ಟ್ವಿಟರ್ ಡೌನ್  ;  ಸಾವಿರಾರು ಬಳಕೆದಾರರಿಂದ ದೂರುಗಳ ಸುರಿಮಳೆ

14-07-22 09:10 pm       HK News Desk   ಡಿಜಿಟಲ್ ಟೆಕ್

ಟ್ವಿಟರ್ ವೆಬ್‌ಸೈಟ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೈಕ್ರೋಬ್ಲಾಗಿಂಗ್​ ಸೈಟ್​ ಟ್ವಿಟರ್​ ಇದೀಗ ತಾತ್ಕಾಲಿಕವಾಗಿ ಡೌನ್​ ಆಗಿದೆ  ಎಂದು ಬಳಕೆದಾರರು ಟ್ವೀಟ್ ಮಾಡುತ್ತಿದ್ದಾರೆ.

ಟ್ವಿಟರ್ ವೆಬ್‌ಸೈಟ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೈಕ್ರೋಬ್ಲಾಗಿಂಗ್​ ಸೈಟ್​ ಟ್ವಿಟರ್​ ಇದೀಗ ತಾತ್ಕಾಲಿಕವಾಗಿ ಡೌನ್​ ಆಗಿದೆ  ಎಂದು ಬಳಕೆದಾರರು ಟ್ವೀಟ್ ಮಾಡುತ್ತಿದ್ದಾರೆ.

 ಸೈಟ್ ಡೌನ್ ಆಗಿದೆ ಎಂದು ಹೇಳುವವರ  ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದೆ. ಟ್ವಿಟರ್  ಬಳಕೆದಾರರು ಡೆಸ್ಕ್​ಟಾಪ್​ ವರ್ಶನ್​ನಲ್ಲಿ ಟ್ವಿಟರ್ ಬಳಕೆ ಮಾಡಲು ಸಮಸ್ಯೆ ಆಗುತ್ತಿದೆ ಎಂದು ಟ್ವಿಟ್ ಮಾಡುತ್ತಿದ್ದಾರೆ.

Is Twitter down? Service comes back online after brief outage | Trusted  Reviews

ಡೌನ್ ಡಿಟೆಕ್ಟರ್ ಪ್ರಕಾರ, ಸಾವಿರಾರು ಜನರಿಗೆ ಮಧ್ಯಾಹ್ನ 1 ಗಂಟೆಯ ನಂತರ ಟ್ವಿಟರ್​ನಲ್ಲಿ ಸಮಸ್ಯೆಗಳು ಪ್ರಾರಂಭವಾಗಿದೆ.  ಟ್ವಿಟರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ನಲ್ಲಿ ಏನನ್ನೂ ಅಪ್ಡೇಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ವರದಿ ಮಾಡಿದ್ದಾರೆ.

Twitter Down, non funziona in tutto il mondo

DownDetector.com ಪ್ರಕಾರ, ಈ ಸಮಸ್ಯೆಗಳನ್ನು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿವೆ. ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಬಳಕೆದಾರರು ವರದಿ ಮಾಡಿದ್ದಾರೆ. ಹಲವಾರು ಲಾಗಿನ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಫೀಡ್ ಸರಿಯಾಗಿ ಲೋಡ್ ಆಗುತ್ತಿಲ್ಲ. ಈ ಟ್ವಿಟರ್ ಸ್ಥಗಿತಕ್ಕೆ ಕಾರಣವೇನು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಬಂದಿಲ್ಲ .

ಈ ಬಗ್ಗೆ ಟ್ವಿಟರ್​ನಿಂದ ಅಧಿಕೃತವಾಗಿ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ.

Microblogging social site Twitter faced a major outage on Thursday as several users unable to load tweets. Twitteratis who are attempting to use the social media platform were met with a message saying “Tweets aren't loading right now. Try again".