ಬೋಟ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌ ; 700 ಆಕ್ಟಿವ್‌ ಮೋಡ್‌

06-09-22 07:04 pm       Source: GIZBOT   ಡಿಜಿಟಲ್ ಟೆಕ್

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೆಲ್ತ್‌ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ವೆರಿಯೆಬಲ್ಸ್‌ ಸಾಕಷ್ಟು ಸಂಚಲನವನ್ನು ಸೃಷ್ಟಿಸಿವೆ. ಇದರಲ್ಲಿ ಬೋಟ್‌ ಕಂಪೆನಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೆಲ್ತ್‌ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ವೆರಿಯೆಬಲ್ಸ್‌ ಸಾಕಷ್ಟು ಸಂಚಲನವನ್ನು ಸೃಷ್ಟಿಸಿವೆ. ಇದರಲ್ಲಿ ಬೋಟ್‌ ಕಂಪೆನಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ತನ್ನ ಭಿನ್ನ ಶ್ರೇಣಿಯ ಸ್ಮಾರ್ಟ್‌ ವೆರಿಯೆಬಲ್ಸ್‌ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದೀಗ ಬ್ಲೂಟೂತ್‌ ಕಾಲ್‌ ಬೆಂಬಲಿಸುವ ಹೊಸ ಬೋಟ್‌ ಸ್ಟಾರ್ಮ್‌ ಪ್ರೊ ಕಾಲ್‌ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ.

ಹೌದು, ಬೋಟ್‌ ಕಂಪೆನಿ ಭಾರತದಲ್ಲಿ ಹೊಸ ಬೋಟ್‌ ಸ್ಟಾರ್ಮ್‌ ಪ್ರೊ ಕಾಲ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಇದು 100 ಕ್ಲೌಡ್-ಆಧಾರಿತ ವಾಚ್‌ ಫೇಸ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಫ್ಲೂಯಿಡ್ UI ಮತ್ತು ASAP ಚಾರ್ಜ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ದಿನವಿಡೀ ನಿಮ್ಮ ಆಕ್ಟಿವಿಟಿಗಳನ್ನು ಟ್ರ್ಯಾಕ್‌ ಮಾಡುವ 700 ಕ್ಕೂ ಹೆಚ್ಚು ಆಕ್ಟಿವ್‌ ಮೋಡ್‌ಗಳನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Buy boAt Storm Pro Call - Bluetooth Calling Smartwatch with in-built Speaker

ಬೋಟ್‌ ಸ್ಟಾರ್ಮ್‌ ಪ್ರೊ ಕಾಲ್‌ ಹೆಸರೇ ಸೂಚಿಸುವಂತೆ ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ವಾಚ್‌ 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 1.78 ಇಂಚಿನ 2.5D ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 100 ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳಿಗೆ ಬೆಂಬಲವನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಅನ್ನು ಧರಿಸುವವರಿಗೆ 10 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಇದಲ್ಲದೆ ಇದರಲ್ಲಿ ಇಂಟರ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್‌ ಅನ್ನು ಕೂಡ ನೀಡಲಾಗಿದೆ.

boAt Introduce 'Storm Pro Call' With biggest AMOLED Display yet! | Cashify  News

ಈ ಸ್ಮಾರ್ಟ್ ವಾಚ್‌ನಲ್ಲಿನ ಆರೋಗ್ಯ-ಸಂಬಂಧಿತ ಫೀಚರ್ಸ್‌ಗಳಿಗೂ ಕೂಡ ಪ್ರಾಮುಖ್ಯತೆ ನೀಡಲಾಗಿದೆ. ಅದರಂತೆ ಈ ಸ್ಮಾರ್ಟ್‌ವಾಚ್‌ 24x7 ಹೃದಯ ಬಡಿತದ ಮೇಲ್ವಿಚಾರಣೆ, ನೈಜ-ಸಮಯದ SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆಯನ್ನು ಮಾಡಲಿದೆ. ಇದಲ್ಲದೆ ಬೋಟ್ ಸ್ಟಾರ್ಮ್ ಪ್ರೊ ಕಾಲ್‌ ನಿಮ್ಮ ಆಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡುವ 700+ ಆಕ್ಟಿವ್‌ ಮೋಡ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟ್ ಅನ್ನು ಹೊಂದಿದೆ.

ಬೋಟ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌!..700+ ಆಕ್ಟಿವ್‌ ಮೋಡ್‌ ವಿಶೇಷ! | Boat  Storm Pro Call With Over 700 Active Modes Launched in India - Kannada Gizbot

ಇದರಲ್ಲಿ ಸ್ಟ್ರೆಂಥ್‌ ಟ್ರೈನಿಂಗ್‌, ನೃತ್ಯ (ಬ್ಯಾಲೆಟ್), ಏರೋಬಿಕ್ಸ್, ನಗುವುದು, ಸಂಗೀತ ನುಡಿಸುವುದು (ಪಿಯಾನೋ), ಗಿಟಾರ್, ವಾಕಿಂಗ್, ಓಟ, ಬಾಕ್ಸಿಂಗ್, ಫ್ರಿಸ್ಬೀ, ಜೂಡೋ, ಸ್ಕೇಟ್ಬೋರ್ಡಿಂಗ್, ಇತ್ಯಾದಿ ಮೋಡ್‌ಗಳು ಸೇರಿವೆ. ಇನ್ನು ಬೋಟ್ ಕ್ರೆಸ್ಟ್ ಗ್ಯಾಮಿಫಿಕೇಶನ್ ಅಪ್ಲಿಕೇಶನ್‌ನಲ್ಲಿ ಆಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಬೋಟ್‌ ಸ್ಟಾರ್ಮ್‌ ಪ್ರೊ ಕಾಲ್‌ ಸ್ಮಾರ್ಟ್ ವಾಚ್ ಬೋಟ್ ಎಎಸ್ಎಪಿ ಚಾರ್ಜ್ ಅನ್ನು ಪಡೆದಿದೆ. ಇದು ನಿಮ್ಮ ಸ್ಮಾರ್ಟ್ ವಾಚ್ ಅನ್ನು 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್‌ ಮಾಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಮಾರ್ಟ್

ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು ನೀವು ಕಡಿಮೆ ಬಳಕೆ ಮಾಡಿದರೆ 10 ದಿನಗಳ ಬಾಳಿಕೆಯನ್ನು ನೀಡಲಿದೆ. ಹೆಚ್ಚಿನ ಬಳಕೆಯಲ್ಲಿ ಒಂದು ವಾರದವರೆಗೆ ಬಾಳಿಕೆ ನೀಡಲಿದೆ. ಈ ಸ್ಮಾರ್ಟ್‌ವಾಚ್‌ನ ವಿಶೇಷ ಫೀಚರ್ಸ್‌ಗಳಲ್ಲಿ ಲೈವ್ ಕ್ರಿಕೆಟ್ ಸ್ಕೋರ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಮಾರ್ಗದರ್ಶಿ ಉಸಿರಾಟ, ಧ್ಯಾನ ಮೋಡ್, ಹವಾಮಾನ ನವೀಕರಣಗಳು, ಅಧಿಸೂಚನೆಗಳು, ಮ್ಯೂಸಿಕ್‌ ಮತ್ತು ಕ್ಯಾಮೆರಾ ಕಂಟ್ರೋಲ್‌ನಂಯತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬೋಟ್ ಸ್ಟಾರ್ಮ್ ಪ್ರೊ ಕಾಲ್‌ ಸ್ಮಾರ್ಟ್‌ವಾಚ್‌ ಬೆಲೆ 3,799ರೂ ಆಗಿದೆ. ಇದು ಬೋಟ್ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು ಚಾರ್ಕೋಲ್ ಬ್ಲ್ಯಾಕ್, ನೇವಿ ಬ್ಲೂ ಮತ್ತು ಸ್ಕಾರ್ಲೆಟ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

Boat storm pro call with over 700 active modes launched in india.