ಬ್ರೇಕಿಂಗ್ ನ್ಯೂಸ್
07-07-22 08:47 pm Source: Vijayakarnataka ಡಿಜಿಟಲ್ ಟೆಕ್
ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಬದಲಾಗಿರುವ ಸ್ಮಾರ್ಟ್‌ಫೋನ್ ಇಂದು ನಮ್ಮ ಜೀವನದ ಹಲವು ಪಾತ್ರಗಳನ್ನು ನಿರ್ವಹಿಸುವ ಮಂತ್ರದಂಡವಾಗಿ ಬದಲಾಗಿದೆ. ಅದರಲ್ಲೂ ನಮ್ಮ ಯುವಜನತೆಯು ಒಂದು ಕ್ಷಣ ಕಾಲ ಕೂಡ ಸ್ಮಾರ್ಟ್‌ಫೋನ್ ಅನ್ನು ಬಿಟ್ಟಿರಲಾದಷ್ಟು ಹಚ್ಚಿಕೊಂಡಿದ್ದು, ತಮ್ಮೆಲ್ಲಾ ಅಗತ್ಯತೆಗಳನ್ನು ಪೂರೈಸುವ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಹುಡುಕುತಿರುತ್ತಾರೆ. ಭರಪೂರ ಮನರಂಜನೆಯ ಜೊತೆಗೆ ಇತ್ತೀಚಿನ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಒಂದು ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸುವ ಆಶಯ ಯುವಜನತೆಗೆ ಇದ್ದೇ ಇರುತ್ತದೆ. ಇದನ್ನು ಅರ್ಥ ಮಾಡಿಕೊಂಡಿರುವ ದೇಶದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Samsung ಕಂಪೆನಿಯು ಯುವಜನತೆಯು ಆಶಿಸುವ ಎಲ್ಲಾ ವೈಶಿಷ್ಟ್ಯಗಳಲ್ಲಿ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. ಈ ಬಾರಿ ಮತ್ತೊಮ್ಮೆ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ Samsung ಹವಾ ಶುರುವಾಗಿದ್ದು, ಬೃಹತ್ 6000mAh ಬ್ಯಾಟರಿ, ದೊಡ್ಡದಾದ FHD+ ಡಿಸ್‌ಪ್ಲೇ, Auto Data Switching, 8GB RAM ಜೊತೆಗೆ RAM Plus ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಹೊಸದಾಗಿ ಬಿಡುಗಡೆಗೊಂಡಿರುವ ವಿನೂತನ Samsung Galaxy F13 ಸ್ಮಾರ್ಟ್‌ಫೋನ್ ಟ್ರೆಂಡ್ ಸೃಷ್ಠಿಸುತ್ತಿದೆ.
Samsung Galaxy F13 ಸ್ಮಾರ್ಟ್‌ಫೋನಿನಲ್ಲಿರುವ ದೊಡ್ಡದಾದ 16.62 cm (6.6) FHD+ ಡಿಸ್‌ಪ್ಲೇಯು ಭರಪೂರ ಮನರಂಜನೆ ಖಾತ್ರಿ!
ಮನರಂಜನೆಗಾಗಿ ಮನೆಯಲ್ಲಿ ಟಿವಿಯನ್ನು ವೀಕ್ಷಿಸುವ ದಿನಗಳು ಕಳೆದುಹೋಗಿವೆ. ಇದೀಗ ಟಿವಿಯು ಸ್ಮಾರ್ಟ್‌ಫೋನ್ ರೂಪದಲ್ಲಿ ನಮ್ಮ ಜೇಬಿನಲ್ಲಿ ಸೇರಿಕೊಂಡಿದೆ ಎಂಬುದನ್ನು ನಾವೇನು ಹೇಳಬೇಕಿಲ್ಲ. ಇಂದಿನ ಯುವಜನತೆಗೆ ತಮ್ಮ ಬೆರಳ ತುದಿಯಲ್ಲಿ ಮನರಂಜನೆಯನ್ನು ಒದಗಿಸಲು ಸ್ಮಾರ್ಟ್‌ಫೋನ್ ಒಂದು ಅಭೂತಪುರ್ವ ಸಾಧನವಾಗಿದ್ದು, ವಿನೂತನ Samsung Galaxy F13 ಸ್ಮಾರ್ಟ್‌ಫೋನ್ 16.62cm (6.6-inch) FHD+ ಡಿಸ್‌ಪ್ಲೇಯು ಭರಪೂರ ಮನರಂಜನೆಯನ್ನು ಖಾತ್ರಿಪಡಿಸುತ್ತದೆ. ವಿಡಿಯೋಗಳ ಪ್ರತಿ ಫ್ರೇಮ್‌ನ ಪ್ರತಿಯೊಂದು ಸಣ್ಣ ವಿವರಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ Samsung Galaxy F13 ಸ್ಮಾರ್ಟ್‌ಫೋನ್ ನಿಮ್ಮ ಮೆಚ್ಚಿನ ಪ್ರದರ್ಶನ ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಸಿಲ್ವರ್ ಸ್ಕ್ರೀನ್ ಅನುಭವವನ್ನು ಒದಗಿಸಲಿದೆ. ಹಾಗಾಗಿ, ಯಾವುದೇ ಸಮಯದಲ್ಲಿ Samsung Galaxy F13 ಜೊತೆಗೆ ನಿಮ್ಮ ಮನರಂಜನೆಯನ್ನು ಖಾತ್ರಿಪಡಿಸಲಿದೆ.
Samsung Galaxy F13 ಸ್ಮಾರ್ಟ್‌ಫೋನಿನಲ್ಲಿರುವ ಬೃಹತ್ 6000mAh ಬ್ಯಾಟರಿಯು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.!
ಮೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸುತ್ತಿರುವ ವೇಳೆ ಅಥವಾ ಗೇಮ್‌ಗಳನ್ನು ಆಡುವ ವೇಳೆ ಸ್ಮಾರ್ಟ್‌ಫೋನಿನಲ್ಲಿ ಚಾರ್ಜ್ ಖಾಲಿಯಾದರೆ ಆಗುವಂತಹ ಸಮಸ್ಯೆಯನ್ನು ಎಲ್ಲರೂ ತಿಳಿದಿರುತ್ತೀರಾ. ಈ ಸಮಯದಲ್ಲಿ ಚಾರ್ಜರ್ ಅನ್ನು ಹುಡುಕಲು ಅಥವಾ ಮನರಂಜನೆಯನ್ನು ವಿರಾಮಗೊಳಿಸಲು ಯಾರೂ ಇಷ್ಟಪಡುವುದಿಲ್ಲ. ಇಂತಹ ಸಮಸ್ಯೆಗೆ ಇನ್ಮುಂದೆ ಮುಕ್ತಿ ಹಾಡಿ. ಏಕೆಂದರೆ, Samsung Galaxy F13 ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಹೊಂದಿದೆ. ಇದರಿಂದ ಅಡೆತಡೆಯಿಲ್ಲದೆ ಚಲನಚಿತ್ರಗಳನ್ನು ವೀಕ್ಷಿಸಬಹುದು, ಹಾಡುಗಳನ್ನು ಕೇಳಬಹುದು ಮತ್ತು ನಿರಂತರ ಮಾತನಾಡುತ್ತಿರಬಹುದು. ಇಷ್ಟೇ ಅಲ್ಲದೇ, ನಿಮ್ಮ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು, 15W ಇನ್-ಬಾಕ್ಸ್ ಚಾರ್ಜರ್ ಯಾವುದೇ ಸಮಯದಲ್ಲಿ Samsung Galaxy F13 ಸ್ಮಾರ್ಟ್‌ಫೋನ್ ಅನ್ನು ಶಿಘ್ರದಲ್ಲೇ ಚಾರ್ಜ್ ಮಾಡುವ ಶಕ್ತಿಯನ್ನು ಹೊಂದಿದ್ದು, ಫೋನ್ ಚಾರ್ಜ್ ಮಾಡಲು ಗಂಟೆಗಟ್ಟಲೆ ಕಾಯಬೇಕಾಗಿಲ್ಲ ಎಂದು ಖಚಿತಪಡಿಸುತ್ತದೆ. ಇದರ ಜೊತೆಗೆ Galaxy F13 ಫೋನಿನಲ್ಲಿ ಅಡಾಪ್ಟರ್ power-saving ಮತ್ತು AI power ಮ್ಯಾನೇಜ್‌ಮೆಂಟ್ ಅನ್ನು ಹೊಂದಿದ್ದು, ಈ ವೈಶಿಷ್ಟ್ಯವು ಫೋನಿನ ಚಾರ್ಜ್ ಅನ್ನು ಇಮ್ಮಡಿಗೊಳಿಸುತ್ತದೆ.
Samsung Galaxy F13 ಸ್ಮಾರ್ಟ್‌ಫೋನ್ ಹೊಂದಿದೆ ವಿಭಾಗದಲ್ಲೇ ಮೊದಲ Auto Data Switching ಸಂಪರ್ಕ ವೈಶಿಷ್ಟ್ಯ!
Samsung ಕಂಪೆನಿ ಯಾವಾಗಲೂ ತನ್ನ ಬಳಕೆದಾರರಿಗೆ ಸಹಾಯ ಮಾಡಲು ನವೀನ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ Samsung Galaxy F13 ಸ್ಮಾರ್ಟ್‌ಫೋನ್ ವಿಭಾಗದಲ್ಲೇ ಮೊದಲ Auto Data Switching ಸಂಪರ್ಕ ವೈಶಿಷ್ಟ್ಯವನ್ನು ಹೊಂದಿದೆ. ಈ ವೈಶಿಷ್ಟ್ಯದೊಂದಿಗೆ ನಿಮ್ಮ ಪ್ರಾಥಮಿಕ ಸಿಮ್‌ನಲ್ಲಿ ನೀವು ಯಾವುದೇ ನೆಟ್‌ವರ್ಕ್ ಹೊಂದಿಲ್ಲದಿದ್ದರೂ ಸಹ, ನೀವು ಯಾವಾಗಲೂ ಸಂಪರ್ಕದಲ್ಲಿರಲು Galaxy F13 ಸ್ಮಾರ್ಟ್‌ಫೋನ್ ನಿಮಗೆ ಸಹಾಯ ಮಾಡುತ್ತದೆ. ಇದು ಸಾಧ್ಯವೇ? ಎಂದು ನಿಮಗೆ ಅನಿಸಬಹುದು. ಆದರೆ, ಖಂಡಿತ ಸಾಧ್ಯ. ಹೌದು, ನಿಮ್ಮ ಪ್ರಾಥಮಿಕ ಸಿಮ್‌ನಲ್ಲಿ ದುರ್ಬಲ ನೆಟ್‌ವರ್ಕ್ ಸಂಪರ್ಕವನ್ನು ಹೊಂದಿದ್ದರೂ ಸಹ, Auto Data Switching ಸಂಪರ್ಕ ವೈಶಿಷ್ಟ್ಯವು ದ್ವಿತೀಯ ಸಿಮ್‌ಗೆ ಆಟೊಮ್ಯಾಟಿಕ್ ಆಗಿ ನೆಟ್‌ವರ್ಕ್ ಸಂಪರ್ಕವನ್ನು ಬದಲಾಯಿಸಿಕೊಳ್ಳುತ್ತದೆ. ಇದರಿಂದ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸದಾ ವೀಡಿಯೊ ಕರೆಗಳಲ್ಲಿ ಸಂಪರ್ಕದಲ್ಲಿರಲು ಮತ್ತು ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ತಡೆ ಇಲ್ಲದಂತೆ ಸ್ಟ್ರೀಮ್ ಮಾಡಲು ಸಹಾಯ ಮಾಡುತ್ತದೆ.
Samsung Galaxy F13 ಸ್ಮಾರ್ಟ್‌ಫೋನಿನಲ್ಲಿರುವ RAM Plus ವೈಶಿಷ್ಟ್ಯದೊಂದಿಗೆ 8GB RAM ಕಾರ್ಯನಿರ್ವಹಣೆ.!
ನಿಮ್ಮ ಸ್ಮಾರ್ಟ್‌ಫೋನ್ ನಿಧಾನವಾಗಿ ಕೆಲಸ ಮಾಡುತ್ತದೆ ಎಂದರೆ ಅದರ ಸಮಸ್ಯೆ ನಿಮಗೆ ತಿಳಿದಿರುತ್ತೇವೆ. ನಾವೆಲ್ಲರೂ ಯಾವುದೇ ಹ್ಯಾಂಗ್-ಅಪ್‌ಗಳಿಲ್ಲದೆ ಅನೇಕ ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡಬಹುದಾದ ಸ್ಮಾರ್ಟ್‌ಫೋನ್ ಅನ್ನು ನಾವು ಪ್ರೀತಿಸುತ್ತೇವೆ. ಈ ರೀತಿಯ ವೇಗದ ಬಹುಕಾರ್ಯವನ್ನು Samsung Galaxy F13 ಸ್ಮಾರ್ಟ್‌ಫೋನ್ ನಿರ್ವಹಿಸಲಿದೆ. Samsung Galaxy F13 ಸ್ಮಾರ್ಟ್‌ಫೋನಿನಲ್ಲಿರುವ 4GB RAM ಅದರ RAM Plus ವೈಶಿಷ್ಟ್ಯದೊಂದಿಗೆ 8GB ಗೆ ದ್ವಿಗುಣಗೊಳ್ಳುತ್ತದೆ. ಇದರಿಂದ Samsung Galaxy F13 ಸ್ಮಾರ್ಟ್‌ಫೋನ್ ಅತ್ಯಂತ ವೇಗದದಲ್ಲಿ ಬಹುಕಾರ್ಯವನ್ನು ನಿರ್ವಹಿಸುವುದನ್ನು ಖಚಿತಪಡಿಸುತ್ತದೆ. ಇದರರ್ಥ ನೀವು ಯಾವುದೇ ತೊಂದರೆಗಳು ಮತ್ತು ವಿರಾಮಗಳನ್ನು ಅನುಭವಿಸದೆಯೇ ಹಲವಾರು ಅಪ್ಲಿಕೇಶನ್‌ಗಳನ್ನು ಒಂದೇ ಬಾರಿ ಬಳಸಬಹುದು. ಹಾಗೂ ಒಂದು ಅಪ್ಲಿಕೇಶನ್‌ನಿಂದ ಮತ್ತೊಂದು ಅಪ್ಲಿಕೇಷನ್ ಅನ್ನು ಮನಬಂದಂತೆ ಸ್ವೈಪ್ ಮಾಡಬಹುದು.
Samsung Galaxy F13 ಸ್ಮಾರ್ಟ್‌ಫೋನಿನೊಂದಿಗೆ ಡಿಜಿಟಲ್ ಜಗತ್ತಿನಲ್ಲಿ ನೀವು ವೈರಲ್ ಆಗಿ.!
ಈ ಡಿಜಿಟಲ್ ಜಗತ್ತಿನಲ್ಲಿ, ಉತ್ತಮ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹೊಂದಿರುವ ಪ್ರಾಮುಖ್ಯತೆ ಕುರಿತು ನಾವೆಲ್ಲರೂ ತಿಳಿದಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಚಿತ್ರಿಸಿದ ಚಿತ್ರ ಅಥವಾ ವಿಡಿಯೋಗಳನ್ನು ಹಂಚಿಕೊಂಡು ಫಾಲೋವರ್ಸ್ ಗಳಿಸುವ ಆಸೆ ಎಲ್ಲರಿಗೂ ಇರುತ್ತದೆ. ಇನ್ಮುಂದೆ ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಏಕೆಂದರೆ, 11 ಸಾವಿರ ರೂ. ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ Samsung Galaxy F13 ಸ್ಮಾರ್ಟ್‌ಫೋನ್ ನಿಮ್ಮ ಅಭಿರುಚಿಗೆ ತಕ್ಕಂತಹ ಚಿತ್ರಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯುತ್ತದೆ. Samsung Galaxy F13 ಸ್ಮಾರ್ಟ್‌ಫೋನ್ 50MP ಸಾಮರ್ಥ್ಯದ ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದು, ನಿಮ್ಮ ನೆನಪುಗಳನ್ನು ಮರೆಯಲಾಗದಂತೆ ಸೆರೆಹಿಡಿಯುತ್ತದೆ. ಈ 50MP ಸಾಮರ್ಥ್ಯದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನಲ್ಲಿರುವ 5MP ಅಲ್ಟ್ರಾ-ವೈಡ್ ಕ್ಯಾಮೆರಾ 123-ಡಿಗ್ರಿ ವಿಸ್ತಾರವಾದ ಚಿತ್ರಗಳನ್ನು ಹಾಗೂ 2MP ಡೆಪ್ತ್ ಸೆನ್ಸರ್ ನಿಮಗೆ ಅತ್ಯದ್ಭುತ ಪೋಟ್ರೇಟ್ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಇನ್ನು ಮುಂಭಾಗದಲ್ಲಿ ಅಳವಡಿಸಲಾಗಿರುವ 8MP ಸಾಮರ್ಥ್ಯದ ಕ್ಯಾಮೆರಾವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತಹ ಅತ್ಯುತ್ತಮ ಸೆಲ್ಫಿಗಳನ್ನು ಚಿತ್ರಿಸುತ್ತದೆ.
Samsung Galaxy F13 ಸ್ಮಾರ್ಟ್‌ಫೋನ್ ಬಂದಿದೆ ಬೆರಗುಗೊಳಿಸುವ ಶೋಸ್ಟಾಪರ್ ಬಣ್ಣಗಳೊಂದಿಗೆ!
ಇಂದಿನ ಯುವಜನತೆಯು ಯಾವಾಗಲೂ ಹೆಚ್ಚು ಸ್ಟೈಲಿಶ್ ಆಗಿ ಇರಲು ಬಯಸುತ್ತಾರೆ. ಇನ್ನು ಅವರು ಖರೀದಿಸುವ ಸ್ಮಾರ್ಟ್‌ಫೋನ್ ಬಗ್ಗೆ ಕೇಳಬೇಕೆ. ಅದೂ ಕೂಡ ಹೆಚ್ಚು ಪ್ರೀಮಿಯಂ ಆಗಿ ಇರಬೇಕೆಂದು ಬಯಸುತ್ತಾರೆ. ಕೈಯಲ್ಲಿ ಹಿಡಿದಾಗ ಅತ್ಯುತ್ತಮ ಎನಿಸುವಂತಹ ಬಣ್ಣದಲ್ಲಿ ಪ್ರೀಮಿಯಂ ಲುಕ್‌ನಲ್ಲಿ ಇರುವ ಸ್ಮಾರ್ಟ್‌ಫೋನ್ ಎಲ್ಲರೂ ಗಮನ ಸೆಳೆಯುವಂತೆ ಮಾಡುತ್ತದೆ. ಈ ಎಲ್ಲವನ್ನು ಸಹ Samsung Galaxy F13 ಸ್ಮಾರ್ಟ್‌ಫೋನಿನಲ್ಲಿ ನೀವು ನೋಡಬಹುದು. ಹೌದು, Samsung Galaxy F13 ಸ್ಮಾರ್ಟ್‌ಫೋನ್ ನಯವಾದ ವಿನ್ಯಾಸ ಮತ್ತು ಬೆರಗುಗೊಳಿಸುವ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. Waterfall Blue, Sunrise Copper ಮತ್ತು Nightsky Green ಮೂರು ಸುಂದರ ಬಣ್ಣಗಳಲ್ಲಿ ಲಭ್ಯವಿರುವ Samsung Galaxy F13 ಪ್ರತಿಯೋರ್ವ ಸ್ಮಾರ್ಟ್‌ಫೋನ್ ಬಳಕೆದಾರರ ಸ್ಟೈಲಿಶ್ ಕನಸನ್ನು ನನಸು ಮಾಡುತ್ತದೆ.
Samsung Galaxy F13 ಸ್ಮಾರ್ಟ್‌ಫೋನಿನಲ್ಲಿದೆ ಶಕ್ತಿಶಾಲಿ Exynos 850 ಪ್ರೊಸೆಸರ್
ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಪ್ರೊಸೆಸರ್ ಅದರ ವೇಗ ಮತ್ತು ಕಾರ್ಯಕ್ಷಮತೆಯನ್ನು ನಿರ್ಧರಿಸುತ್ತದೆ ಎಂಬುದನ್ನು ನೀವು ತಿಳಿದಿದ್ದಾರೆ ಅಲ್ಲವೇ?. Samsung Galaxy F13 ಸ್ಮಾರ್ಟ್‌ಫೋನ್ ಶಕ್ತಿಶಾಲಿ Exynos 850 ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಯಾವುದೇ ವಿಳಂಬ ಅಥವಾ ಅಡೆತಡೆಇಲ್ಲದೆ ಕಾರ್ಯನಿರ್ವಹಣೆ ನೀಡುತ್ತದೆ. Exynos 850 ಪ್ರೊಸೆಸರ್ ಸಹಾಯದಿಂದ ದೀರ್ಘ ಕಾಲದವರೆಗೆ ಮನರಂಜನೆಯನ್ನು ಖಚಿತಡಿಸುವ Samsung Galaxy F13 ಸ್ಮಾರ್ಟ್‌ಫೋನಿನಲ್ಲಿ ನೀವು ನಿಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಲು, ಒಂದೇ ಬಾರಿ ಹಲವು ಅಪ್ಲಿಕೇಶನ್‌ಗಳನ್ನು ಬಳಸಲು ಅಥವಾ ಶಕ್ತಿಶಾಲಿ ಗೇಮ್‌ಗಳನ್ನು ಆಡಲು ಸಾಧ್ಯವಾಗುತ್ತದೆ. ಇದು Samsung Galaxy F13 ಸ್ಮಾರ್ಟ್‌ಫೋನ್ ಅನ್ನು ಅದ್ಭುತವಾಗಿಸಿದೆ.
Samsung Galaxy F13 ಸ್ಮಾರ್ಟ್‌ಫೋನಿನಲ್ಲಿರುವ Knox Security ಸೆಕ್ಯುರಿಟಿಯೊಂದಿಗೆ ಯಾವಾಗಲೂ ಸುರಕ್ಷಿತವಾಗಿರಿ.
ಈ ತಂತ್ರಜ್ಞಾನ ಲೋಕದಲ್ಲಿ ನಿಮ್ಮ ಸುರಕ್ಷತೆಯನ್ನು ಖಾತ್ರಿಗೊಳಿಸುವ ಸ್ಮಾರ್ಟ್‌ಫೋನ್ ಒಂದು ನಿಮ್ಮ ಬಳಿ ಇರಲೇಬೇಕು. ಅದಕ್ಕಾಗಿ, Samsung Galaxy F13 ಸ್ಮಾರ್ಟ್‌ಫೋನಿನಲ್ಲಿ Samsung ಕಂಪೆನಿ ತನ್ನ Knox Security ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಸ್ಮಾರ್ಟ್‌ಫೋನಿನ ಮೇಲೆ ಎದುರಾಗುವ ದುರುದ್ದೇಶಪೂರಿತ ಡೇಟಾ ಬೆದರಿಕೆಗಳಿಂದ ಉನ್ನತ ದರ್ಜೆಯ ಭದ್ರತೆಯನ್ನು ಒದಗಿಸುತ್ತದೆ. ಈ ಉಪಯುಕ್ತ ವೈಶಿಷ್ಟ್ಯವು ನಿಮ್ಮ ಫೋನ್‌ನಲ್ಲಿ ಸೂಕ್ಷ್ಮ ಮಾಹಿತಿಯನ್ನು ಕಾಪಾಡುತ್ತದೆ. ಇಷ್ಟೇ ಅಲ್ಲದೇ, Samsung Galaxy F13 ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಇದು ಸೈಡ್ ಫಿಂಗರ್‌ಪ್ರಿಂಟ್ ಅನ್‌ಲಾಕ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯಗಳು ಸಹ ಇವೆ ಎಂಬುದನ್ನು ನಾವು ಗಮನಿಸಬೇಕಿದೆ.
ವೈಶಿಷ್ಟ್ಯಗಳಿಂದಲೇ ತುಂಬಿರುವ ನೂತನ Samsung Galaxy F13 ಸ್ಮಾರ್ಟ್‌ಫೋನ್ ಖರೀದಿಸಲು ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ!
ನಾವು ನೂತನ Samsung Galaxy F13 ಸ್ಮಾರ್ಟ್‌ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಿದ ನಂತರ, ನೀವು ಈ ಸ್ಮಾರ್ಟ್‌ಫೋನನ್ನು ಖರೀದಿಸಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಎಂದು ಭಾವಿಸಬಹುದು. ಆದರೆ, ಚಿಂತಿಸಬೇಡಿ!. ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳಿಗೆ ಹೆಚ್ಚುವರಿ ರಿಯಾಯಿತಿ ಸೇರಿದಂತೆ 4GB+64 GB ಮೂಲ ಮಾದರಿಯ Samsung Galaxy F13 ಸ್ಮಾರ್ಟ್‌ಫೋನ್ ಕೇವಲ ₹10,999 ರೂ. ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದೆ. ಇದರ 4GB+128GB ಸಾಮರ್ಥ್ಯದ ಮಾದರಿ ಫೋನ್ ₹11,999 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಎಷ್ಟು ಸಿಹಿಸುದ್ದಿ ಅಲ್ಲವೇ?.
Samsung Galaxy F13 ಸ್ಮಾರ್ಟ್‌ಫೋನಿನ ಮಾರಾಟವು ಈಗಾಗಲೇ ಆರಂಭವಾಗಿರುವುದರಿಂದ ಈ ಪವರ್-ಫುಲ್ ಸ್ಮಾರ್ಟ್‌ಫೋನ್ ಖರೀದಿಗಾಗಿ ನೀವು ಕಾಯಬೇಕಿಲ್ಲ. Flipkart ಅಥವಾ Samsung online ಸ್ಟೋರ್‌ನಲ್ಲಿ Samsung Galaxy F13 ಮಾರಾಟಕ್ಕಾಗಿಯೇ ತೆರೆಯಲಾಗಿರುವ ವೆಬ್ ಪೇಜ್‌ಗೆ ಭೇಟಿ ನೀಡಿ ನಂಬಲಾಗದ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿರುವ Samsung Galaxy F13 ಸ್ಮಾರ್ಟ್‌ಫೋನನ್ನು ನಿಮ್ಮದಾಗಿಸಿಕೊಳ್ಳಿ.
ಸ್ಯಾಮ್ಸಂಗ್ ಗ್ಯಾಲಕ್ಸಿ F13 ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | Exynos 850 |
ಡಿಸ್‌ಪ್ಲೇ | 6.6 inches (16.76 cm) |
ಸ್ಟೋರೇಜ್ | 64 GB |
ಕ್ಯಾಮರಾ | 50 MP + 5 MP + 2 MP |
ಬ್ಯಾಟರಿ | 6000 mAh |
ಭಾರತದಲ್ಲಿ ಬೆಲೆ | 11999 |
ರ‍್ಯಾಮ್ | 4 GB |
Know All Specification And Product Details Of New Samsung Galaxy F13.
20-12-24 10:43 pm
Bangalore Correspondent
C T Ravi Arrested, Minister Lakshmi Hebbalkar...
19-12-24 08:05 pm
Chikkamagaluru, Elephant Attack: ಚಿಕ್ಕಮಗಳೂರಲ್...
19-12-24 06:36 pm
Atul Subhash, Suicide: ಬೆಂಗಳೂರು ಟೆಕ್ಕಿ ಆತ್ಮಹತ...
19-12-24 01:31 pm
RTI Snehamayi Krishna Missing: ಮುಡಾ ಹಗರಣದ ಪ್ರ...
17-12-24 05:39 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
20-12-24 09:48 pm
Mangalore Correspondent
CT Ravi, Protest Mangalore, Vedavyas Kamath:...
20-12-24 09:28 pm
ಅಮಿತ್ ಷಾ ಗೂಂಡಾ, ಸಿಟಿ ರವಿ ಕೊಲೆಗಡುಕ ; ಕಾಂಗ್ರೆಸ್...
20-12-24 04:40 pm
Mangalore Land Fraud, RTI Dhamodhar Shenoy: ಬ...
20-12-24 04:06 pm
Mangalore Lokayukta, Arrest, G S Dinesh, Mulk...
19-12-24 04:28 pm
20-12-24 08:20 pm
HK News Desk
ರಾಜ್ಯದ ಅತಿದೊಡ್ಡ ಡ್ರಗ್ ರಾಕೆಟ್ ಪತ್ತೆ ; 24 ಕೋಟಿ...
18-12-24 09:23 pm
Mangalore CCB Police, Crime, Drugs; ಸಿಸಿಬಿ ಪೊ...
18-12-24 11:15 am
Konaje Police, Mangalore Police, Drugs; ಮಾದಕ...
17-12-24 07:51 pm
Karkala GooglePay Fraud, Arrest: ಹೋಮ್ ನರ್ಸ್ ಆ...
17-12-24 07:34 pm