ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ, ಮಗ ಕಾರ್ತಿ ಮನೆ, ಕಚೇರಿಗಳಿಗೆ ಸಿಬಿಐ ದಾಳಿ ; ಚೀನಾ ಪ್ರಜೆಗಳಿಗೆ ಅಕ್ರಮ ವೀಸಾ ಒದಗಿಸಿದ್ದ ಆರೋಪ ! 

17-05-22 01:28 pm       HK Desk News   ಕ್ರೈಂ

ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ನಿವಾಸ ಮತ್ತು ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದೆಹಲಿ, ಹೈದರಾಬಾದ್ ಮತ್ತು ಚೆನ್ನೈನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ನವದೆಹಲಿ, ಮೇ 17 : ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ನಿವಾಸ ಮತ್ತು ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದೆಹಲಿ, ಹೈದರಾಬಾದ್ ಮತ್ತು ಚೆನ್ನೈನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ವರದಿಗಳ ಪ್ರಕಾರ, ಈ ದಾಳಿಗಳು ಮಗ ಕಾರ್ತಿ ಚಿದಂಬರಂ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿವೆ. ಈ ಹಿಂದೆಯೂ ಅವರ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. 2011 ರಲ್ಲಿ ಚೀನಾದ 250 ಪ್ರಜೆಗಳಿಗೆ ಅನಧಿಕೃತವಾಗಿ ವೀಸಾ ಮಾಡಿಕೊಟ್ಟಿದ್ದ ಪ್ರಕರಣದಲ್ಲಿ ಕಾರ್ತಿ ಚಿದಂಬರಂ 50 ಲಕ್ಷ ಲಂಚ ತೆಗೆದುಕೊಂಡಿದ್ದರು ಎನ್ನುವ ಆರೋಪಗಳಿದ್ದವು. 

CBI conducts searches at homes, offices of Congress MP Karti Chidambaram -  India News

CBI Slaps FIR Against Chanda Kochhar, Deepak Kochhar in ICICI Bank-Videocon  Loan Case

ಇದೇ ವಿಚಾರದಲ್ಲಿ ಹೊಸದಾಗಿ ಪ್ರಕರಣ ದಾಖಲಿಸಿದ್ದ ಸಿಬಿಐ ಅಧಿಕಾರಿಗಳು ಇಂದು ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಮತ್ತು ಸಂಸದ ಕಾರ್ತಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿ, ಮುಂಬೈ ಹಾಗೂ ತಮಿಳುನಾಡಿನ ನಿವಾಸ, ಕಚೇರಿಗಳಲ್ಲಿ ದಾಳಿ ಮಾಡಲಾಗಿದೆ. ಮನೆ, ಕಚೇರಿ ಸೇರಿದಂತೆ 7 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ತಿ, ಸಿಬಿಐ ಅಧಿಕಾರಿಗಳು ಎಷ್ಟು ಬಾರಿ ರೈಡ್ ಮಾಡಿದ್ರು ಅನ್ನೋದೇ ಮರೆತು ಹೋಗಿದೆ. ಆಗಾಗ ರೈಡ್ ಮಾಡುತ್ತಲೇ ಇರುತ್ತಾರೆ ಎಂದು ಕುಹಕವಾಡಿದ್ದಾರೆ.

The Central Bureau of Investigation (CBI) conducted searches at multiple residential and official premises of the Lok Sabha MP of Congress Karti Chidambaram and his father and former Union Minister P Chidambaram across Delhi, Mumbai, Chennai and Sivagangai in Tamil Nadu.