ಬ್ರೇಕಿಂಗ್ ನ್ಯೂಸ್
26-07-22 05:13 pm Source: Vijayakarnataka ಡಿಜಿಟಲ್ ಟೆಕ್
ನೀವು ನಿದ್ರಿಸುವಾಗ ನಿಮ್ಮ ಸ್ಮಾರ್ಟ್‌ಫೋನನ್ನು ತಲೆದಿಂಬಿನ ಪಕ್ಕ ಇಡುತ್ತಿದ್ದರೆ ಕೂಡಲೇ ನಿಲ್ಲಿಸಿ. ಏಕೆಂದರೆ, ಸ್ಮಾರ್ಟ್‌ಫೋನಿನ ಅತಿಯಾದ ಬಳಕೆಯಿಂದ ಕೂದಲು ಉದುರುತ್ತಿದೆ ಎಂದು ಜರ್ನಲ್ ಆಫ್ ಕಾಸ್ಮೆಟಾಲಜಿ ಮತ್ತು ಟ್ರೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ. “ಸೆಲ್ ಫೋನ್ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗಬಹುದು” ಮತ್ತು "ದೀರ್ಘಕಾಲದ ಸೆಲ್ ಫೋನ್ ಬಳಕೆ ಕೂದಲು ನಷ್ಟಕ್ಕೆ ಕಾರಣವಾಗಬಹುದು" ಎಂದು ಈ ಅಧ್ಯಯನ ವರದಿಯಲ್ಲಿ ಹೇಳಿದ್ದು, ನಾವು ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಹೊರಸೂಸುವ ವಿದ್ಯುತ್ಕಾಂತೀಯ ವಿಕಿರಣವು ನಮ್ಮ ಕೂದಲಿನ ಆರೋಗ್ಯದ ಮೇಲೆ ಹೇಗೆ ಇನ್ನಿಲ್ಲದಂತೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಈ ಅಧ್ಯಯನ ವರದಿಯಲ್ಲಿ ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಹೊರಸೂಸುವ ವಿಕಿರಣಗಳು ಅಡ್ರಿನಲ್ ಮತ್ತು ಪಿಟ್ಯುಟರಿ ಹಾರ್ಮೋನ್‌ಗಳ ಸಿರ್ಕಾಡಿಯನ್ ಮಾದರಿಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ, ಇವು ಈಸ್ಟ್ರೊಜೆನ್ ಅನ್ನು ಹೆಚ್ಚಿಸುತ್ತವೆ ಮತ್ತು ಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ. ಇವೆಲ್ಲವೂ ಕೂದಲಿನ ಬೆಳವಣಿಗೆಯ ಚಕ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಕೂದಲು ಉದುರುವಿಕೆಗೆ ಕಾರಣವಾಗುವುದರ ಜೊತೆಗೆ, ಮೊಬೈಲ್ ಫೋನ್ ವಿಕಿರಣವು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ, ಕೂದಲಿನ ಬೆಳವಣಿಗೆಯ ನಿಯಂತ್ರಣವನ್ನು ತೊಂದರೆಗೊಳಿಸುತ್ತದೆ ಮತ್ತು ದ್ವಿತೀಯಕ ಕೂದಲು ಉದುರುವಿಕೆಗೆ ಕಾರಣವಾಗುವ ದೇಹದ ಇತರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಯುವಜನತೆಯ ಮೇಲೆ ಸಾಕಷ್ಟು ಪರಿಣಾವನ್ನು ಬೀರುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಸಂಶೋಧಕರು 46 ವರ್ಷ ವಯಸ್ಸಿನ ಪುರುಷ ರೋಗಿಯ ಪ್ರಕರಣವೊಂದನ್ನ ಉಲ್ಲೇಖಿಸಿದ್ದು, ಅಧ್ಯಯನಕ್ಕೆ ಒಳಗಾದ ಈ ರೋಗಿಯ ಎಡ ಕಿವಿಯ ಸುತ್ತಲೂ ಕೂದಲು ಉದುರುವಿಕೆಯ ಪ್ರದೇಶವನ್ನು ಗುರುತಿಸಿದ್ದಾರೆ. ನಾವು ಗುರುತಿಸಿದ ರೋಗಿಯ ಕೂದಲು ದುರ್ಬಲವಾಗಿತ್ತು, ನೆತ್ತಿಯ ಬುಡದಲ್ಲಿ ತೆಳ್ಳಗಿನ, ನಿಧಾನವಾಗಿ ಬೆಳೆಯುವ ಕೂದಲು ಕೂಡ ಕಂಡುಬಂದಿದೆ. ಸೆಲ್ ಫೋನ್ ಬಳಕೆಯ ದೀರ್ಘಾವಧಿಯ ಅವಧಿಯ ಮೊದಲು ಮತ್ತು ತಕ್ಷಣವೇ ಪರೀಕ್ಷಿಸಿದ ವಿಷಯಗಳಲ್ಲಿ, ರೋಗಿಯು ಫೋನ್ ಹಿಡಿದಿರುವ ಕಿವಿಯ ಸುತ್ತ ಇರುವ ಮಾನವ ಕೂದಲಿನ ಮೂಲ ಕೋಶಗಳಲ್ಲಿ DNA ಏಕ-ಎಳೆಯ ವಿದಳನದ ಹೆಚ್ಚಳವನ್ನು ತೋರಿಸಿದೆ. ಹಾಗಾಗಿ, ಫೋನ್‌ಗಳಿಂದ ಹೊರಸೂಸುವ ವಿಕಿರಣವು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಸಂಶೋಧಕರು ತೀರ್ಮಾನಿದ್ದಾರೆ.
ಮೊಬೈಲ್ ಫೋನ್ ಬಳಕೆಯನ್ನು ಸೀಮಿತಗೊಳಿಸುವುದು ಮತ್ತು ಮೊಬೈಲ್ ಫೋನ್ ಅನ್ನು ಕಿವಿಯಿಂದ ದೂರವಿಡುವುದು ಕೂದಲು ಸಂಪೂರ್ಣ ಪುನಃ ಬೆಳೆಯಲು ಸಹಾಯ ಮಾಡಬಹುದುಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಸಂಶೋಧನೆಯು ನಿರ್ಣಾಯಕ ಅಂಶವಲ್ಲ ಎಂಬುನ್ನು ಸಹ ಅವರು ಹೇಳಿದ್ದಾರೆ. ನೀವು ಸಾಮಾನ್ಯವಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹಿಡಿದಿರುವ ಸ್ಥಳದಲ್ಲಿ ಅಥವಾ ನಿಮ್ಮ ನೆತ್ತಿಯ ಮೇಲೆ ಅಸಾಮಾನ್ಯ ಕೂದಲು ಉದುರುವಿಕೆ ಮಾದರಿಗಳನ್ನು ನೀವು ಗಮನಿಸಿದರೆ, ದಯವಿಟ್ಟು ನೀವು ನಿದ್ರಿಸುವಾಗ ನಿಮ್ಮ ಸ್ಮಾರ್ಟ್‌ಫೋನನ್ನು ತಲೆದಿಂಬಿನ ಪಕ್ಕ ಇಡುವುದನ್ನು ನಿಲ್ಲಿಸಿ. ಹಾಗೂ ನೀವು ಇತರೆ ಯಾವುದೇ ಕಾರಣದಿಂದ ನೀವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರುಸಿತ್ತಿದ್ದೀರಾ ಎಂಬುದನ್ನು ತಿಳಿಯಲು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.
Electromagnetic Radiation From Smartphones Contributes To Hair Loss.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am