ಗೂಗಲ್‌ನ ಮೊದಲ ಪಿಕ್ಸಲ್‌ ಟ್ಯಾಬ್ಲೆಟ್‌ ಅನಾವರಣ: ಬೆಲೆ ಎಷ್ಟು?

11-05-23 08:18 pm       Source: Gizbot   ಡಿಜಿಟಲ್ ಟೆಕ್

ಗೂಗಲ್‌ IO 2023 ಗೂಗಲ್‌ ಪ್ರಿಯರಿಗೆ ಹಬ್ಬವಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್ಲೆಟ್‌ ಸೇರಿದಂತೆ ವಿವಿಧ ಡಿವೈಸ್‌ಗಳ ಬಗ್ಗೆ ಘೋಷಣೆ ಮಾಡಲಾಗಿದೆ.

ಗೂಗಲ್‌ IO 2023 ಗೂಗಲ್‌ ಪ್ರಿಯರಿಗೆ ಹಬ್ಬವಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್ಲೆಟ್‌ ಸೇರಿದಂತೆ ವಿವಿಧ ಡಿವೈಸ್‌ಗಳ ಬಗ್ಗೆ ಘೋಷಣೆ ಮಾಡಲಾಗಿದೆ. ಈ ನಡುವೆ ಪಿಕ್ಸಲ್‌ ಟ್ಯಾಬ್ಲೆಟ್‌ ಅನ್ನು ಅನಾವರಣ ಮಾಡಲಾಗಿದ್ದು, ಇದು 11 ಇಂಚಿನ ಡಿಸ್‌ಪ್ಲೇ ಹೊಂದಿದೆ.

ಹೌದು, ಗೂಗಲ್ I/O 2023 ಅಧಿಕೃತವಾಗಿ ಪ್ರಾರಂಭವಾಗಿದ್ದು, ವಾರ್ಷಿಕ ಡೆವಲಪರ್ ಈವೆಂಟ್‌ನಲ್ಲಿ ಗೂಗಲ್ ಹೊಸ ಹಾರ್ಡ್‌ವೇರ್ ಉತ್ಪನ್ನಗಳ ಬಗ್ಗೆ ಘೋಷಣೆ ಮಾಡಿದೆ. ಇದರಲ್ಲಿ ಪಿಕ್ಸಲ್‌ 7a ಸ್ಮಾರ್ಟ್‌ಫೋನ್ ಸಹ ಒಂದು. ಇದರೊಂದಿಗೆ ಗೂಗಲ್ ಮೊದಲ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಅನ್ನೂ ಸಹ ಅನಾವರಣ ಮಾಡಲಾಗಿದೆ. ಇವೆಲ್ಲದರ ಜೊತೆಗೆ ಪಿಕ್ಸಲ್ ಟ್ಯಾಬ್ಲೆಟ್(Pixel Tablet)ಅನ್ನು ಪರಿಚಯಿಸಿದ್ದು, ಇದು ವಿಭಿನ್ನ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರಗಳನ್ನು ತಿಳಿಯೋಣ.

Google launches its first Pixel Tablet globally with 11-inch display -  BusinessToday

ಪಿಕ್ಸಲ್ ಟ್ಯಾಬ್ಲೆಟ್‌ ಡಿಸ್‌ಪ್ಲೇ ವಿವರ: ಈ ಟ್ಯಾಬ್ಲೆಟ್‌ 11 ಇಂಚಿನ ಐಪಿಎಸ್‌ ಎಲ್‌ಸಿಡಿ ಪ್ಯಾನೆಲ್ ಆಯ್ಕೆ ಹೊಂದಿದ್ದು, ಸುತ್ತಲೂ ಸ್ವಲ್ಪ ದಪ್ಪವಾದ ಬೆಜೆಲ್‌ ಆಯ್ಕೆ ಪಡೆದುಕಂಡಿದೆ. ಇದನ್ನು ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಇರಿಸಿದಾಗ ಮುಂಭಾಗದ ಕ್ಯಾಮರಾ ಉದ್ದವಾದ ಮೇಲ್ಭಾಗದ ಅಂಚಿನ ಮೇಲೆ ಕಾಣಿಸಿಕೊಳ್ಳಲಿದೆ. ಇದರೊಂದಿಗೆ 2560 x 1600 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, 276PPI ನ ಪಿಕ್ಸಲ್ ಸಾಂದ್ರತೆಯನ್ನು ಪಡೆದುಕೊಂಡಿದೆ. ಹಾಗೆಯೇ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಪಿಕ್ಸಲ್ ಟ್ಯಾಬ್ಲೆಟ್‌ ಪ್ರೊಸೆಸರ್‌ ಸಾಮರ್ಥ್ಯ: ಗೂಗಲ್‌ನ ಈ ವಿಶೇಷ ಟ್ಯಾಬ್ಲೆಟ್‌ ಟೈಟಾನ್ M2 ಟೆನ್ಸರ್ G2 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 8GB RAM+ 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಎರಡು ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆ ಇರುವ ಟ್ಯಾಬ್ಲೆಟ್‌ ಆಗಿ ಇದು ಗುರುತಿಸಿಕೊಂಡಿದೆ.

Google launches its first Pixel Tablet, its mighty Apple iPad rival - India  Today

ಪಿಕ್ಸಲ್ ಟ್ಯಾಬ್ಲೆಟ್‌ ಕ್ಯಾಮೆರಾ ಹಾಗೂ ಇತರೆ: ಈ ಟ್ಯಾಬ್ಲೆಟ್‌ ಸಿಂಗಲ್‌ ರಿಯರ್‌ ಹಾಗೂ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ f/2.0 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಇದ್ದು, ಇದು 84 ಡಿಗ್ರಿ ವೀಕ್ಷಣೆ ಕೋನವನ್ನು ಹೊಂದಿದೆ. ಜೊತೆಗೆ ರಿಯರ್‌ನಲ್ಲಿ 8 ಮೆಗಾಪಿಕ್ಸಲ್ f/2.0 ಕ್ಯಾಮೆರಾ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಮೀಟಿಂಗ್‌ ಹಾಗೂ ಇನ್ನಿತರೆ ಸಂದರ್ಭದಲ್ಲಿ ಈ ಸೆನ್ಸರ್‌ಗಳು ಬಹಳ ಪ್ರಯೋಜನಕಾರಿ.

ಪಿಕ್ಸಲ್ ಟ್ಯಾಬ್ಲೆಟ್‌ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಟ್ಯಾಬ್ಲೆಟ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಮೂಲಕ 18W ನಲ್ಲಿ ಚಾರ್ಜ್ ಆಗುವ ಸೌಲಭ್ಯ ಪಡೆದುಕೊಂಡಿದೆ. ಈ ಮೂಲಕ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 12 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಇನ್ನುಳಿದಂತೆ ಕ್ವಾಡ್ ಸ್ಪೀಕರ್‌ಗಳು ಮತ್ತು ಮೂರು ಮೈಕ್ರೊಫೋನ್‌ ಆಯ್ಕೆ ಪಡೆದುಕೊಳ್ಳುವ ಮೂಲಕ ವಿಶೇಷ ಎನಿಸಿದೆ. ಇದರ ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ ವೈ-ಫೈ 6, ಡ್ಯುಯಲ್-ಬ್ಯಾಂಡ್ ವೈ-ಫೈ (2.4GHz ಮತ್ತು 5.0GHz), ಬ್ಲೂಟೂತ್ ಆವೃತ್ತಿ 5.2, ಅಲ್ಟ್ರಾ-ವೈಡ್‌ಬ್ಯಾಂಡ್ ರೇಡಿಯೋ ಚಿಪ್ ಸೇರಿದಂತೆ ಇನ್ನಿತರೆ ಅಗತ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್‌ 13 ರನ್ ಮಾಡಲಿದ್ದು, 50 ಕ್ಕೂ ಹೆಚ್ಚು ಗೂಗಲ್‌ ಆಪ್‌ಗಳಿಗೆ ಆಪ್ಟಿಮೈಸ್ ಮಾಡಲಾಗಿದೆ ಎಂದು ಗೂಗಲ್‌ ಮಾಹಿತಿ ನೀಡಿದೆ. ಇದರೊಂದಿಗೆ ಕ್ರೋಮಾಕಾಸ್ಟ್‌ ಸೌಲಭ್ಯ ಸಹ ಲಭ್ಯ.

Google Pixel Fold: latest rumors and everything we know so far | TechRadar

ಗೂಗಲ್ ಪಿಕ್ಸಲ್ ಟ್ಯಾಬ್ಲೆಟ್ ಬೆಲೆ ಮತ್ತು ಲಭ್ಯತೆ: 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಇರುವ ಟ್ಯಾಬ್ಲೆಟ್‌ಗೆ 40,900 ರೂ.ಗಳಿದ್ದು, 8GB + 256GB ವೇರಿಯಂಟ್‌ಗೆ 49,100ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ ಈ ಟ್ಯಾಬ್ಲೆಟ್‌ ಪಿಂಗಾಣಿ, ರೋಸ್ ಮತ್ತು ಹ್ಯಾಝೆಲ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ.

googles first pixel tablet launch in india details.