ಬ್ರೇಕಿಂಗ್ ನ್ಯೂಸ್
20-05-22 01:54 pm HK Desk News ಕ್ರೈಂ
ನವದೆಹಲಿ, ಮೇ 20: ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ನಕಲಿ ಪ್ರೊಫೈಲ್ ಬಳಸ್ಕೊಂಡು ನೂರಕ್ಕೂ ಹೆಚ್ಚು ಮಹಿಳೆಯರ ಜೊತೆ ಸಂಪರ್ಕ ಬೆಳೆಸಿದ್ದಲ್ಲದೆ, ಮದುವೆಯಾಗುವುದಾಗಿ ನಂಬಿಸಿ ಅವರಿಂದಲೇ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು ದೆಹಲಿ ಪೊಲೀಸರು ವಂಚಕನನ್ನು ಕೊಲ್ಕತ್ತಾದಲ್ಲಿ ಬಂಧಿಸಿದ್ದಾರೆ.
ದೆಹಲಿಯ ಡಾಕ್ಟರ್ ಮಹಿಳೆಯೊಬ್ಬರು ತನಗಾದ ವಂಚನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಮೂಲತಃ ಒಡಿಶಾದ ಕಿಯೋಂಜಾರ್ ಜಿಲ್ಲೆಯ ನಿವಾಸಿ ಫರಾನ್ ತಸೀರ್ ಖಾನ್ ಬಂಧಿತ ವ್ಯಕ್ತಿ. ಏಮ್ಸ್ ನಲ್ಲಿ ವೈದ್ಯರಾಗಿದ್ದ ಮಹಿಳೆ ದೆಹಲಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯ ಆಗಿದ್ದ. ತನ್ನನ್ನು ಬಿಸಿನೆಸ್ ಮ್ಯಾನ್ ಎಂದು ಹೇಳಿಕೊಂಡಿದ್ದಲ್ಲದೆ, ಮದುವೆಯಾಗುವುದಾಗಿ ನಂಬಿಸಿ ವ್ಯವಹಾರ ವಿಸ್ತರಣೆಗಾಗಿ 15 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾನೆಂದು ತಿಳಿಸಿದ್ದರು.
ಪೊಲೀಸರು ತನಿಖೆ ನಡೆಸಿದಾಗ ಫರಾನ್ ತಸೀರ್ ಖಾನ್, ವಿವಿಧ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ತನ್ನ ಹೆಸರನ್ನು ನೋಂದಾಯಿಸಿದ್ದ. ತಾನೊಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ಎಂದು ತೋರಿಸಿಕೊಳ್ಳುತ್ತಿದ್ದ. ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ತಿರುಗಾಡುತ್ತಿರುವ ಫೋಟೋವನ್ನು ಹಾಕ್ಕೊಳ್ತಿದ್ದ. ಬಳಿಕ ನೋಡಿದರೆ, ಕಾರು ಆತನದ್ದಾಗಿರಲಿಲ್ಲ. ಬೇರೆಯವರ ಕಾರಿನಲ್ಲಿ ಕುಳಿತು ಫೋಟೋ ತೆಗೆದು ಮಹಿಳೆಯರನ್ನು ನಂಬಿಸುತ್ತಿದ್ದ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮುಂಬೈ, ಒಡಿಶಾ, ದೆಹಲಿ, ಪಂಜಾಬ್, ಕರ್ನಾಟಕ ಹೀಗೆ ಹಲವು ರಾಜ್ಯಗಳ ಮಹಿಳೆಯರು ಈತನ ವಂಚನೆಗೆ ಒಳಗಾಗಿದ್ದಾರೆ.
ಹೆಚ್ಚಾಗಿ ಒಂದು ನಗರದಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುತ್ತಿದ್ದ ಖಾನ್, ಅದರ ನಡುವೆಯೇ ಹುಡುಗಿಯರನ್ನು ಸಂಪರ್ಕಿಸಿ ವಿಡಿಯೋ ಕಾಲ್ ಮಾಡುತ್ತಿದ್ದ. ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದ. ಅವರಿಂದಲೇ ಹಣ ಪಡೆಯುತ್ತಿದ್ದ. ತನಗೆ ವರ್ಷಕ್ಕೆ 30ರಿಂದ 40 ಲಕ್ಷ ಆದಾಯ ಬರುತ್ತಿದೆ ಎಂದು ಹೇಳಿ ನಂಬಿಸುತ್ತಿದ್ದ. ತಸೀರ್ ಖಾನ್ ಗೆ ಮದುವೆಯಾಗಿದ್ದು ಮೂರು ವರ್ಷದ ಮಗಳಿದ್ದಾಳೆ. ತಂದೆ, ತಾಯಿಯೂ ಇದ್ದಾರೆ. ಆದರೆ ಮಹಿಳೆಯರ ಬಳಿ ತನಗೆ ಯಾರೂ ಸಂಬಂಧಿಕರಿಲ್ಲ. ಹೆತ್ತವರು ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಬಿಸಿನೆಸ್ ಮಾಡಿಕೊಂಡಿದ್ದೇನೆ ಎಂದು ಹೇಳಿ ಪುಂಗಿ ಊದುತ್ತಲೇ ಮಹಿಳೆಯರನ್ನು ಬಲೆಗೆ ಹಾಕ್ಕೊಳ್ತಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
A 35-year-old man was arrested for allegedly duping over 100 women from across the country of several lakh rupees on on the pretext of marriage, police said on Friday.Farhan Taseer Khan, currently residing in Odisha's Keonjhar district, was arrested from Paharganj in central Delhi based on the complaint filed by a woman doctor working at the All India Institute of Medical Sciences (AIIMS) in Delhi in March.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm