ಬ್ರೇಕಿಂಗ್ ನ್ಯೂಸ್
25-05-22 08:14 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Redmi ತನ್ನ ನೂತನ Redmi Note 11T Pro ಮತ್ತು Redmi Note 11T Pro+ ಸ್ಮಾರ್ಟ್‌ಫೋನ್‌ಗಳನ್ನು ಚೀನಾದ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದೇ ಮಂಗಳವಾರದಂದು Redmi ಆಯೋಜಿಸಿದ್ದ ಸಮಾರಂಭದಲ್ಲಿ ನೂತನ Redmi Note 11T Pro ಮತ್ತು Redmi Note 11T Pro+ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, 144Hz ಡಿಸ್‌ಪ್ಲೇ, ಆಕ್ಟಾ-ಕೋರ್ MediaTek ಡೈಮೆನ್ಸಿಟಿ 8100 SoC ಪ್ರೊಸೆಸರ್ ಮತ್ತು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ವೈಶಿಷ್ಟ್ಯಗಳೊಂದಿಗೆ ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ಚೀನಾದಲ್ಲಿ ಅತ್ಯಂತ ಯೋಗ್ಯ ಬೆಲೆಗಳಲ್ಲಿ ಬಿಡುಗಡೆ ಕಂಡಿರುವ ನೂತನ Redmi Note 11T Pro ಮತ್ತು Redmi Note 11T Pro+ ಎರಡು ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಎಲ್ಲಾ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
Redmi Note 11T Pro+ ವಿಶೇಷಣಗಳು
ನೂತನ Redmi Note 11T Pro+ ಸ್ಮಾರ್ಟ್‌ಫೋನ್ 144Hz ರಿಫ್ರೆಶ್ ರೇಟ್ ಮತ್ತು 270Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.6-ಇಂಚಿನ (2,460x1,080 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊತ್ತು ಬಂದಿದೆ. 20.5:9 ಅನುಪಾತದಲ್ಲಿರುವ ಈ ಡಿಸ್‌ಪ್ಲೇಯು ಡಾಲ್ಬಿ ವಿಷನ್, HDR10 ಬೆಂಬಲ ಮತ್ತು DCI-P3 ಕಲರ್ ಗ್ಯಾಮೆಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಮೊದಲೇ ಹೇಳಿದಂತೆ, ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ಪ್ರೊಸೆಸರ್ ಅನ್ನು ಹೊಂದಿದೆ. ಹಾಗೂ ಜೊತೆಗೆ ಉಷ್ಣ ನಿರ್ವಹಣೆಗಾಗಿ ಆವಿ ಕೂಲಿಂಗ್ (VC) ಚೇಂಬರ್ ಅನ್ನು ಸಹ ನೀಡಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, Redmi Note 11T Pro+ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದ್ದು, ಇದು 64-ಮೆಗಾಪಿಕ್ಸೆಲ್ Samsung ISOCELL GW1 ಪ್ರಾಥಮಿಕ ಸಂವೇದಕವನ್ನು ಹೊಂದಿದೆ.
Redmi Note 11T Pro+ ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS, NFC, USB Type-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯಗಳು ಸೇರಿವೆ. 4,400mAh ಸಿಂಗಲ್-ಸೆಲ್ ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸುರಕ್ಷಿತ ವೇಗದ ಚಾರ್ಜಿಂಗ್ ಅನುಭವವನ್ನು ಸಕ್ರಿಯಗೊಳಿಸಲು ಫೋನ್‌ನಲ್ಲಿ ಮೀಸಲಾದ ಸರ್ಜ್ ಪ್ರೊಟೆಕ್ಷನ್ ಚಿಪ್ ಅನ್ನು ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. Redmi Note 11T Pro+ ಸ್ಮಾರ್ಟ್‌ಫೋನ್ 512GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆ ಹೊಂದಿದ್ದು ಆಂಡ್ರಾಯ್ಡ್-ಆಧಾರಿತ MIUI 13 ಅನ್ನು ರನ್ ಮಾಡುತ್ತದೆ ಮತ್ತು ಈ ಫೋನ್ Dolby Atmos ಬೆಂಬಲಿತವಾದ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬಿಡುಗಡೆಯಾಗಿದೆ.
Redmi Note 11T Pro ವಿಶೇಷಣಗಳು
Redmi Note 11T Pro ಸ್ಮಾರ್ಟ್‌ಫೋನ್ ಕೂಡ Redmi Note 11T Pro+ ನಲ್ಲಿ ಲಭ್ಯವಿರುವ ಅದೇ 6.6-ಇಂಚಿನ ಡಿಸ್‌ಪ್ಲೇ , MediaTek ಡೈಮೆನ್ಸಿಟಿ 8100 SoC ಪ್ರೊಸೆಸರ್ ಹೊಂದಿದೆ. ಮತ್ತು 64-ಮೆಗಾಪಿಕ್ಸೆಲ್ ISOCELL GW1 ಪ್ರಾಥಮಿಕ ಸಂವೇದಕವನ್ನು ಹೊಂದಿರುವ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸುವ ಒಂದು ಪ್ರಮುಖ ವ್ಯತ್ಯಾಸದ ಭಾಗದಲ್ಲಿ, Redmi Note 11T Pro 5,080mAh ಬ್ಯಾಟರಿಯನ್ನು ಹೊಂದಿದ್ದು, ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಸ್ಪೀಕರ್, ಕನೆಕ್ಟಿವಿಟಿ ಆಯ್ಕೆಗಳು ಮತ್ತು ಓಎಸ್ ಸೇರಿದಂತೆ ಇನ್ನಿತರ ಎಲ್ಲಾ ವೈಶಿಷ್ಟ್ಯಗಳು ಸಹ Redmi Note 11T Pro+ ನಂತೆಯೇ Redmi Note 11T Pro ಸ್ಮಾರ್ಟ್‌ಫೋನಿನಲ್ಲೂ ನೀಡಿರುವುದನ್ನು ನಾವು ಗಮನಿಸಬಹುದು.
Redmi Note 11T Pro ಮತ್ತು Redmi Note 11T Pro+ ಬೆಲೆಗಳು
Redmi Note 11T Pro+ ಬೇಸ್ 8GB RAM + 128GB ಸ್ಟೋರೇಜ್ ಮಾದರಿಯ ಸ್ಮಾರ್ಟ್‌ಫೋನ್ CNY 2,099 (ಸುಮಾರು ರೂ. 24,400) ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ 8GB + 256GB ಆಯ್ಕೆಯಲ್ಲಿಯೂ ಸಹ ಬಿಡುಗಡೆಯಾಗಿದ್ದು, ಇದು CNY 2,299 (ಸುಮಾರು ರೂ. 26,800) ಬೆಲೆಯಲ್ಲಿ ಹಾಗೂ ಟಾಪ್-ಆಫ್-ಲೈನ್ 8GB + 512GB ಮಾಡೆಲ್ CNY 2,499 (ಸುಮಾರು ರೂ. 29,100) ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.
ಇತ್ತ Redmi Note 11T Pro ಬೇಸ್ 6GB + 128GB ಮಾದರಿಗೆ CNY 1,799 (ಸುಮಾರು ರೂ. 20,900) ಬೆಲೆಯನ್ನು ನಿಗದಿಪಡಿಸಲಾಗಿದೆ. 8GB + 128GB ಆಯ್ಕೆ ಫೋನ್ CNY 1,899 (ಸುಮಾರು ರೂ. 23,300) ಬೆಲೆಯಲ್ಲಿ ಮತ್ತು ಟಾಪ್-ಎಂಡ್ 8GB + 256GB ಮಾದರಿಯು CNY 2,099 (ಸುಮಾರು ರೂ. 25,600) ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಎರಡೂ ಫೋನ್‌ಗಳು ಅಟಾಮಿಕ್ ಸಿಲ್ವರ್, ಮಿಡ್‌ನೈಟ್ ಡಾರ್ಕ್‌ನೆಸ್ ಮತ್ತು ಟೈಮ್ ಬ್ಲೂ ಶೇಡ್ ಬಣ್ಣಗಳಲ್ಲಿ ಲಭ್ಯವಿರಲಿವೆ.
Redmi Note 11t Pro And Redmi Note 11t Pro Smartphones Launched Price, Specifications.
27-02-25 05:50 pm
HK News Desk
Forest Fire, Kanakapura, Bangalore: ಒಣಹುಲ್ಲು...
27-02-25 05:48 pm
ಕುಂಭಮೇಳಕ್ಕೆ ಹೋಗಿರೋದು ತಪ್ಪಾದ್ರೆ ಡಿಕೆಶಿ ಅವರನ್ನು...
27-02-25 03:28 pm
DK Shivakumar, BJP, Amit Shah, congress: ಡಿಕೆ...
27-02-25 01:46 pm
ಸಿಎಂಗೆ ಕ್ಲೀನ್ ಚಿಟ್ ಕೊಟ್ಟರೂ, ಮುಡಾ ಹಗರಣದ ಬಗ್ಗೆ...
26-02-25 10:43 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
27-02-25 07:09 pm
Mangalore Correspondent
PUC student Missing, Farangipete: ಪಿಯುಸಿ ವಿದ್...
27-02-25 03:11 pm
Missing, Mangalore, Konaje police: ಕೋಣಾಜೆಯ ಯು...
26-02-25 10:15 pm
Mangaluru-Kabaka Train, Brijesh Chowta: ಮಂಗಳೂ...
26-02-25 03:40 pm
Urwa Police, Mangalore, Selfie, Suspend: ಸೈಬರ...
25-02-25 10:58 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm