಅಥವಾ ಆಕೆಗೂ ನೀಡುತ್ತಿದ್ದನೇ ಎನ್ನುವ ಬಗ್ಗೆ ಸಂಶಯಗಳೆದ್ದಿವೆ. ಡ್ರಗ್ಸ್ ನಶೆಯಲ್ಲಿ ಕೊಲೆ ಮಾಡಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಹಲವು ಸಮಯದಿಂದ ಗಂಡ- ಹೆಂಡತಿ ಜಗಳ ಮಾಡುತ್ತಿದ್ದ ಬಗ್ಗೆ ಮನೆ ಮಾಲಕರು ಇತ್ತೀಚೆಗೆ ವಾರ್ನ್ ಮಾಡಿದ್ದರು. ಹೀಗೆ ಜಗಳ ಮಾಡಿದರೆ ಮನೆ ಬಿಟ್ಟು ಹೋಗುವಂತೆ ತಿಳಿಸಿದ್ದರು. ಹಾಗಾಗಿ ಬೇರೊಂದು ಮನೆಯನ್ನೂ ಸಜ್ಜದ್ ನೋಡುತ್ತಿದ್ದ ಎನ್ನುವ ವಿಚಾರವನ್ನು ಮನೆ ಮಾಲೀಕ ಪೊಲೀಸರಿಗೆ ತಿಳಿಸಿದ್ದಾರೆ. ಕಿಟಕಿಯ ಗ್ರಿಲ್ಸ್ ನಲ್ಲಿ ನೇಣು ಬಿಗಿದಿರುವುದು ಸಂಶಯಕ್ಕೆ ಕಾರಣವಾಗಿದ್ದು, ಸಜ್ಜದ್ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ.

Kerala police on Friday took into custody a 31-year-old man after his wife, a model and actor was allegedly found hanging at their residence near here. Police said 20-year-old Shahana, who was a model and an actor, was found hanging at their residence on Thursday night.