ಬ್ರೇಕಿಂಗ್ ನ್ಯೂಸ್
30-08-22 09:50 pm Source: Vijayakarnataka ಡಿಜಿಟಲ್ ಟೆಕ್
ಕಳೆದ ಹಲವು ದಿನಗಳಿಂದಲೂ ವದಂತಿಗಳಿಂದಲೇ ಸುದ್ದಿಯಾಗಿದ್ದ Oppo ಕಂಪೆನಿಯ ನೂತನ Oppo A57s ಸ್ಮಾರ್ಟ್‌ಫೋನನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಇಂದು ಅನಾವರಣಗೊಳಿಸಲಾಗಿದೆ. Oppo A ಸರಣಿಯಲ್ಲಿ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಪೋನ್ ಒಂದನ್ನು ಪರಿಚಯಿಸುವ ಬಗ್ಗೆ ಹಲವು ಮಾಹಿತಿಗಳು ಹೊರಬಿದ್ದ ನಂತರ, ಇದೀಗ HD+ ಡಿಸ್‌ಪ್ಲೇ, MediaTek Helio G35 ಪ್ರೊಸೆಸರ್, 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲದ 5,000mAh ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ Oppo A57s ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಹಾಗಾದರೆ, ನೂತನ Oppo A57s ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Oppo A57s ಸ್ಮಾರ್ಟ್‌ಫೋನಿನ ವಿಶೇಷಣಗಳು
ನೂತನ Oppo A57s ಸ್ಮಾರ್ಟ್‌ಫೋನ್ 600 nits ವರೆಗಿನ ಬ್ರೈಟ್‌ನೆಸ್ ಅನ್ನು ನೀಡುವ 6.56-ಇಂಚಿನ HD+ (1,612x720 ಪಿಕ್ಸೆಲ್‌ಗಳು) IPS LCD ಡಿಸ್‌ಪ್ಲೇಯನ್ನು ಹೊಂದಿದೆ, ಹುಡ್ ಅಡಿಯಲ್ಲಿ, ಆಕ್ಟಾ-ಕೋರ್ MediaTek Helio G35 ಪ್ರೊಸೆಸರ್ ಅನ್ನು ಹೊಂದಿರುವ Oppo A57s ಸ್ಮಾರ್ಟ್‌ಫೋನನ್ನು 4GB LPDDR4X RAM ಮತ್ತು 64GB ಸಂಗ್ರಹಣೆಯೊಂದಿಗೆ ಜೋಡಿಸಸಲಾಗಿದೆ. ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಒದಗಿಸಲಾಗಿದೆಯಾದರೂ ವಿಸ್ತರಣಾ ಮೆಮೊರಿ ಸಾಮರ್ಥ್ಯದ ಬಗ್ಗೆ ಮಾಹಿತಿ ದೊರೆತಿಲ್ಲ. ಇನ್ನು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ಅನ್ನು ರೇಟ್ ಅನ್ನು ಹೊಂದಿರುವ ಡ್ಯುಯಲ್-ಸಿಮ್ (ನ್ಯಾನೊ) ಸಾಮರ್ಥ್ಯದ ಈ ಸ್ಮಾರ್ಟ್‌ಫೋನ್ Android-12 ಆಧಾರಿತ ColorOS 12.1 ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, Oppo ಸ್ಮಾರ್ಟ್‌ಫೋನ್ A57s ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, f/1.8ಅಪರ್ಚರ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, f/2.4 ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಮೊನೊ ಕ್ಯಾಮೆರಾ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ f/2.0 ಅಪರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ, ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ v5.3, NFC, USB ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯಗಳಿವೆ. ವಿಶೇಷವಾಗಿ, Oppo A57s ಸ್ಮಾರ್ಟ್‌ಫೋನಿನಲ್ಲಿ 33W SuperVOOC ಚಾರ್ಜಿಂಗ್ ಬೆಂಬಲ 5,000mAh ಬ್ಯಾಟರಿ, ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕಗಳಿವೆ.
Oppo A57s ಬೆಲೆ ಮತ್ತು ಲಭ್ಯತೆ
ಇದೀಗ ಯುರೋಪಿಯನ್ ಮಾರುಕಟ್ಟೆಯಲ್ಲಷ್ಟೇ ಬಿಡುಗಡೆಯಾಗಿರುವ Oppo A57s ಸ್ಮಾರ್ಟ್‌ಫೋನಿನ ಬೆಲೆಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಆದರೆ, 13,999 ರೂ. ಬೆಲೆಯಲ್ಲಿ ಬಿಡುಗಡೆಗೊಂಡಿದ್ದ ಕಳೆದ Oppo A57 ಸ್ಮಾರ್ಟ್‌ಫೋನಿನ ಅದೇ ಬೆಲೆಯಲ್ಲಿ Oppo A57s ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಸ್ಕೈ ಬ್ಲೂ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿರುವ Oppo A57s ಸ್ಮಾರ್ಟ್‌ಫೋನನ್ನು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವ ಕುರಿತಂತೆ Oppo ಕಂಪೆನಿಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ, ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಟಿಪ್‌ಸ್ಟಾರ್‌ಗಳು ಹೇಳಿದ್ದಾರೆ.
Oppo A57s With 50 Megapixel Camera Launched Price, Specifications.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm