ಭಾರತದಲ್ಲಿ ಬಹುನಿರೀಕ್ಷಿತ Oppo K10 5G ಸ್ಮಾರ್ಟ್‌ಫೋನ್ ಬಿಡುಗಡೆ!

09-06-22 07:50 pm       Source: Vijayakarnataka   ಡಿಜಿಟಲ್ ಟೆಕ್

Oppo K10 5G ಸ್ಮಾರ್ಟ್‌ಫೋನಿನಲ್ಲಿ 33W SUPERVOOC ತಂತ್ರಜ್ಞಾನವನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಆಪ್ಟಿಮೈಸ್ಡ್ ನೈಟ್ ಚಾರ್ಜಿಂಗ್, ಪೋಸ್ಟ್ ಆಂಟಿ-ಬರ್ನ್ ಪ್ರೊಟೆಕ್ಷನ್, ಚಾರ್ಜಿಂಗ್ ಓವರ್-ಟೆಂಪರೇಚರ್ ಕಂಟ್ರೋಲ್ ರಿವರ್ಸ್ ಚಾರ್ಜಿಂಗ್ ಮತ್ತು AI ಪವರ್ ಸೇವಿಂಗ್ ಮೋಡ್ ವೈಶಿಷ್ಟ್ಯಗಳನ್ನು ಹೊಂದಿದೆ...

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒಪ್ಪೊ ತನ್ನ ಬಹುನಿರೀಕ್ಷಿತ Oppo K10 5G ಸ್ಮಾರ್ಟ್‌ಫೋನನ್ನು ಭಾರತದಲ್ಲಿಂದು ಬಿಡುಗಡೆಗೊಳಿಸಿದೆ. ಮಧ್ಯಮ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಪೋನ್ ಹುಡುಕುತ್ತಿರವ ಜನರನ್ನು ಗುರಿಯಾಗಿಸಿಕೊಂಡು Oppo K10 5G ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದ್ದು, MediaTek Dimensity 810 5G ಪ್ರೊಸೆಸರ್, 48MP ಸಾಮರ್ಥ್ಯದ ಡ್ಯುಯಲ್ ಕ್ಯಾಮೆರಾ, 6.56-ಇಂಚಿನ HD+ LCD ಡಿಸ್ಪ್ಲೇ ವೈಶಿಷ್ಟ್ಯಗಳಲ್ಲಿ ಎಂಟ್ರಿ ನೀಡಿದೆ. ದೇಶದಲ್ಲಿ ಒಂದೇ 8GB RAM ಮತ್ತು 128GB ಆಂತರಿಕ ಮೆಮೊರಿಮಾದರಿಯಲ್ಲಿ Oppo K10 5G ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದ್ದು, ಒಪ್ಪೊ ಕಂಪೆನಿಯ ಈ ನೂತನ ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಹಾಗೂ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

Oppo K10 5G ಸ್ಮಾರ್ಟ್‌ಪೋನಿನ ವೈಶಿಷ್ಟ್ಯಗಳು.
ನೂತನ Oppo K10 5G ಸ್ಮಾರ್ಟ್‌ಫೋನ್ 6.56-ಇಂಚಿನ HD+ (720 X 1612 ಪಿಕ್ಸೆಲ್ಸ್) ಡಿಸ್‌ಪ್ಲೇಯನ್ನು ನೀಡಲಾಗಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 100 ಪ್ರತಿಶತ DCI-P3 ಹೈ ಕಲರ್ ಗ್ಯಾಮಟ್ ವೈಶಿಷ್ಟ್ಯಗಳನ್ನು ಹೊಂದಿದೆ ಮಾತ್ರವಲ್ಲದೇ, 'AI ಐ ಕಂಫರ್ಟ್ ಮೋಡ್' ಅನ್ನು ಸಹ ಬೆಂಬಲಿಸಲಿದೆ, ಈ ವೈಶಿಷ್ಟ್ಯವು ಬೆಳಕಿಗೆ ತಕ್ಕಂತೆ ಫೋನಿನ ಪ್ರದರ್ಶನದ ಹೊಳಪನ್ನು ಹೆಚ್ಚಿಸುತ್ತದೆ ಅಥವಾ ಮಂದಗೊಳಿಸುತ್ತದೆ. ಹುಡ್ ಅಡಿಯಲ್ಲಿ, ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ನಿಂದ ಚಾಲಿತವಾಗಿರುವ Oppo K10 5G ಸ್ಮಾರ್ಟ್‌ಫೋನ್ 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇನ್ನು ಆಂತರಿಕ ಮೆಮೊರಿಯನ್ನು ಬಳಸಿಕೊಂಡು ಹೆಚ್ಚುವರಿ 5GB ವರೆಗೆ RAM ಅನ್ನು ವಿಸ್ತರಿಸಿಕೊಳ್ಳುವ ಸಾಮರ್ಥ್ಯವನ್ನು ಸಹ ಈ ಸ್ಮಾರ್ಟ್‌ಫೋನಿನಲ್ಲಿ ತರಲಾಗಿದೆ.

Oppo K10 5G India launch on June 8; to be slimmest 5G phone in its segment  | The Financial Express

ಫೋಟೊಗಳು ಮತ್ತು ವಿಡಿಯೋಗಳಿಗಾಗಿ, Oppo K10 5G ಸ್ಮಾರ್ಟ್‌ಫೋನಿನಲ್ಲಿ 48-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹೊಂದಿರುವ AI ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ತರಲಾಗಿದೆ. ಇದು 48-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮರಾ (f/2.4)ಗಳನ್ನು ಒಳಗೊಂಡಿದ್ದು, ಕಪ್ಪು ಪರಿಸರದಲ್ಲಿ ಉತ್ತಮ ಚಿತ್ರಗಳನ್ನು ಕ್ಲಿಕ್ ಮಾಡಲು ಬಳಕೆದಾರರಿಗೆ ಅಲ್ಟ್ರಾ ನೈಟ್ ಮೋಡ್ ಮತ್ತು ಪೋರ್ಟ್ರೇಟ್ ಮೋಡ್‌ಗಳನ್ನು ಕ್ಯಾಮೆರಾದಲ್ಲಿ ಸಜ್ಜುಗೊಳಿಸಲಾಗಿದೆ. ಇದರ ಹಿಂಭಾಗದ ಫಲಕವು ಗಾಜಿನ ಮತ್ತು ಮ್ಯಾಟ್ ವಿನ್ಯಾಸವನ್ನು ಹೊಂದಿರುವುದನ್ನು ನಾವು ಗಮನಿಸಬಹುದು. ಹಾಗೆಯೇ, Oppo K10 5G ಸ್ಮಾರ್ಟ್‌ಫೋನಿನ ಮುಂಭಾದಲ್ಲಿ 8-ಮೆಗಾಪಿಕ್ಸೆಲ್ (f/2.0) ಸೆಲ್ಫಿ ಕ್ಯಾಮೆರಾಟವನ್ನು ಅಳವಡಿಸಲಾಗಿದ್ದು, ಇದು AI ಪೋರ್ಟ್ರೇಟ್ ರಿಟೌಚಿಂಗ್ ವೈಶಿಷ್ಟ್ಯವನ್ನು ಹೊಂದಿದೆ.

The Oppo K10 5G phone arrives in India at Rs 17,499 with some impeccable  features Oppo K10 5G Launched In India, Price, Specifications All You Need  To Know LNU News | LNU News

Oppo K10 5G ಸ್ಮಾರ್ಟ್‌ಫೋನಿನಲ್ಲಿ 33W SUPERVOOC ತಂತ್ರಜ್ಞಾನವನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಆಪ್ಟಿಮೈಸ್ಡ್ ನೈಟ್ ಚಾರ್ಜಿಂಗ್, ಪೋಸ್ಟ್ ಆಂಟಿ-ಬರ್ನ್ ಪ್ರೊಟೆಕ್ಷನ್, ಚಾರ್ಜಿಂಗ್ ಓವರ್-ಟೆಂಪರೇಚರ್ ಕಂಟ್ರೋಲ್ ರಿವರ್ಸ್ ಚಾರ್ಜಿಂಗ್ ಮತ್ತು AI ಪವರ್ ಸೇವಿಂಗ್ ಮೋಡ್ ವೈಶಿಷ್ಟ್ಯಗಳನ್ನು ಹೊಂದಿದೆ. Oppo K10 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಧಾರಿತ ColorOS 12.1 ನಲ್ಲಿ ಬ್ಯಾಕ್‌ಗ್ರೌಂಡ್ ಸ್ಟ್ರೀಮ್, ಫ್ಲೆಕ್ಸ್‌ಡ್ರಾಪ್, ಸ್ಮಾರ್ಟ್ ಸ್ಲೈಡ್ ಬಾರ್ ಮತ್ತು ಗೂಗಲ್ ಲೆನ್ಸ್‌ನೊಂದಿಗೆ ಮೂರು-ಫಿಂಗರ್ ಅನುವಾದದಂತಹ ವೈಶಿಷ್ಟ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೂ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ವೈಶಿಷ್ಟ್ಯಗಳನ್ನು ಸಹ ಪಡೆದುಕೊಂಡಿದೆ.

Oppo K10 5G ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oppo K10 5G ಸ್ಮಾರ್ಟ್‌ಫೋನ್ ಅನ್ನು 17,499 ರೂ.ಗಳಿಗೆ ಬಿಡುಗಡೆ ಮಾಡಲಾಗಿದ್ದು, ಇದೇ ಜೂನ್ 15 ರಿಂದ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್, ಒಪ್ಪೋ ಆನ್‌ಲೈನ್ ಸ್ಟೋರ್ ಮತ್ತು ಮುಖ್ಯ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ. ಬಿಡುಗಡೆ ಕೊಡುಗೆಯ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರ ಮತ್ತು ಆಕ್ಸಿಸ್ ಬ್ಯಾಂಕ್ಗಳ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ 1,500 ರೂ.ಗಳ ಇನ್‌ಸ್ಟಂಟ್ ರಿಯಾಯಿತಿಯನ್ನು ಪ್ರಕಟಿಸಲಾಗಿದೆ. ಇನ್ನು ಮಿಡ್ನೈಟ್ ಬ್ಲ್ಯಾಕ್ ಮತ್ತು ಓಷನ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ Oppo K10 5G ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಖರೀದಿಸಬಹುದು.

 

Oppo K10 5g Smartphone With 33w Fast Charging Launched.