ಈ ದೈತ್ಯ ಮೊಬೈಲ್‌ಗೆ ಭಾರೀ ಡಿಸ್ಕೌಂಟ್‌!..ಇಂದೇ ಕೊನೆಯ ದಿನ!

21-06-23 09:12 pm       Source: Gizbot   ಡಿಜಿಟಲ್ ಟೆಕ್

ಜನಪ್ರಿಯ ಅಮೆಜಾನ್ ಇ ಕಾಮರ್ಸ್ ತಾಣ ಒಂದಿಲ್ಲೊಂದು ಮಾರಾಟ ಮೇಳ ಪ್ರಾರಂಬಿಸುತ್ತಾ ಹಗರಾಹಕರನ್ನು ಸೆಳೆಯುತ್ತದೆ. ಅದೇ ರೀತಿ ಜೂನ್ 15 ರಿಂದ ಆಯೋಜಿಸಿದ್ದ, ಟೆಕ್ನೋ ಫ್ಲ್ಯಾಗ್‌ಶಿಪ್‌ ಡೇಸ್‌ ಸೇಲ್‌ (Tecno Flagship Days Sale) ಮೇಳವು ಇಂದು ಮುಕ್ತಾಯವಾಗಲಿದೆ. ಸಂಸ್ಥೆಯ ದೈತ್ಯ ಫೋನ್‌ಗಳಿಗೆ ಸೇಲ್‌ನಲ್ಲಿ ಬೊಂಬಾಟ್‌ ರಿಯಾಯಿತಿ ಲಭ್ಯ.

ಜನಪ್ರಿಯ ಅಮೆಜಾನ್ ಇ ಕಾಮರ್ಸ್ ತಾಣ ಒಂದಿಲ್ಲೊಂದು ಮಾರಾಟ ಮೇಳ ಪ್ರಾರಂಬಿಸುತ್ತಾ ಹಗರಾಹಕರನ್ನು ಸೆಳೆಯುತ್ತದೆ. ಅದೇ ರೀತಿ ಜೂನ್ 15 ರಿಂದ ಆಯೋಜಿಸಿದ್ದ, ಟೆಕ್ನೋ ಫ್ಲ್ಯಾಗ್‌ಶಿಪ್‌ ಡೇಸ್‌ ಸೇಲ್‌ (Tecno Flagship Days Sale) ಮೇಳವು ಇಂದು ಮುಕ್ತಾಯವಾಗಲಿದೆ. ಸಂಸ್ಥೆಯ ದೈತ್ಯ ಫೋನ್‌ಗಳಿಗೆ ಸೇಲ್‌ನಲ್ಲಿ ಬೊಂಬಾಟ್‌ ರಿಯಾಯಿತಿ ಲಭ್ಯ.

ಹಭದು, ಅಮೆಜಾನ್‌ ಪ್ಲಾಟ್‌ಫಾರ್ಮ್ ಆಯೋಜಿಸಿದ್ದ, ಟೆಕ್ನೋ ಫ್ಲ್ಯಾಗ್‌ಶಿಪ್‌ ಡೇಸ್‌ ಸೇಲ್‌ (Tecno Flagship Days Sale) ಇಂದು (ಜೂ. 21) ಕೊನೆಯಾಗಲಿದೆ. ಈ ಮಾರಾಟ ಮೇಳದಲ್ಲಿ ಟೆಕ್ನೋ ಫ್ಯಾಂಟಮ್‌, ಟೆಕ್ನೋ ಫ್ಯಾಂಟಮ್‌ V ಫೋಲ್ಡ್‌ ಸೇರಿದಂತೆ ಕೆಲವು ಜನಪ್ರಿಯ ಮೊಬೈಲ್‌ಗಳಿ ಭರ್ಜರಿ ಡಿಸ್ಕೌಂಟ್‌ ಪಡೆದಿದ್ದು, ಆಫರ್‌ನಲ್ಲಿ ದೈತ್ಯ ಫೋನ್‌ ಖರೀದಿಸಬೇಕು ಎನ್ನುವ ಗ್ರಾಹಕರನ್ನು ಸೆಳೆಯುತ್ತಿವೆ.

Tecno Phantom X2 Pro 5G: A smartphone with World's First Retractable Lens |  Tech News

ಈ ಸೇಲ್‌ನಲ್ಲಿ ಟೆಕ್ನೋ ಸಂಸ್ಥೆಯ ಜನಪ್ರಿಯ ಫ್ಲ್ಯಾಗ್‌ಶಿಪ್‌ ಫೋನ್‌ಗಳಲ್ಲಿ ಒಂದಾದ ಟೆಕ್ನೋ ಫ್ಯಾಂಟಮ್‌ X2 5G ಸಹ ಆಕರ್ಷಕ ರಿಯಾಯಿತಿ ಪಡೆದಿದೆ. 8GB RAM + 256 GB ವೇರಿಯಂಟ್‌ ಫೋನ್‌ 29% ರಷ್ಟು ಡಿಸ್ಕೌಂಟ್ ಪಡೆದಿದ್ದು, 36,999ರೂ. ಗಳಿಗೆ ಖರಿದಿಗೆ ಲಭ್ಯ. ಇದರೊಂದಿಗೆ ಬ್ಯಾಂಕ್‌ ಆಫರ್‌, ನೋ ಕಾಸ್ಟ್‌ ಇಎಮ್‌ಐ ಸೌಲಭ್ಯದ ಆಯ್ಕೆಗಳು ಸಹ ಲಭ್ಯ. ಹಾಗಾದರೆ ಟೆಕ್ನೋ ಫ್ಯಾಂಟಮ್‌ X2 5G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಫ್ಯಾಂಟಮ್‌ X2 5G ಡಿಸ್‌ಪ್ಲೇ ಮತ್ತು ವಿನ್ಯಾಸ : ಟೆಕ್ನೋ ಫ್ಯಾಂಟಮ್‌ X2 5G ಸ್ಮಾರ್ಟ್‌ಫೋನ್‌ 6.8 ಇಂಚಿನ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ವನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 93.3% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಪಡೆದಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 120 Hz ರಿಫ್ರೆಶ್‌ ರೇಟ್‌ ಸಪೋರ್ಟ್ ಅನ್ನು ಒಳಗೊಂಡಿದೆ. ಇದು ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಪಡೆದಿದೆ.

ಟೆಕ್ನೋ ಫ್ಯಾಂಟಮ್‌ X2 5G ಪ್ರೊಸೆಸರ್‌ ಪವರ್ ಯಾವುದು : ಟೆಕ್ನೋ ಫ್ಯಾಂಟಮ್‌ X2 5G ಸ್ಮಾರ್ಟ್‌ಫೋನ್‌ 4nm ಮೀಡಿಯಾಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದೆ. ಅಲ್ಲದೆ ಮಾಲಿ-G710 MC10 GPU ಸಪೋರ್ಟ್‌ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 12 ಆಧಾರಿತ HiOS 12.0 ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 8 GB RAM ಮತ್ತು 256 GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

Tecno's flagship device, the Tecno Phantom X2, is out! Here's what to  expect | Digit

ಟೆಕ್ನೋ ಫ್ಯಾಂಟಮ್‌ X2 5G ಕ್ಯಾಮೆರಾ ಸೆಟ್‌ಅಪ್‌ ಹೇಗಿದೆ : ಟೆಕ್ನೋ ಫ್ಯಾಂಟಮ್‌ X2 5G ಮೊಬೈಲ್‌ ತ್ರಿವಳಿ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ , ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಟೆಕ್ನೋ ಫ್ಯಾಂಟಮ್‌ X2 5G ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು : ಟೆಕ್ನೋ ಫ್ಯಾಂಟಮ್‌ X2 5G ಸ್ಮಾರ್ಟ್‌ಫೋನ್‌ 5,160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದು 45W ವೇಗದ ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಇದರಿಂದ ಫೋನ್‌ ಅನ್ನು ಕೇವಲ 20 ನಿಮಿಷಗಳಲ್ಲಿ 50% ರಷ್ಟು ಚಾರ್ಜ್ ಮಾಡಬಹುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 2.4G, 5G & Wi-Fi 6, ಬ್ಲೂಟೂತ್ 5.3, GPS, OTG, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ದಿಕ್ಸೂಚಿ, ಆರು-ಆಕ್ಸಿಸ್ ಗೈರೋ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ.

Tecno flagship days best deals on tecno phantom x2 5g phone.