ಬ್ರೇಕಿಂಗ್ ನ್ಯೂಸ್
24-05-22 08:57 pm Source: Vijayakarnataka ಡಿಜಿಟಲ್ ಟೆಕ್
ದೇಶದ ಜನತೆಗೆ ಮತ್ತೊಂದು ಬಿಗ್ ಶಾಕ್ ನೀಡಲು ಜನಪ್ರಿಯ ಟೆಲಿಕಾಂ ಸಂಸ್ಥೆ ಏರ್‌ಟೆಲ್ ಮುಂದಾಗಿದ್ದು, ಈ ವರ್ಷ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ.! 2022 ರಲ್ಲಿ ಮತ್ತೆ ತನ್ನ ಪ್ರೀಪೇಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಏರ್‌ಟೆಲ್ ಕಂಪನಿ ಸಿಇಒ ಗೋಪಾಲ್ ವಿಟ್ಟಲ್ ಅವರೇ ಖಚಿತಪಡಿಸಿದ್ದು, ಈ ಬಾರಿ ಪ್ರತಿ ಬಳಕೆದಾರರಿಗೆ (ARPU) ಸರಾಸರಿ ಆದಾಯವನ್ನು 200 ರೂ. ಗೆ ಏರಿಕೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸೂಚಿಸಿದ್ದಾರೆ. ಅಂದರೆ, 2022 ರಲ್ಲಿ ಏರ್‌ಟೆಲ್‌ನ ರೀಚಾರ್ಜ್ ಬೆಲೆಗಳು ಮತ್ತೆ ಶೇ. 25 ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಹೌದು, ಏರ್‌ಟೆಲ್ ಕಂಪನಿ ಸಿಇಒ ಗೋಪಾಲ್ ವಿಟ್ಟಲ್ ಅವರು ಮತ್ತೊಮ್ಮೆ ಬೆಲೆ ಏರಿಸುವ ಬಗ್ಗೆ ಮಾತನಾಡಿದ್ದಾರೆ. 2022 ರಲ್ಲಿ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ತುಂಬಾ ಹೆಚ್ಚಿಸಲಾಗುವ ಬಗ್ಗೆ ತಿಳಿಸಿರುವ ಅವರು, "ಈ ವರ್ಷದ ಅವಧಿಯಲ್ಲಿ ನಾವು ಕೆಲವು ಬೆಲೆ ಹೆಚ್ಚಳವನ್ನು ನೋಡಬೇಕು ಎಂಬುದು ನನ್ನ ಸ್ವಂತ ಅಭಿಪ್ರಾಯವಾಗಿದೆ. ಪ್ರಸ್ತುತ ನಾವು ಒದಗಿಸುತ್ತಿರುವ ಬೆಲೆಗಳು ಇನ್ನೂ ತುಂಬಾ ಕಡಿಮೆ ಎಂದು ನಾನು ನಂಬುತ್ತೇನೆ. ಮೊದಲು ARPU 200 ರೂ.ಗಳಿಗೆ ಹೆಚ್ಚಿಸಲು ಕನಿಷ್ಠ ಒಂದು ಸುತ್ತಿನ ಬೆಲೆ ಏರಿಕೆ ಅಗತ್ಯವಿರುತ್ತದೆ." ಎಂದು ವಿಟ್ಟಲ್ ಬೆಲೆ ಹೆಚ್ಚಿಸುವ ಬಗ್ಗೆ ಹೇಳಿದ್ದಾರೆ. ಇಷ್ಟೇ ಅಲ್ಲದೇ ಈ ಕ್ರಮವು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏನಿದು ARPU?
ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಪಡೆಯುವುದನ್ನು ARPU(Average revenue per user) ಎಂದು ಕರೆಯಲಾಗುತ್ತದೆ. ARPU ಎಂಬುದು ಗ್ರಾಹಕ ಸಂವಹನ, ಡಿಜಿಟಲ್ ಮಾಧ್ಯಮ ಮತ್ತು ನೆಟ್‌ವರ್ಕಿಂಗ್ ಕಂಪನಿಗಳಿಂದ ಬಳಸಲಾಗುವ ಅಳತೆಯಾಗಿದೆ, ಒಟ್ಟು ಆದಾಯವನ್ನು ಚಂದಾದಾರರ ಸಂಖ್ಯೆಯಿಂದ ಭಾಗಿಸಿದಾಗ ARPU ಲಭ್ಯವಾಗುತ್ತದೆ. ಪ್ರಸ್ತುತ ಏರ್‌ಟೆಲ್ ಪ್ರತಿ ಬಳಕೆದಾರರಿಂದ 150 ರೂ.ಗಳಷ್ಟು ಸರಾಸರಿ ಆದಾಯವನ್ನು ಪಡೆಯುತ್ತಿದೆ. 2022 ರಲ್ಲಿ ಇದನ್ನು 200 ರೂ. ಗೆ ಏರಿಕೆ ಮಾಡುವ ಉದ್ದೇಶವನ್ನು ಏರ್‌ಟೆಲ್ ಹೊಂದಿದ್ದು, ಏರ್‌ಟೆಲ್‌ನ ರೀಚಾರ್ಜ್ ಬೆಲೆಗಳು ಮತ್ತೆ ಶೇ. 25 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದೇಶದ ಜನತೆಗೆ ಸಂಕಷ್ಟ ಏಕೆ?
ಕಳೆದ ವರ್ಷವಷ್ಟೇ ಏರ್‌ಟೆಲ್ ತನ್ನ ಪ್ರೀಪೇಡ್ ಯೋಜನೆಗಳ ಬೆಲೆಗಳನ್ನು ಏರಿಸಿತ್ತು. ಇದಾದ ನಂತರ ವೊಡಾಫೋನ್ ಐಡಿಯಾ, ರಿಲಯನ್ಸ್ ಜಿಯೋ ಕಂಪನಿಗಳು ಸಹ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ್ದವು. ಇದೀಗ ಮತ್ತೊಮ್ಮೆ ಏರ್‌ಟೆಲ್ ತನ್ನ ಬೆಲೆಗಳನ್ನು ಏರಿಕೆ ಮಾಡಲು ಮುಂದಾಗಿದೆ. ಏರ್‌ಟೆಲ್‌ನ ಈ ನಡೆಯು ಇತರೆ ಖಾಸಗಿ ಟೆಲಿಕಾಂಗಳ ಮೇಲೆ ಪ್ರಭಾವ ಬೀರಬಹುದು. ಅವುಗಳು ಸಹ ಬೆಲೆ ಏರಿಕೆಗೆ ಮುಂದಾಗಬಹುದು. ಇದರಿಂದ ಏರ್‌ಟೆಲ್ ಗ್ರಾಹಕರು ಮಾತ್ರವಲ್ಲದೇ ದೇಶದ ಜನರು ಟೆಲಿಕಾಂ ಸೇವೆಗಳಿಗೆ ಹೆಚ್ಚು ಪಾವತಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಇದು ಸಂಕಷ್ಟವಲ್ಲದೇ ಮತ್ತಿನ್ನೇನು.?
ಕಳೆದ ನವೆಂಬರ್ 2021ರಲ್ಲಿ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು 18 ರಿಂದ 25 ಪ್ರತಿಶತದಷ್ಟು ಹೆಚ್ಚಿಸಿತ್ತು. ಇದಾದ ನಂತರ ಏರ್‌ಟೆಲ್ ಅನ್ನು ಹಿಂಬಾಲಿಸಿದ ವೊಡಾಫೋನ್ ಐಡಿಯಾ ಕಂಪೆನಿ ಕೂಡ ತನ್ನ ಬೆಲೆಗಳನ್ನು 18 ರಿಂದ 25 ಪ್ರತಿಶತದಷ್ಟು ಪರಿಷ್ಕರಿಸಿತ್ತು, ಇದೇ ವೇಳೆ ಗ್ರಾಹಕರ ನಿರೀಕ್ಷೆಯನ್ನು ಹುಸಿಗೊಳಿಸಿದ ರಿಲಯನ್ಸ್ ಜಿಯೋ ಕೂಡ ತನ್ನ ಪ್ರೀಪೇಡ್ ಯೋಜನೆಗಳ ಬೆಲೆಗಳನ್ನು ಶೇ. 20 ರಷ್ಟು ಹೆಚ್ಚಿಸಿತ್ತು.
Airtel Can Give A Big Blow Anytime, Ceo Gopal Vittal Said Something Surprising.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am