ದೇಶದಲ್ಲಿ Oppo Enco X2 ಇಯರ್ ಬಡ್ಸ್ ಬಿಡುಗಡೆ!..ಇಲ್ಲಿದೆ ಸಂಪೂರ್ಣ ಮಾಹಿತಿ!

20-07-22 07:28 pm       Source: Vijayakarnataka   ಡಿಜಿಟಲ್ ಟೆಕ್

Oppo ತನ್ನ Oppo Enco X2 ಇಯರ್‌ಬಡ್ ಸಾಧನವನ್ನು ಬಿಡುಗಡೆಗೊಳಿಸಿದ್ದು, ಬಾಹ್ಯ ಶಬ್ದವನ್ನು 45dB ವರೆಗೆ ಕಡಿಮೆ ಮಾಡುವ 1 ಎಂಎಂ ಡೈನಾಮಿಕ್ ಡ್ರೈವರ್‌ಗಳನ್ನು ಹೊತ್ತು Oppo Enco X2 ಇಯರ್ ಬಡ್‌ಗಳು ದೇಶದ ಮಾರುಕಟ್ಟೆಗೆ ಇಂದು ಎಂಟ್ರಿ ನೀಡಿವೆ.

ಭಾರತದಲ್ಲಿ ಇಂದು Oppo Reno 8 ಮತ್ತು Reno 8 Pro ಹಾಗೂ Oppo Pad Air ಸಾಧನಗಳ ಜೊತೆಗೆ ಬಹುನಿರೀಕ್ಷಿತ Oppo Enco X2 ಇಯರ್ ಬಡ್ ಸಾಧನವು ಸಹ ಬಿಡುಗಡೆಯಾಗಿದೆ. ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಇಯರ್ ಬಡ್ ಒಂದನ್ನು ಖರೀದಿಸಲು ಹುಡುಕುತ್ತಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು Oppo ತನ್ನ Oppo Enco X2 ಇಯರ್‌ಬಡ್ ಸಾಧನವನ್ನು ಬಿಡುಗಡೆಗೊಳಿಸಿದ್ದು, ಬಾಹ್ಯ ಶಬ್ದವನ್ನು 45dB ವರೆಗೆ ಕಡಿಮೆ ಮಾಡುವ 1 ಎಂಎಂ ಡೈನಾಮಿಕ್ ಡ್ರೈವರ್‌ಗಳನ್ನು ಹೊತ್ತು Oppo Enco X2 ಇಯರ್ ಬಡ್‌ಗಳು ದೇಶದ ಮಾರುಕಟ್ಟೆಗೆ ಇಂದು ಎಂಟ್ರಿ ನೀಡಿವೆ. ಹಾಗಾದರೆ, ನೂತನ Oppo Enco X2 ಇಯರ್ ಬಡ್‌ಗಳು ಹೇಗಿವೆ?, ಸಾಧನವು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

Oppo Enco X2 ಇಯರ್ ಬಡ್ ಸಾಧನದ ವೈಶಿಷ್ಟ್ಯಗಳು
ನೂತನ Oppo Enco X2 ಸಂಪೂರ್ಣ TWS (True Wireless Stereo) ಸಾಧನವಾಗಿದ್ದು, ಇದರ ಇಯರ್ ಬಡ್‌ಗಳು ಇನ್-ಇಯರ್ ವಿನ್ಯಾಸವನ್ನು ಹೊಂದಿವೆ. ಕರೆಗಳಿಗಾಗಿ ಮೂರು ಮೈಕ್ರೊಫೋನ್, ಡಾಲ್ಬಿ ಬೈನೌರಲ್ ರೆಕಾರ್ಡಿಂಗ್ ವೈಶಿಷ್ಟ್ಯ ಮತ್ತು ಓವಲ್-ಆಕಾರದ ಚಾರ್ಜಿಂಗ್ ಕೇಸ್‌ ನೊಂದಿಗೆ Oppo Enco X2 ಸಾಧನವನ್ನು ಪರಿಚಯಿಸಲಾಗಿದೆ. ಡ್ಯಾನಿಶ್ ಸ್ಪೀಕರ್ ತಯಾರಕ ಡೈನಾಡಿಯೊದ ಧ್ವನಿ ಟ್ಯೂನಿಂಗ್ ಅನ್ನು ಒಳಗೊಂಡಿರುವ Enco ಸಾಧನವು ಸಕ್ರಿಯ ಶಬ್ದ ರದ್ದತಿ (ANC) ವೈಶಿಷ್ಟ್ಯದಲ್ಲಿ ಬಾಹ್ಯ ಶಬ್ದವನ್ನು 45dB ವರೆಗೆ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದ ಹಾಗೂ ಅಲ್ಟ್ರಾಲೈಟ್ ಡಯಾಫ್ರಾಮ್‌ನೊಂದಿಗೆ 11 ಎಂಎಂ ಡೈನಾಮಿಕ್ ಡ್ರೈವರ್‌ಗಳು ವೈರ್‌ಲೆಸ್ ಹೈ ರೆಸ್ ಆಡಿಯೊಗಾಗಿ ಪ್ರಮಾಣೀಕರಿಸಲ್ಪಟ್ಟಿವೆ. ಇದರಿಂದ ಅತ್ಯುತ್ತಮ ಶಬ್ದ ಗುಣಮಟ್ಟ ಹಾಗೂ ವಿಷಯ ರಚನೆಕಾರರಿಗೆ ಸ್ಪಷ್ಟವಾದ ಆಡಿಯೊವನ್ನು ರೆಕಾರ್ಡ್ ಮಾಡಲು ಈ ಇಯರ್ ಬಡ್‌ಗಳು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

Ice universe ar Twitter: "Here it comes OPPO Enco X2,the latest flagship  earphones of OPPO. Its smooth cobblestone appearance just follows the  OPPO's classic family design language. This earphones will still cooperate

Oppo Enco X2 ಇಯರ್ ಬಡ್ ಸಾಧನವು ಬ್ಲೂಟೂತ್ v5.2 ಕನೆಕ್ಟಿವಿಟಿಯನ್ನು ಒಳಗೊಂಡಿದ್ದು, LHDC 4.0, AAC ಮತ್ತು SBC ಆಡಿಯೊ ಕೊಡೆಕ್‌ಗಳಿಗೆ ಗರಿಷ್ಟ 10 ಮೀಟರ್ ಆಪರೇಟಿಂಗ್ ದೂರವನ್ನು ಬೆಂಬಲಿಸುತ್ತದೆ. ಇದಲ್ಲದೆ, Oppo Enco X2 ಇಯರ್ ಬಡ್‌ಗಳಿಗಾಗಿ Oppo IPX5 ಸ್ಪ್ಲಾಶ್-ನಿರೋಧಕ ನಿರ್ಮಾಣವನ್ನು ಒದಗಿಸಿದೆ. Oppo Enco X2 ಇಯರ್ ಬಡ್ ಸಾಧನದ ಪ್ರತಿ ಇಯರ್‌ಬಡ್‌ನಲ್ಲಿ 57mAh ಬ್ಯಾಟರಿ ಮತ್ತು ಚಾರ್ಜಿಂಗ್ ಕೇಸ್‌ನಲ್ಲಿ 566mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಪ್ರತಿ ಇಯರ್ ಬಡ್‌ಗಳು ಒಂದೇ ಚಾರ್ಜ್‌ನಲ್ಲಿ 5 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಸಮಯವನ್ನು ಒದಗಿಸಲಿದ್ದರೆ, ಕೇಸ್‌ನೊಂದಿಗೆ ಇವುವುಗಳ ಸಂಯೋಜನೆಯು 20 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಬಂಡಲ್ ಮಾಡಿದ USB ಟೈಪ್-C ಕೇಬಲ್ ಮೂಲಕ ಕೇಸ್ ಅನ್ನು ಚಾರ್ಜ್ ಮಾಡಬಹುದು. ಇನ್ನು ಇದರ ಪ್ರತಿ ಇಯರ್‌ಬಡ್ 4.7 ಗ್ರಾಂ ತೂಗುತ್ತವೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 56.4 ಗ್ರಾಂ ತೂಕವಿದೆ.

Oppo Enco X2 TWS earbuds are confirmed to launch on July 18: What to expect  - Times of India

ಭಾರತದಲ್ಲಿ Oppo Enco X2 ಬೆಲೆ
ಭಾರತದಲ್ಲಿ Oppo Enco X2 ಇಯರ್ ಬಡ್ ಸಾಧನವನ್ನು 10,999 ರೂ. ಬೆಲೆಯಲ್ಲಿ ಪರಿಚಯಸಲಾಗಿದೆ. Oppo ದೇಶದ ಗ್ರಾಹಕರಿಗೆ OPPOverse ಬಂಡಲ್ ಕೊಡುಗೆಯನ್ನು ಸಹ ಪ್ರಕಟಿಸಿದ್ದು, ಗ್ರಾಹಕರು ಆಗಸ್ಟ್ 31 ರ ಮೊದಲು Oppo Enco X2 ಇಯರ್ ಬಡ್ ಸಾಧನ ಮತ್ತು Oppo Reno8 ಸರಣಿ ಫೋನ್‌ಗಳು ಹಾಗೂ IoT ಸಾಧನಗಳನ್ನು ಖರೀದಿಸಲು My OPPO ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿದರೆ, ಅವರು ಕೇವಲ 1 ರೂಪಾಯಿಗೆ 5,999 ರೂಪಾಯಿ ಮೌಲ್ಯದ Oppo ವಾಚ್ ಫ್ರೀ ಅನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದು ಎಂದು ಕಂಪೆನಿ ಹೇಳಿದೆ.

Oppo Enco X2 Tws Earbuds Launched In India.