Fitbit ಸ್ಮಾರ್ಟ್‌ವಾಚ್‌ಗಳಲ್ಲಿ ಇನ್ಮುಂದೆ ಆಕರ್ಷಕ ಫೀಚರ್ಸ್‌ ಲಭ್ಯ!

17-06-23 07:34 pm       Source: Gizbot   ಡಿಜಿಟಲ್ ಟೆಕ್

ಸ್ಮಾರ್ಟ್ ವಾಚ್‌ಗಳು ಇಂದು ಸಮಯ ಹಾಗೂ ಇನ್ನಿತರೆ ಮಾಹಿತಿ ನೀಡುವುದರೊಂದಿಗೆ ಬಳಕೆದಾರರ ಆರೋಗ್ಯ ಸಂಬಂಧ ಎಲ್ಲಾ ಅವರ ಮೇಲೆ ಸದಾ ಕಣ್ಣಿಟ್ಟಿರುತ್ತವೆ.

ಸ್ಮಾರ್ಟ್ ವಾಚ್‌ಗಳು ಇಂದು ಸಮಯ ಹಾಗೂ ಇನ್ನಿತರೆ ಮಾಹಿತಿ ನೀಡುವುದರೊಂದಿಗೆ ಬಳಕೆದಾರರ ಆರೋಗ್ಯ ಸಂಬಂಧ ಎಲ್ಲಾ ಅವರ ಮೇಲೆ ಸದಾ ಕಣ್ಣಿಟ್ಟಿರುತ್ತವೆ. ಈ ನಡುವೆ ಗೂಗಲ್ ಮಾಲೀಕತ್ವದ ಫಿಟ್‌ಬಿಟ್ ಒತ್ತಡವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡಲು ಫೀಚರ್ಸ್‌ನೊಂದಿಗೆ ಬರುತ್ತಿದೆ.

ಹೌದು, ನಾವು ಇತ್ತೀಚೆಗೆ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಅದರಲ್ಲೂ ಕಡಿಮೆ ದೈಹಿಕ ವ್ಯಾಯಾಮ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಉತ್ತಮ ನಿದ್ರೆಯ ಕೊರತೆಯನ್ನು ಇಂತಹ ಸಮಸ್ಯೆಗಳು ನಿರ್ಮಾಣ ಆಗುತ್ತವೆ. ಇವು ಮಾನಸಿಕ ಆರೋಗ್ಯವನ್ನೂ ಸಹ ಕೆಡಿಸುತ್ತವೆ. ಇದರಿಂದಾಗಿ ಜನರು ಮಧುಮೇಹ, ಹೃದ್ರೋಗ, ಪಾರ್ಶ್ವವಾಯು ಮತ್ತು ಬೊಜ್ಜು ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ, ಇಂತಹ ಸಮಸ್ಯೆಗಳು ಆರಂಭ ಆಗುವ ಮುನ್ನವೇ ಚಿವುಟಿ ಹಾಕಬಹುದಾಗಿದೆ.

Introducing Fitbit Sense: The Advanced Health Smartwatch Featuring  Innovation in Stress Management, Heart Health, and Wellness - Fitbit Blog

ನಮ್ಮ ದೇಹವು ಒಂದು ನಿರ್ದಿಷ್ಟ ರೀತಿಯಲ್ಲಿ ಒತ್ತಡಕ್ಕೆ ಪ್ರತಿಕ್ರಿಯಿಸುತ್ತದೆ. ಆದರೆ, ಅದು ಹೆಚ್ಚಾದರೆ ಅನಾಹುತಕ್ಕೆ ಕಾರಣ ಆಗುತ್ತದೆ. ಈ ಕಾರಣಕ್ಕಾಗಿಯೇ ಈ ಒತ್ತಡವನ್ನು ಪತ್ತೆ ಮಾಡಿಕೊಳ್ಳುವ ಮೂಲಕ ಸಮಸ್ಯೆ ಸರಿಪಡಿಸಿಕೊಳ್ಳಬಹುದು. ಇದರಿಂದಾಗಿಯೇ ಈಗ ಈ ಗೂಗಲ್ ಮಾಲೀಕತ್ವದ ಫಿಟ್‌ಬಿಟ್ (Fitbit) ನಿಮಗೆ ಒತ್ತಡವನ್ನು ಉತ್ತಮವಾಗಿ ಪತ್ತೆ ಸಹಾಯ ಮಾಡುತ್ತದೆ. ಹಾಗಿದ್ರೆ, ಬನ್ನಿ ಏನೆಲ್ಲಾ ಹೊಸ ಫೀಚರ್ಸ್‌ ಲಭ್ಯ ಗಮನಿಸೋಣ.

ದೇಹದಲ್ಲಿ ಒತ್ತಡದ ಚಿಹ್ನೆಗಳನ್ನು ಗುರುತಿಸುತ್ತದೆ: ಬಳಕದಾರರು ಒತ್ತಡದಲ್ಲಿದ್ದಾಗ ಅವರ ಅಂಗೈನಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ. ಜೊತೆಗೆ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಏನೋ ಆಗುತ್ತಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಅದರಂತೆ ಈ ಫಿಟ್‌ಬಿಟ್‌ನ ನಿರಂತರ ಎಲೆಕ್ಟ್ರೋಡರ್ಮಲ್ ಚಟುವಟಿಕೆ (ಸಿಇಡಿಎ) ಸೆನ್ಸರ್‌ ದಿನವಿಡೀ ಮೈಕ್ರೊ ಸ್ವೆಟ್ ಮಟ್ಟದಲ್ಲಿನ ಬದಲಾವಣೆಗಳನ್ನು ಅಳೆಯಲಿದ್ದು, ಹೃದಯ ಬಡಿತದ ವ್ಯತ್ಯಾಸ ಮತ್ತು ಚರ್ಮದ ತಾಪಮಾನದಂತಹ ಮೆಟ್ರಿಕ್‌ಗಳನ್ನು ಅಳೆಯುತ್ತದೆ. ಈ ಪ್ಯಾರಾಮೀಟರ್‌ಗಳು ನಿರ್ದಿಷ್ಟ ಮಿತಿಯನ್ನು ಮೀರಿದಾಗ ನೋಟಿಫಿಕೇಶನ್‌ ನೀಡುತ್ತದೆ.

7 ways Fitbit can help you stress less

ಒತ್ತಡ ನಿವಾರಣೆ: ಇನ್ಮುಂದೆ ಫಿಟ್‌ಬಿಟ್ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೇಹ ಪ್ರತಿಕ್ರಿಯೆ ನೋಟಿಫಿಕೇಶನ್‌ ಸ್ವೀಕಾರ ಮಾಡಿದ ನಂತರ ಬಳಕೆದಾರರು ಒತ್ತಡದ ಸಮಯದಲ್ಲಿ ಅನುಭವಿಸಿದ ಭಾವನೆಗಳನ್ನು ಫಿಟ್‌ಬಿಟ್ ಆಪ್‌ನಲ್ಲಿ ಲಾಗ್ ಮಾಡಬಹುದು ಮತ್ತು ಒತ್ತಡವನ್ನು ನಿರ್ವಹಿಸಲು ಚಟುವಟಿಕೆಗಳ ಗುಂಪಿನಿಂದ ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಫಿಟ್‌ಬಿಟ್ ಧನಾತ್ಮಕ ಭಾವನೆಗಳನ್ನು ಸಹ ಸೂಚಿಸಲಿದ್ದು, ಬಳಕೆದಾರರ ದೇಹವು ಒತ್ತಡಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.

ಒತ್ತಡ ನಿರ್ವಹಣೆ ಸ್ಕ್ರೋರ್‌: ಈ ಫೀಚರ್ಸ್‌ನಲ್ಲಿ ನಿದ್ರೆ ಮತ್ತು ಚಟುವಟಿಕೆಯ ಮಟ್ಟಗಳು ಬಳಕೆದಾರರ ದೈಹಿಕ ಒತ್ತಡವನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಇದು ಸೊನ್ನೆಯಿಂದ 100 ರ ನಡುವಿನ ಅಂಕವನ್ನು ನೀಡಲಿದ್ದು, ಹೆಚ್ಚಿನ ಸ್ಕೋರ್ ಎಂದರೆ ದೇಹವು ಹೆಚ್ಚು ಒತ್ತಡದ ಲಕ್ಷಣಗಳನ್ನು ಹೊಂದಿದೆ ಎಂದರ್ಥ. ಹಾಗೆಯೇ ಕಡಿಮೆ ಸ್ಕೋರ್ ಕಡಿಮೆ ಒತ್ತಡವನ್ನು ಹೊಂದಿದೆ ಎಂದರ್ಥ.

Fitbit Sense 2 review: A smart way to focus on fitness | Digital Trends

ರಿಲ್ಯಾಕ್ಸ್ ಆಪ್‌: ಫಿಟ್‌ಬಿಟ್‌ನ ರಿಲ್ಯಾಕ್ಸ್ ಆಪ್‌ ವೈಯಕ್ತೀಕರಿಸಿದ ಉಸಿರಾಟದ ಅವಧಿಗಳೊಂದಿಗೆ ಬಳಕೆದಾರರನ್ನು ಖಿನ್ನತೆಯಿಂದ ಪಾರು ಮಾಡುತ್ತದೆ. ಇದರೊಂದಿಗೆ ಬಳಕೆದಾರರು ಮಲಗುವ ಮುನ್ನ ನಡೆಯುವುದರಿಂದ ಹಿಡಿದು ಮೇಲೆ ಏಳುವ ವರೆಗೂ ಫಿಟ್‌ಬಿಟ್ ಆಪ್‌ನಲ್ಲಿ 400 ಸೆಷನ್‌ಗಳನ್ನು ಪ್ರಯತ್ನಿಸಬಹುದು. ಇದರಿಂದಾಗಿ ಬಳಕೆದಾರರು ಹಲವು ಅನುಕೂಲ ಪಡೆದುಕೊಳ್ಳಬಹುದು.

ನಿದ್ರೆಯ ಮಾದರಿ: ಇದಿಷ್ಟು ಮಾತ್ರವಲ್ಲದೆ ನಿದ್ರೆಯ ಮಾದರಿಗಳ ಮೇಲೆ ಸದಾ ಕಣ್ಣಿಡಲಿದ್ದು, ಒತ್ತಡವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಜೊತೆಗೆ ಸುಧಾರಿತ ನಿದ್ರೆಯ ಮೆಟ್ರಿಕ್‌ಗಳನ್ನು ಒಳಗೊಂಡಂತೆ ನಿದ್ರೆಯ ಒಂದು ತಿಂಗಳ ಅವಧಿಯ ವಿಶ್ಲೇಷಣೆ ಮಾಡಲಿದ್ದು, ನಿಮ್ಮ ದೇಹಕ್ಕೆ ಎಷ್ಟು ನಿದ್ರೆ ಅವಶ್ಯಕ ಎಂದು ತಿಳಿದುಕೊಳ್ಳಬಹುದು. ಈ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ.

Fitbit launches Sense, Versa 3 and Inspire 2 in India: Price, specifications  and more

ದೈನಂದಿನ ರೆಡಿನೆಸ್ ಸ್ಕೋರ್: ಫಿಟ್‌ಬಿಟ್‌ ಡೈಲಿ ರೆಡಿನೆಸ್ ಸ್ಕೋರ್ ಮೂಲಕ ಪ್ರತಿದಿನ ಬೆಳಗ್ಗೆ ಫಿಟ್‌ಬಿಟ್ ಹೃದಯ ಬಡಿತದ ವ್ಯತ್ಯಾಸ (HRV), ಇತ್ತೀಚಿನ ನಿದ್ರೆ ಮತ್ತು ಚಟುವಟಿಕೆಯ ಆಧಾರದ ಮೇಲೆ 0-100 ರಿಂದ ವೈಯಕ್ತಿಕಗೊಳಿಸಿದ ಸ್ಕೋರ್‌ಗಳನ್ನು ನೀಡುತ್ತದೆ. ಇದು ದೇಹಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ಎಲ್ಲಾ ಹೊಸ ಫೀಚರ್ಸ್‌ನಿಂದ ಫಿಟ್‌ಬಿಟ್‌ ವಾಚ್‌ಗಳು ಇನ್ನಷ್ಟು ಪ್ರೀಮಿಯಂ ಆಗಲಿವೆ.

fitbit smartwatches are getting stress monitoring features details.