ಇನ್ಮುಂದೆ WhatsApp ನಲ್ಲೇ DL, PAN ಕಾರ್ಡ್ ಡೌನ್‌ಲೋಡ್ ಮಾಡಿ!..ಹೇಗೆ ಗೊತ್ತಾ?

24-05-22 04:38 pm       Source: Vijayakarnataka   ಡಿಜಿಟಲ್ ಟೆಕ್

WhatsApp ನಲ್ಲಿ MyGov ಹೆಲ್ಪ್‌ಡೆಸ್ಕ್ ಆಡಳಿತ ಮತ್ತು ಸರ್ಕಾರಿ ಸೇವೆಗಳು ನಾಗರಿಕರ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲು WhatsApp ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ...

ಭಾರತದಲ್ಲಿ WhatsApp ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಿಮಾ ಪಾಲಿಸಿಯಂತಹ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ MyGov ತನ್ನ WhatsApp ಚಾಟ್‌ಬಾಟ್‌ನಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಿದ್ದು, ಇದರ ಸಹಾಯದಿಂದ 'ಡಿಜಿಲಾಕರ್' ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣಪತ್ರದಂತಹ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡುವುದು ಸಾಧ್ಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಹಾಗಾದರೆ, ಬೆರಳ ತುದಿಯಲ್ಲೇ WhatsApp ಬಳಕೆದಾರರು ಸರ್ಕಾರಿ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

WhatsApp ನಲ್ಲಿ ದಾಖಲೆಗಳನ್ನು ಪಡೆಯುವುದು ಹೇಗೆ?
WhatsApp ನಲ್ಲಿ MyGov ಹೆಲ್ಪ್‌ಡೆಸ್ಕ್ ಆಡಳಿತ ಮತ್ತು ಸರ್ಕಾರಿ ಸೇವೆಗಳು ನಾಗರಿಕರ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲು WhatsApp ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ. ಈ ಸಹಾಯವಾಣಿ ಸಂಖ್ಯೆಯ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ WhatsApp ನಲ್ಲಿ ದಾಖಲೆಗಳನ್ನು ಪಡೆಯಬಹುದು. ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ನೀವು ಈಗಾಗಲೇ ಒಂದನ್ನು ಹೊಂದಿದ್ದರೆ, ದಾಖಲೆಗಳನ್ನು ಪಡೆಯುವುದು ಸುಲಭವಾಗುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವ ಕೆಲಸ ಇಲ್ಲಿದೆ.

Digilocker can now be accessed on WhatsApp; check details here -  BusinessToday

WhatsApp ನಲ್ಲಿ ದಾಖಲೆಗಳನ್ನು ಪಡೆಯಲು ಹೀಗೆ ಮಾಡಿ.
WhatsApp ನಲ್ಲಿ MyGov ಹೆಲ್ಪ್ ಡೆಸ್ಕ್ ಸಂಖ್ಯೆಗೆ (+91 9013151515) ಕೇವಲ 'ನಮಸ್ತೆ' ಅಥವಾ 'ಹಾಯ್' ಅಥವಾ 'ಡಿಜಿಲಾಕರ್'ಎಂದು ಸಂದೇಶವನ್ನು ಕಳುಹಿಸುವ ಮೂಲಕ ನೀವು ಸರ್ಕಾರಿ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಹೀಗೆ ಸಂದೇಶವನ್ನು ಕಳುಹಿಸಿದ ನಂತರ, “ನಿಮ್ಮ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಲು/ವಿತರಿಸಲು ಡಿಜಿಲಾಕರ್ ಸೇವೆಗಳಿಗೆ ಸುಸ್ವಾಗತ” ಎಂಬ ಪ್ರತಿಕ್ರಿಯೆಯನ್ನು ನೀವು ಪಡೆಯುತ್ತೀರಿ. ನಂತರ ನೀವು ಡಿಜಿಲಾಕರ್ ಖಾತೆ ಹೊಂದಿದ್ದೀರಾ ಎಂದು ಕೇಳಲಾಗುತ್ತದೆ.

ನೋಂದಾಯಿತ ಮೊಬೈಲ್ ಸಾಧನದಲ್ಲಿ ನೀವು OTP ಅನ್ನು ಪಡೆಯುತ್ತೀರಿ.
ನೀವು ಡಿಜಿಲಾಕರ್ ಖಾತೆ ಹೊಂದಿದ್ದೀರಾ ಎಂದು ಕೇಳಲಾಗುತ್ತದೆ. ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದರೆ, ಅದು ಬಳಕೆದಾರರಿಗೆ ಅವರ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ. ಒಮ್ಮೆ ನೀವು ಅದನ್ನು ಮಾಡಿದರೆ, ನಿಮ್ಮ ನೋಂದಾಯಿತ ಮೊಬೈಲ್ ಸಾಧನದಲ್ಲಿ ನೀವು OTP ಅನ್ನು ಪಡೆಯುತ್ತೀರಿ.-ಒಮ್ಮೆ ನೀವು OTP ಅನ್ನು ನಮೂದಿಸಿದರೆ, ನಿಮ್ಮ ಡಿಜಿಲಾಕರ್ ಖಾತೆಯಲ್ಲಿ ಲಭ್ಯವಿರುವ ಎಲ್ಲಾ ದಾಖಲೆಗಳು ಅಥವಾ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ನೀವು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

Digilocker feature made easy! The option of MyGov Helpdesk will be  available on WhatsApp, you will be able to use it like this. Zee Business -  Bizhunts

ಒಂದು ವೇಳೆ ನೀವು ಡಿಜಿಲಾಕರ್ ಖಾತೆ ಹೊಂದಿಲ್ಲದಿದ್ದರೆ?
WhatsApp ನಲ್ಲಿ MyGov ಚಾಟ್‌ಬಾಟ್, ಡಿಜಿಲಾಕರ್ ಸೇವೆಗಳನ್ನು ಸೇರಿಸುವ ಮೂಲಕ ಸಂಪನ್ಮೂಲಗಳು ಮತ್ತು ಅಗತ್ಯ ಸೇವೆಗಳನ್ನು ಪ್ರವೇಶಿಸಲು ನಾಗರಿಕರಿಗೆ ಸಮಗ್ರ ಆಡಳಿತಾತ್ಮಕ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಒಂದು ವೇಳೆ ನೀವು ಡಿಜಿಲಾಕರ್ ಖಾತೆಯನ್ನು ಹೊಂದಿಲ್ಲದಿದ್ದರೆ ಹೊಸದಾಗಿ ಖಾತೆಯನ್ನು ತೆರೆಯಲು ಡಿಜಿಲಾಕರ್ ತಾಣಕ್ಕೆ ಕೊಂಡೊಯ್ಯಲಾಗುತ್ತದೆ. ಇಲ್ಲಿ ನೀವು ಹೊಸ ಖಾತೆಯೊಂದನ್ನು ರಚಿಸುವ ಮೂಲಕ ನಿಮ್ಮ ಹೊಸ ಡಿಜಿಲಾಕರ್ ಅಔಂಟ್‌ಗೆ ಲಾಗಿನ್ ಆಗಬಹುದು.

WhatsApp ನಲ್ಲಿ ಯಾವೆಲ್ಲಾ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು?

  1. PAN ಕಾರ್ಡ್
  2. ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್)
  3. CBSE X ತರಗತಿಯ ಉತ್ತೀರ್ಣ ಪ್ರಮಾಣಪತ್ರ
  4. ವಾಹನ ನೋಂದಣಿ ಪ್ರಮಾಣಪತ್ರ (RC)
  5. ವಿಮಾ ಪಾಲಿಸಿ - ದ್ವಿಚಕ್ರ ವಾಹನ
  6. ಹತ್ತನೇ ತರಗತಿಯ ಮಾರ್ಕ್‌ಶೀಟ್
  7. ಹನ್ನೆರಡನೇ ತರಗತಿ ಮಾರ್ಕ್‌ಶೀಟ್
  8. ವಿಮಾ ಪಾಲಿಸಿ ಡಾಕ್ಯುಮೆಂಟ್

ಈ ಮೇಲಿನ ಎಲ್ಲಾ ದಾಖಲೆಗಳನ್ನು ನೀವು WhatsApp ನಲ್ಲಿ ಡಿಜಿಲಾಕರ್ ಸೇವೆಯ ಮೂಲಕ ಪಡೆದುಕೊಳ್ಳಬಹುದು.

Download Digilocker Documents Like Dl, Pan On Whatsapp.