ಬ್ರೇಕಿಂಗ್ ನ್ಯೂಸ್
01-06-22 06:09 pm Sources: Oneindia ಡಿಜಿಟಲ್ ಟೆಕ್
ಬೆಂಗಳೂರು, ಜೂ. 1: ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಆಧಾರ್ ಕಾರ್ಡ್ ಮತ್ತು ನಂಬರ್ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ. ಮೊನ್ನೆ ಯುಐಡಿಎಐನ (UIDAI- Unique Identification Authority of India) ಬೆಂಗಳೂರು ಕಚೇರಿಯಿಂದ ಒಂದು ಸಲಹೆ ಪ್ರಕಟಗೊಂಡಿದ್ದು ಗಮನ ಸೆಳೆದಿತ್ತು. ಹೋಟೆಲ್‌ನಲ್ಲಾಗಲೀ ಚಿತ್ರಮಂದಿರಗಳಲ್ಲಾಗಲೀ ಅಥವಾ ಆಧಾರ್ ಬಳಸಲು ಪರವಾನಿಗೆ ಪಡೆಯದಿರುವ ಯಾರೇ ಆಗಲೀ ಆಧಾರ್ ಕಾರ್ಡ್ ನಕಲುಪ್ರತಿ ಅಥವಾ ನಂಬರ್ ಕೇಳಿದರೆ ಕೊಡಬೇಡಿ ಎಂದು ಅದು ಸಲಹೆ ಕೊಟ್ಟಿತ್ತು. ಇದು ಜನರನ್ನು ಆತಂಕ ಮತ್ತು ಗೊಂದಲಕ್ಕೆ ದೂಡಿದ್ದಂತೂ ಹೌದು.
ಅದಾದ ಬೆನ್ನಲ್ಲೇ ಯುಐಡಿಎಐ ತನ್ನ ಸಲಹೆಯನ್ನು ವಾಪಸ್ ಪಡೆಯಿತು. ಆಧಾರ್ ಸುರಕ್ಷಿತವಾಗಿದೆ, ಅದರೆ, ಜಾಗ್ರತೆಯಿಂದ ಬಳಸಿ ಎಂದು ಮತ್ತೊಮ್ಮೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಂತೂ ಹೌದು.
ಹಾಗಾದರೆ ಆಧಾರ್ ಕಾರ್ಡ್ ಅನ್ನು ಹುಷಾರಾಗಿ ಬಳಸಬೇಕೆಂದರೆ ಹೇಗೆ ಬಳಸಬೇಕು, ಎಲ್ಲೆಲ್ಲಿ ಬಳಸಬೇಕು, ಎಲ್ಲೆಲ್ಲಿ ಬಳಸಬಾರದು ಎಂಬುದು ಜನಸಾಮಾನ್ಯರಿಗೆ ಸ್ಪಷ್ಟ ಅರಿವು ಇರಬೇಕಾದ್ದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮದು ಕೆಲ ಮೂಲಭೂತವೆನಿಸುವ ಮತ್ತು ಉಪಯುಕ್ತವೆನಿಸುವ ಸಲಹೆಗಳು ಇಲ್ಲಿವೆ.
ಸಬ್ಸಿಡಿಗೆ ಬೇಕು ಆಧಾರ್ ಅಧಾರ್
ಕಾರ್ಡ್ ಸದ್ಯ ಹೆಚ್ಚು ಉಪಯೋಗ ಆಗುತ್ತಿರುವುದು ಸರಕಾರಿ ಪ್ರಾಯೋಜನೆಯ ಯೋಜನೆಗಳ ಅನುಷ್ಠಾನದಲ್ಲಿ. ಸರಕಾರದ ಸಬ್ಸಿಡಿ ಸ್ಕೀಮ್‌ನಲ್ಲಿ ವಂಚನೆಯನ್ನು, ಡೂಪ್ಲಿಕೇಟ್ ಎಂಟ್ರಿಗಳನ್ನು ತಡೆಯಲು ಆಧಾರ್ ಬಹಳ ಮಹತ್ವ ಪಾತ್ರ ವಹಿಸುತ್ತದೆ. ಹೀಗಾಗಿ, ನೀವು ಯಾವ ಬ್ಯಾಂಕಿನ ಖಾತೆಗೆ ಸರಕಾರದ ಸಬ್ಸಿಡಿ ಹಣ ಬರಬೇಕೆಂದುಕೊಂಡಿದ್ದೀರೋ ಆ ಬ್ಯಾಂಕಿನ ಖಾತೆ ನಿಮ್ಮ ಆಧಾರ್ ನಂಬರ್ ಜೋಡಿಸುವುದು ಕಡ್ಡಾಯ. ಅಂದರೆ ಜನಧನ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಕೊಡುವುದು ಕಾನೂನಿನ ಅಗತ್ಯವಾಗಿರುತ್ತದೆ. ಅದು ಬಿಟ್ಟರೆ ಬೇರೆ ಬೇರೆ ಸಾಮಾನ್ಯ ಬ್ಯಾಂಕ್ ಅಕೌಂಟ್‌ಗಳಿಗೆ ನೀವು ಆಧಾರ್ ನಂಬರ್ ಕೊಡಲೇಬೇಕೆಂದಿಲ್ಲ. ನಿಮ್ಮಲ್ಲಿ ಬೇರೆ ಗುರುತು ದಾಖಲೆಗಳಿದ್ದರೆ, ಉದಾಹರಣೆಗೆ ವೋಟರ್ ಐಡಿ, ಪಾಸ್‌ಪೋರ್ಟ್ ಇತ್ಯಾದಿ ಇದ್ದರೆ ಅದನ್ನು ಕೊಡಬಹುದು.
ಮಾಸ್ಕ್ಡ್ ಆಧಾರ್
ನಿಮಗೆ ಆಧಾರ್ ಬಿಟ್ಟರೆ ಬೇರೆ ಗುರುತು ದಾಖಲೆಗಳು ಇಲ್ಲದ ಪಕ್ಷದಲ್ಲಿ ಮಾಸ್ಕ್ಡ್ ಆಧಾರ್ ಮತ್ತು ವರ್ಚುವಲ್ ಐಡಿಯನ್ನು ಸೃಷ್ಟಿಸಿ ಸಲ್ಲಿಸಬಹುದಾಗಿದೆ. ಮಾಸ್ಕ್ಡ್ ಆಧಾರ್ (Masked Aadhaar) ಎಂದರೆ ಕೆಲ ಮಾಹಿತಿಯನ್ನು ಮಸುಕು ಮಾಡಿ ನೀಡಲಾಗುವ ಕಾರ್ಡ್. ಮಾಮೂಲಿಯ ಆಧಾರ್ ಕಾರ್ಡ್‌ನಲ್ಲಿ ಪೂರ್ಣ 12 ಅಂಕಿಗಳು ಗೋಚರವಾಗಿರುತ್ತವೆ. ಆದರೆ, ಮಾಸ್ಕ್ಡ್ ಆಧಾರ್ ಕಾರ್ಡ್‌ನಲ್ಲಿ ಕೊನೆಯ ನಾಲ್ಕಂಕಿಗಳು ಮಾತ್ರ ಕಾಣುತ್ತವೆ. ಉಳಿದ ಅಂಕಿಗಳನ್ನು ಮಸುಕು ಮಾಡಲಾಗಿರುತ್ತದೆ. ನೀವು ಮೈ ಆಧಾರ್ ವೆಬ್‌ಸೈಟ್ https://myaadhaar.uidai.gov.in ಗೆ ಹೋಗಿ ಆನ್‌ಲೈನ್‌ನಲ್ಲೇ ಮಾಸ್ಕ್ಡ್ ಆಧಾರ್ ಕಾರ್ಡ್ ಪಡೆಯಬಹುದು.
ವರ್ಚುಯಲ್ ಐಡಿ
ಮಾಸ್ಕ್ಡ್ ಆಧಾರ್‌ನಂತೆ ವರ್ಚುವಲ್ ಐಡಿಯನ್ನೂ (Virtual ID) ಆಧಾರ್ ನಂಬರ್‌ನಂತೆ ಬಳಸಬಹುದು. ಇದನ್ನೂ ನೀವು ಮೈ ಆಧಾರ್ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಈ ತಾಣದ ಹೋಂ ಪೇಜ್‌ನಲ್ಲೇ ವಿಐಡಿ ಜನರೇಟರ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮಗೆ ಮುಂದಿನ ಮಾರ್ಗದರ್ಶನ ಸಿಗುತ್ತದೆ. ಅಥವಾ 1947 ನಂಬರ್‌ಗೆ ನೀವು ಜಿವಿಐಡಿ ಸ್ಪೇಸ್ ಮತ್ತು ನಿಮ್ಮ ಆಧಾರ್ ನಂಬರ್‌ನ ಕೊನೆಯ ನಾಲ್ಕು ಅಂಕಿಗಳನ್ನು ಟೈಪ್ ಮಾಡಿ ಮೆಸೇಜ್ ಕಳುಹಿಸಬಹುದು. ಉದಾಹರಣೆಗೆ "GVID 6789" ಎಂದು ಟೈಪ್ ಮಾಡಿ 1947 ನಂಬರ್‌ಗೆ ಎಸ್ಸೆಮ್ಮೆಸ್ ಕಳುಹಿಸಬಹುದು. ಇಲ್ಲಿ 6789 ನಿಮ್ಮ ಆಧಾರ್ ನಂಬರ್‌ನ ಕೊನೆಯ ನಾಲ್ಕು ಅಂಕಿಗಳಾಗಿರುತ್ತವೆ. ಆಗ ನಿಮಗೆ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ 16 ಅಂಕಿಗಳ ವರ್ಚುಯಲ್ ಐಡಿ ನಂಬರ್ ಸಿಗುತ್ತದೆ. ಇದು ತಾತ್ಕಾಲಿಕ ಐಡಿಯಾದರೂ ನಿಮ್ಮ ಮೂಲ ಆಧಾರ್ ನಂಬರ್ ಬದಲು ಇದನ್ನೇ ಅಧಿಕೃತ ದಾಖಲೆಯಾಗಿ ನೀಡಬಹುದು.
ಆಧಾರ್ ದುರ್ಬಳಕೆ ಆಗಲ್ಲ ಎನ್ನುತ್ತೆ ಯುಐಡಿಎಐ
ಆಧಾರ್ ಕಾರ್ಡ್ ಹಾಗೂ ಅದರಲ್ಲಿರುವ ಎಲ್ಲಾ ಮಾಹಿತಿ ಸಂಪೂರ್ಣ ಸುರಕ್ಷಿತ. ಇದರಲ್ಲಿರುವ ಆಧಾರ್ ನಂಬರ್ ಅನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಯುಐಡಿಎಐ ಹೇಳುತ್ತದೆ. ಆಧಾರ್ ಕಾರ್ಡ್‌ನಲ್ಲಿ ಸೂಕ್ಷ್ಮ ಸಂಗತಿ ಇರುವುದು ಫಿಂಗರ್ ಪ್ರಿಂಟ್‌ನಂತಹ ಬಯೋಮೆಟ್ರಿಕ್ ದತ್ತಾಂಶ. ಕೆಲವೇ ನಿರ್ದಿಷ್ಟ ಸಂಸ್ಥೆಗಳಿಗೆ ಆಧಾರ್ ಕಾರ್ಡ್ ಸರ್ವರ್‌ನ ಪ್ರವೇಶ ಅವಕಾಶ ಕೊಡಲಾಗಿದೆ. ಸ್ವಲ್ಪವೂ ದುರ್ಬಳಕೆ ಆಗದ ರೀತಿಯಲ್ಲಿ ಭದ್ರತಾ ಎಳೆಗಳು ಆಧಾರ್‌ಗೆ ಸುರಕ್ಷತೆ ಒದಗಿಸಿವೆ ಎನ್ನಲಾಗಿದೆ. ಇಲ್ಲಿ ಆಧಾರ್ ಜೊತೆ ಜೋಡಿಸಲಾಗಿರುವ ಮೊಬೈಲ್ ನಂಬರ್ ಬಹಳ ಮುಖ್ಯ. ಆಧಾರ್ ಕಾರ್ಡ್‌ನಲ್ಲಿ ಏನೇ ಬದಲಾವಣೆ ಮಾಡಬೇಕೆಂದರೂ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ಸಂದೇಶದ ಮೂಲಕವೇ ಆಗುವುದು. ಆಧಾರ್ ಸಂಸ್ಥೆ ಹೇಳುವ ಪ್ರಕಾರ ದಿನವೂ ಮೂರು ಕೋಟಿಯಷ್ಟು ಆಧಾರ್ ವೆರಿಫಿಕೇಶನ್‌ಗಳು ನಡೆಯುತ್ತೆ. ಆದರೆ, ಒಮ್ಮೆಯೂ ಕೂಡ ದುರ್ಬಳಕೆ ಆದ ಬಗ್ಗೆ ದೂರು ಬಂದಿಲ್ಲವಂತೆ.
Know where to use, where and how to use Aadhaar cards.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am