ಭಾರತದಲ್ಲಿ Tecno Spark 9 ಫೋನ್ ಭರ್ಜರಿ ಬಿಡುಗಡೆ!..ಬೆಲೆ ಕೇವಲ 8,499 ರೂ.!

18-07-22 07:43 pm       Source: Vijayakarnataka   ಡಿಜಿಟಲ್ ಟೆಕ್

ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ 11GB ವಿಸ್ತೃತ RAM ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಕಂಪೆನಿ ಹೇಳಿಕೊಂಡಿದ್ದು, ಆಕ್ಟಾ-ಕೋರ್ MediaTek Helio G37 SoC...

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Tecno ದೇಶದಲ್ಲಿಂದು ತನ್ನ ವಿನೂತನ Tecno Spark 9 ಸ್ಮಾರ್ಟ್‌ಫೋನನ್ನು ಬಿಡುಗಡೆಗೊಳಿಸಿದೆ. ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ 11GB ವಿಸ್ತೃತ RAM ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಕಂಪೆನಿ ಹೇಳಿಕೊಂಡಿದ್ದು, ಆಕ್ಟಾ-ಕೋರ್ MediaTek Helio G37 SoC ಪ್ರೊಸೆಸರ್, 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.6-ಇಂಚಿನ ಡಿಸ್‌ಪ್ಲೇ ಮತ್ತು 13-ಮೆಗಾಪಿಕ್ಸೆಲ್ ಎಐ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನಂತಹ ವೈಶಿಷ್ಟ್ಯಗಳನ್ನು ಹೊತ್ತು Tecno Spark 9 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ Tecno Spark 9 ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.

Tecno Spark 9 ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Tecno Spark 9 ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ವಾಟರ್-ಡ್ರಾಪ್ ಶೈಲಿಯ ನಾಚ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಮಧ್ಯಮ ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಮೊದಲೇ ಹೇಳಿದಂತೆ, ಈ Tecno Spark 9 ಸ್ಮಾರ್ಟ್‌ಫೋನಿನಲ್ಲಿ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.6-ಇಂಚಿನ HD+ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಹುಡ್ ಅಡಿಯಲ್ಲಿ, MediaTek Helio G37 SoC ಪ್ರೊಸೆಸರ್‌ನಿಂದ ಚಾಲಿತವಾಗಿರುವ Tecno Spark 9 ಸ್ಮಾರ್ಟ್‌ಫೋನ್ ಒಟ್ಟು 11GB ವಿಸ್ತೃತ RAM ನಿಂದ ಚಾಲಿತವಾಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಇದರಲ್ಲಿ 6GB RAM ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿರುವ ಆಂತರಿಕ RAM ಆದರೆ, ಉಳಿದ 5GB RAM ಆಂತರಿಕ ಮೆಮೊರಿಯಿಂದ ವಿಸ್ತರಿಸಬಹುದಾದ ವರ್ಚುವಲ್ RAM ವೈಶಿಷ್ಟ್ಯದಿಂದ ಸಿಗಲಿದೆ.

Tecno Spark 9 launch in India confirmed for July 18, price and key specs  revealed

ಇದಲ್ಲದೇ, Tecno Spark 9 ಸ್ಮಾರ್ಟ್‌ಫೋನ್ 128GB ವರೆಗೆ ಅಂತರ್ಗತ ಸಂಗ್ರಹಣೆ ಶಕ್ತಿಯನ್ನು ಸಹ ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, ಸ್ಕ್ವೇರ್ ಮಾದರಿಯ ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್ ಅನ್ನು ನೀಡಲಾಗಿದ್ದು, ಇದು 13-ಮೆಗಾಪಿಕ್ಸೆಲ್ AI ಡ್ಯುಯಲ್ ರಿಯರ್ ಕ್ಯಾಮೆರಾ ಜೊತೆಗೆ LED ಫ್ಲ್ಯಾಷ್ ಅನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆಯಾದರೂ, ಇದರ ಸಾಮರ್ಥ್ಯ ಎಷ್ಟು ಎಂಬ ಮಾಹಿತಿಯು ದೊರೆತಿಲ್ಲ. ಇನ್ನು Tecno Spark 9 ಸ್ಮಾರ್ಟ್‌ಫೋನಿನ ವಿಶೇಷತೆಯಾಗಿ, ಕ್ಯಾಮೆರಾ ಮಾಡ್ಯೂಲ್‌ನಲ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಹಾಗೆಯೇ, 5,000mAh ಬ್ಯಾಟರಿಯನ್ನು ಹೊಂದಿರುವ Tecno Spark 9 ಸ್ಮಾರ್ಟ್‌ಫೋನ್ ಡಿಟಿಎಸ್ ಚಾಲಿತ ಸ್ಪೀಕರ್ ಸೆಟಪ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ 12 ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸಲಿದೆ.

Tecno Spark 9 With 11GB RAM, 5,000mAh Battery to Launch in India on July 18  | Technology News

Tecno Spark 9 ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Tecno Spark 9 ಸ್ಮಾರ್ಟ್‌ಫೋನ್‌ 8,499 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. 4GB + 64GB ಸ್ಟೋರೇಜ್‌ ಆಯ್ಕೆಯ ಸ್ಮಾರ್ಟ್‌ಫೋನ್‌ 8,499 ರೂ.ಗಳಿಗೆ ಹಾಗೂ 6GB RAM + 128GB ಸ್ಟೋರೇಜ್‌ ಆಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ 9,499 ರೂ.ಗಳಾಗಿವೆ. ಇನ್ನು ಈ Tecno Spark 9 ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್ ಪ್ರೈಮ್ ಡೇ ಸೇಲ್ 2022 ರ ಭಾಗವಾಗಿ ಅಮೆಜಾನ್ ಜಾಲತಾಣದ ಮೂಲಕ ಇದೇ ಜುಲೈ 23 ರಿಂದ ಮಾರಾಟ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.

ಟೆಕ್ನೋ ಸ್ಪಾರ್ಕ್ 9 ಸ್ಪೆಸಿಫಿಕೇಶನ್ಸ್‌

ಪರ್ಫಾಮೆನ್ಸ್‌ MediaTek Helio A35
ಡಿಸ್‌ಪ್ಲೇ 6.5 inches (16.51 cm)
ಸ್ಟೋರೇಜ್‌ 64 GB
ಕ್ಯಾಮರಾ 16 MP
ಬ್ಯಾಟರಿ 6000 mAh
ಭಾರತದಲ್ಲಿ ಬೆಲೆ 7407
ರ‍್ಯಾಮ್ 3 GB

Tecno Spark 9 Launched In India Price, Specifications Details.