ಮಾರುಕಟ್ಟೆಗೆ Poco X4 GT ಸ್ಮಾರ್ಟ್‌ಫೋನ್ ಎಂಟ್ರಿ!..ಬೆಲೆ ಎಷ್ಟು ಗೊತ್ತಾ?

24-06-22 08:17 pm       Source: Vijayakarnataka   ಡಿಜಿಟಲ್ ಟೆಕ್

Poco X4 GT ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಪಂಚ್-ಹೋಲ್ ಡಿಸ್‌ಪ್ಲೇಯನ್ನು ಹೊತ್ತು ಪ್ರೀಮಿಯಂ ವಿನ್ಯಾಸದಲ್ಲಿ...

ಗೇಮಿಂಗ್ ಪ್ರಿಯರಿಗಾಗಿ ವಿಶೇಷ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Poco ಇಂದು ಜಾಗತಿಕ ಮಾರುಕಟ್ಟೆಗೆ ತನ್ನ ವಿನೂತನ Poco X4 GT ಸ್ಮಾರ್ಟ್‌ಫೋನನ್ನು ಪರಿಚಯಿಸಿದೆ. ಕಳೆದ ಹಲವು ದಿನಗಳಿಂದಲೂ ಭಾರೀ ಕುತೂಹಲ ಮೂಡಿಸಿದ್ದ Poco X4 GT ಸ್ಮಾರ್ಟ್‌ಫೋನ್ ಹೈ-ಎಂಡ್ ವೈಶಿಷ್ಟ್ಯಗಳನ್ನು ಹೊತ್ತು ಮಧ್ಯಮ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ವಿಶ್ವಾದ್ಯಂತ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯಲು ತುದಿಗಾಲಿನಲ್ಲಿ ನಿಂತಿದೆ. ಹಾಗಾದರೆ, ಮಾರುಕಟ್ಟೆಗೆ ಎಂಟ್ರಿ ನೀಡಿರುವ ಬಹುನಿರೀಕ್ಷಿತ Poco X4 GT ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

Poco X4 GT ಸ್ಮಾರ್ಟ್‌ಪೋನಿನ ವೈಶಿಷ್ಟ್ಯಗಳು
Poco X4 GT ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಪಂಚ್-ಹೋಲ್ ಡಿಸ್‌ಪ್ಲೇಯನ್ನು ಹೊತ್ತು ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಗೊಂಡಿದೆ.ಪೂರ್ಣ HD ರೆಸಲ್ಯೂಶನ್ ಹೊಂದಿರುವ 6.6-ಇಂಚಿನ LCD ಡಿಸ್‌ಪ್ಲೇಯನ್ನು Poco X4 GT ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಲಾಗಿದ್ದು, ಇದು 30Hz ನಿಂದ 144Hz ವರೆಗೆ ವೇರಿಯಬಲ್ ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇದಲ್ಲದೇ, ಡಿಸ್‌ಪ್ಲೇಯು ಡಿಸಿ ಡಿಮ್ಮಿಂಗ್, 10-ಬಿಟ್ ಕಲರ್ ಡೆಪ್ತ್, ಡಾಲ್ಬಿ ವಿಷನ್, ಎಚ್‌ಡಿಆರ್ 10 ಕಂಟೆಂಟ್ ಸಪೋರ್ಟ್, 650 ನಿಟ್‌ಗಳ ಗರಿಷ್ಠ ಹೊಳಪು ಮತ್ತು 2,047 ಮಟ್ಟದ ಬ್ರೈಟ್‌ನೆಸ್ ಹೊಂದಾಣಿಕೆಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹುಡ್ ಅಡಿಯಲ್ಲಿ, Poco X4 GT ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಇದನ್ನು Mali-G610 GPU, 8GB RAM ಮತ್ತು 256GB ಸ್ಥಳೀಯ UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

Poco X4 GT With MediaTek Dimensity 8100 SoC, 144Hz Display Launched  Globally: Price, Specifications | Technology News

ಕ್ಯಾಮೆರಾ ವಿಭಾಗದಲ್ಲಿ, Poco X4 GT ಸ್ಮಾರ್ಟ್‌ಫೋನ್ 64MP ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು 8MP ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕಗಳ ಜೊತೆಗೆ ಜೋಡಿಯಾಗಿದ್ದು, 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ, ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ..ಸಂಪರ್ಕದ ವಿಷಯದಲ್ಲಿ, Poco X4 GT 5G ಸ್ಮಾರ್ಟ್‌ಫೋನ್ SA / NSA ಬೆಂಬಲ, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.3, GPS, NFC ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವಾಗಿ, Poco X4 GT ಸ್ಮಾರ್ಟ್‌ಫೋನಿನಲ್ಲಿ 67W ವೇಗದ ಚಾರ್ಜಿಂಗ್ ಬೆಂಬಲಿಸುವ ತಂತ್ರಜ್ಞಾನದೊಂದಿಗೆ 5,080 mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದ್ದು, ಇದನ್ನು ಪವರ್ ಬಟನ್ ಅಡಿಯಲ್ಲಿ ಬಲಭಾಗದಲ್ಲಿ ಇರಿಸಲಾಗಿದೆ.

POCO X4 GT with Dimensity 8100, 144Hz display launched globally - Gizmochina

Poco X4 GT ಬೆಲೆ ಮತ್ತು ಲಭ್ಯತೆ
ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಿರುವ Poco X4 GT ಸ್ಮಾರ್ಟ್‌ಫೋನ್ ಬೆಲೆಗಳು (8GB + 128GB) 379 ಯುರೋಗಳಿಂದ ಆರಂಭವಾಗಿವೆ. ಭಾರತೀಯ ಕರೆನ್ಸಿಯಲ್ಲಿ ಇದು ಸರಿಸುಮಾರು 31,150 ರೂ.ಗಳಾಗುತ್ತವೆ. ಇದರ 8GB RAM ಮತ್ತು 256GB ಸಂಗ್ರಹಣೆಯ ಉನ್ನತ-ಮಟ್ಟದ ಆವೃತ್ತಿಯು ಸರಿಸುಮಾರು 35,300 ರೂ.ಗೆ ಬಿಡುಗಡೆಯಾಗಿದೆ. ಕಪ್ಪು, ನೀಲಿ ಮತ್ತು ಸಿಲ್ವರ್ ಬಣ್ಣಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಕಾಲಿಟ್ಟಿರುವ Poco X4 GTಸ್ಮಾರ್ಟ್‌ಫೋನ್ ಭಾರತೀಯ ಲಭ್ಯವಾಗುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬಹಿರಂಗಗೊಳ್ಳುವ ನಿರೀಕ್ಷೆಯಿದೆ.

Poco X4 Gt With 144hz Refresh Rate Launched Pricing and Features,.