ಬ್ರೇಕಿಂಗ್ ನ್ಯೂಸ್
17-06-22 11:02 pm Source: Vijayakarnataka ಡಿಜಿಟಲ್ ಟೆಕ್
ಬಹುನಿರೀಕ್ಷಿತ Nothing Phone 1 ಸ್ಮಾರ್ಟ್‌ಫೋನಿನ ಅಧಿಕೃತ ವಿನ್ಯಾಸವನ್ನು ಬಹಿರಂಗವಾದ ಕೆಲವೇ ಗಂಟೆಗಳಲ್ಲಿ, Nothing Phone 1 ಸ್ಮಾರ್ಟ್‌ಫೋನಿನಲ್ಲಿರುವ ಮತ್ತೊಂದು ವೈಶಿಷ್ಟ್ಯವು ವಿಶ್ವ ಮೊಬೈಲ್ ಮಾರುಕಟ್ಟೆಯ ಗಮನಸೆಳೆದಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತ ರಾಫೆಲ್ ಜೀಯರ್ ಎಂಬುವವರು Nothing Phone 1 ಸ್ಮಾರ್ಟ್‌ಫೋನಿನ ಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ Nothing Phone 1 ಸ್ಮಾರ್ಟ್‌ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ಅಲಂಕಾರಿಕ ಬ್ಯಾಕ್‌ಲೈಟ್‌ಗಳ ಗುಂಪನ್ನು ಹೊಂದಿರುವುದು ಬಹಿರಂಗವಾಗಿದೆ. Nothing Phone 1 ಸ್ಮಾರ್ಟ್‌ಫೋನ್ ಹಿಂದಿನ ಪ್ಯಾನೆಲ್‌ನಲ್ಲಿನ ಈ ಬ್ಯಾಕ್‌ಲೈಟ್‌ಗಳು ಸಂದೇಶ ಅಥವಾ ಕರೆ ಅಧಿಸೂಚನೆಯನ್ನು ಸೂಚಿಸಲು ಗ್ಲೋ ಅಪ್ ಆಗುತ್ತವೆ ಎಂಬುದನ್ನು ರಾಫೆಲ್ ಜೀಯರ್ ಅವರು ತಿಳಿಸಿದ್ದಾರೆ.
ಜುಲೈ 12 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ Nothing Phone 1 ಸ್ಮಾರ್ಟ್‌ಫೋನ್ ಬಗೆಗೆ ಮಾಹಿತಿ ಹಂಚಿಕೊಳ್ಳಲು ಕೆಲವು ಪತ್ರಕರ್ತರಿಗೆ ಸೀಮಿತ ಪ್ರವೇಶವನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ರಾಫೆಲ್ ಜೀಯರ್ ಅವರು Nothing Phone 1 ಸ್ಮಾರ್ಟ್‌ಫೋನಿನ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೆರೆಹಿಡಿದಿದ್ದಾರೆ. ಈ ವೇಳೆ Nothing Phone 1 ಸ್ಮಾರ್ಟ್‌ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ಅಲಂಕಾರಿಕ ಬ್ಯಾಕ್‌ಲೈಟ್‌ಗಳ ಗುಂಪನ್ನು ಅವರು ಪರೀಕ್ಷಿಸಿ ನೋಡಿದ್ದಾರೆ. ಫೋನ್‌ನ ಬ್ಯಾಕ್‌ಲೈಟ್‌ಗಳು ಹೇಗೆ ಹೊಳೆಯುತ್ತವೆ ಎಂಬುದನ್ನು ತೋರಿಸುವ ಸಣ್ಣ ಕ್ಲಿಪ್ ಅನ್ನು ಹಂಚಿಕೊಂಡಿರುವ ಅವರು, ಬ್ಯಾಕ್ ಪ್ಯಾನೆಲ್‌ನ ಮಧ್ಯದಲ್ಲಿ ಒಂದು ರಿಂಗ್ ಇರುವುದನ್ನು ಹಾಗೂ ಚಾರ್ಜ್ ಮಾಡುವಾಗ ಅಥವಾ ಇತರೆ ನಿರ್ದಿಷ್ಟ ಸಮಯಗಳಲ್ಲಿ ಗ್ಲೋ ಆಗುವುದನ್ನು ಸಹ ನೋಡಿದ್ದರೆ.
2022ರ ಅತ್ಯಂತ ನಿರೀಕ್ಷಿತ ಸ್ಮಾರ್ಟ್‌ಫೋನ್ ಎಂದೆನಿಸಿರುವ Nothing ಕಂಪೆನಿಯ ಮೊಟ್ಟಮೊದಲ ಸ್ಮಾರ್ಟ್‌ಫೋನ್ Nothing Phone (1) ನೋಡಲು ಹೇಗಿದೆ ಎಂಬ ಫಸ್ಟ್ ಲುಕ್ ನೆನ್ನೆಯಷ್ಟೇ ಹೊರಬಿದ್ದಿದೆ. Nothing ಕಂಪನಿಯು ತನ್ನ ಅಧಿಕೃತ Twitter ಖಾತೆಯಲ್ಲಿ ಬಹಿರಂಗಪಡಿಸಿದ್ದು,ಇ ಫೋನ್ ಅರೆ-ಪಾರದರ್ಶಕ ಬಿಳಿ ಹಿಂಭಾಗದ ಪ್ಯಾನೆಲ್ ಅನ್ನು ಹೊಂದಿರುವುದನ್ನು ನಾವು ನೋಡಬಹುದಾಗಿದೆ. ಇದೇ ಚಿತ್ರವು ಮತ್ತಷ್ಟು ವೈಶಿಷ್ಟ್ಯಗಳ ಮಾಹಿತಿಯನ್ನು ಸಹ ಹೊರಹಾಕಿದ್ದು, Nothing Phone (1) ಸ್ಮಾರ್ಟ್‌ಫೋನ್ ಫ್ಲಾಟ್-ಎಡ್ಜ್ ವಿನ್ಯಾಸವನ್ನು ಹೊಂದಿರುವುದನ್ನು ಸಹ ನಾವು ನೋಡಬಹುದು ಹಾಗೂ ಚಿತ್ರದಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕಾಯಿಲ್ ಇರುವಂತೆ ಕಾಣುತ್ತಿರುವುದರಿಂದ ಇದು ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರಬಹುದು ಎಂಬ ವದಂತಿಯು ಸಹ ನಿಜವಾದಂತೆ ಕಾಣುತ್ತಿದೆ.
Nothing Phone (1) ಸ್ಮಾರ್ಟ್‌ಫೋನಿನ ಮೊದಲ ನೋಟದ ಚಿತ್ರದಲ್ಲಿ ನಾವು ಪ್ರಮುಖವಾಗಿ ಗುರುತಿಸಿರುವುದು ಈ ಸ್ಮಾರ್ಟ್‌ಫೋನ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್. ಇದು Nothing Phone (1) ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸಾಮರ್ಥ್ಯದ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಎಂಬ ವದಂತಿಯನ್ನು ನಿಜ ಮಾಡಿದಂತೆ ಕಾಣಿಸುತ್ತಿದೆ. ಇನ್ನು Nothing Phone (1) ಸ್ಮಾರ್ಟ್‌ಫೋನ್ ಚಿತ್ರವು ಸ್ಮಾರ್ಟ್‌ಫೋನ್‌ನ ಕೆಲವು ಭಾಗಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಕೆಲವು ಲೋಹದ ಫಲಕಗಳನ್ನು ತೋರಿಸುತ್ತದೆ. ಹಾಗೂ ಇತರೆ ಬಹುತೇಕ ಸ್ಮಾರ್ಟ್‌ಪೋನ್‌ಗಳಂತೆ Nothing Phone (1) ಸ್ಮಾರ್ಟ್‌ಫೋನಿನಲ್ಲಿಯೂ ಕೂಡ ವಾಲ್ಯೂಮ್ ಬಟನ್‌ಗಳನ್ನು ಸ್ಮಾರ್ಟ್‌ಫೋನ್‌ನ ಎಡಭಾಗದಲ್ಲಿ ಹಾಗೂ ಪವರ್ ಬಟನ್ ಅನ್ನು ಫ್ರೇಮ್‌ನ ಬಲಭಾಗದಲ್ಲಿ ಇರಿಸಲಾಗಿರುವುದನ್ನು ನಾವು ನೋಡಬಹುದಾಗಿದೆ.
Nothing ಕಂಪೆನಿಯ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ Nothing Phone 1 ಅನ್ನು ಇದೇ ಜುಲೈ 12 ರಂದು ದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜುಲೈ 12 ರಂದು ರಾತ್ರಿ 8.30 ಗಂಟೆಗೆ 'ರಿಟರ್ನ್ ಟು ಇನ್‌ಸ್ಟಿಂಕ್ಟ್' ಎಂಬ ವರ್ಚುವಲ್ ಈವೆಂಟ್ ನಲ್ಲಿ Nothing Phone 1 ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗುತ್ತಿದ್ದು, ಕಂಪೆನಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ಇನ್ನು ಭಾರತದಲ್ಲಿ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಲು ಲಭ್ಯವಿರುವ Nothing Phone 1 ಸ್ಮಾರ್ಟ್‌ಫೋನನ್ನು ಕೇವಲ 2,000 ರೂ. ಪಾವತಿಸಿ ಫ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ದೊರೆತಿರುವ ಅಧಿಕೃತ ಮಾಹಿತಿಯಂತೆ, Nothing Phone 1 ಸ್ಮಾರ್ಟ್‌ಪೋನ್ 45W ವೇಗದ ಚಾರ್ಜಿಂಗ್ ಬೆಂಬಲ ಹಾಗೂ ಅರೆಪಾರದರ್ಶಕ ವಿನ್ಯಾಸವನ್ನು ಹೊಂದಿರುವುದನ್ನು ಈಗಾಗಲೇ ಖಚಿತಪಡಿಸಲಾಗಿದೆ.
Nothing Phone 1 First Look Video Tease Fancy Notification Lights On Back.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm