ಇಯರ್‌ಬಡ್ಸ್‌ ಖರೀದಿಸಬೇಕೆ? ಇಲ್ಲಿವೆ 2,500 ರೂ. ಒಳಗೆ ಲಭ್ಯವಾಗುವ ಬೆಸ್ಟ್‌ ಇಯರ್‌ಬಡ್ಸ್‌!

24-06-23 09:02 pm       Source: Gizbot   ಡಿಜಿಟಲ್ ಟೆಕ್

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಎಷ್ಟು ಮುಖ್ಯವೋ ಅದರ ಜೊತೆಗೊಂದು ಇಯರ್‌ಬಡ್ಸ್‌ ಕೂಡ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಕೂಡ ಆಕರ್ಷಕ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿವೆ.

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಎಷ್ಟು ಮುಖ್ಯವೋ ಅದರ ಜೊತೆಗೊಂದು ಇಯರ್‌ಬಡ್ಸ್‌ ಕೂಡ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಕೂಡ ಆಕರ್ಷಕ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಬಜೆಟ್‌ ಬೆಲೆಯ ಇಯರ್‌ಬಡ್ಸ್‌ಗಳು ಸಾಕಷ್ಟು ಗಮನಸೆಳೆದಿವೆ.

ಹೌದು, ಭಾರತದಲ್ಲಿ 2,500 ರೂ. ಬೆಲೆ ಒಳಗೆ ಲಭ್ಯವಾಗುವ ಇಯರ್‌ಬಡ್ಸ್‌ಗಳಿಗೆ ಭಾರಿ ಬೇಡಿಕೆಯಿದೆ. ಆದರೆ ಮ್ಯೂಸಿಕ್‌ ಪ್ರಿಯರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಇಯರ್‌ಬಡ್ಸ್‌ಗಳನ್ನೇ ಖರೀದಿಸಲು ಬಯಸುತ್ತಾರೆ. ಹಾಗಾದ್ರೆ ಭಾರತದಲ್ಲಿ 2,500ರೂ. ಒಳಗೆ ಲಭ್ಯವಾಗುವ ಹಾಗೂ ಅತ್ಯುತ್ತಮ ಸೌಂಡ್‌ ನೀಡುವ ಬೆಸ್ಟ್‌ ಇಯರ್‌ಬಡ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Best True Wireless Earbuds Under 5000 In India (June 2023) | Geekman

ಒಪ್ಪೋ ಎನ್ಕೋ ಏರ್‌ 2

ಒಪ್ಪೋ ಎನ್ಕೋ ಏರ್‌ 2 ವಾಯರ್‌ಲೆಸ್‌ ಇಯರ್‌ಬಡ್ಸ್‌ ಜನಪ್ರಿಯ ಇಯರ್‌ಬಡ್ಸ್‌ಗಳಲ್ಲಿ ಒಂದಾಗಿದೆ. ಇದರ ಬೆಲೆ 2,299ರೂ. ಆಗಿದ್ದು ಥೇಟ್‌ ಆಪಲ್ ಏರ್‌ಪಾಡ್‌ ಮಾದರಿಯಲ್ಲಿಯೇ ಕಾಣಲಿದೆ. ಇನ್ನು ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಹೊಂದಿದ್ದು, ಸುತ್ತಮುತ್ತಲಿನ ಶಬ್ದವನ್ನು ಕಂಟ್ರೋಲ್‌ ಮಾಡಲಿದೆ. ಇದು ನಿಮಗೆ ಒಟ್ಟು 24 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಅನ್ನು ನೀಡಲಿದೆ.

ಫ್ಲೆಕ್ಸ್‌ನೆಸ್ಟ್ ಫ್ಲೆಕ್ಸ್‌ಡಬ್ಸ್

ಫ್ಲೆಕ್ಸ್‌ನೆಸ್ಟ್ ಫ್ಲೆಕ್ಸ್‌ಡಬ್ಸ್‌ ಇಯರ್‌ಬಡ್ಸ್‌ ಕೂಡ 2,499 ರೂ.ಬೆಲೆ ವಿಭಾಗದಲ್ಲಿ ಲಭ್ಯವಾಗುವ ಅತ್ಯುತ್ತಮ ಇಯರ್‌ಬಡ್ಸ್‌ ಆಗಿದೆ. ಇದು ನಿಮಗೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ನೀಡಲಿದ್ದು, ಸುತ್ತಮುತ್ತಲಿನ ಶಬ್ದಗಳನ್ನು ಕಂಟ್ರೋಲ್‌ ಮಾಡಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಹಗುವಾದ ವಿನ್ಯಾಸವನ್ನು ಹೊಂದಿದ್ದು, ನಿಮ್ಮ ಕಿವಿಗೆ ತಕ್ಕಂತೆ ಹೊಂದಿಕೊಳ್ಳಲಿದೆ. ಇನ್ನು ಅಪ್ಲಿಕೇಶನ್ ಬೆಂಬಲದ ಅನುಪಸ್ಥಿತಿಯು ವೈಯಕ್ತಿಕ ಆದ್ಯತೆಗಳಿಗೆ ಇಯರ್‌ಬಡ್ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ.

Best TWS Earbuds You Can Buy Under Rs 5,000 in India in August 2021 - News18

ರೆಡ್‌ಮಿ ಬಡ್ಸ್ 3 ಲೈಟ್

ರೆಡ್‌ಮಿ ಬಡ್ಸ್ 3 ಲೈಟ್ ಅನ್ನು ಭಾರತದಲ್ಲಿ ಕೇವಲ 1,890 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದು ಕಾಂಪ್ಯಾಕ್ಟ್ ವೈರ್‌ಲೆಸ್ ಇಯರ್‌ಬಡ್ಸ್‌ ಆಗಿದ್ದು, 18 ಗಂಟೆಗಳವರೆಗೆ ಪ್ಲೇಬ್ಯಾಕ್ ಅನ್ನು ನೀಡಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಟಚ್‌ ಕಂಟ್ರೋಲ್‌ ಅನ್ನು ಸಹ ಹೊಂದಿದೆ. ಜೊತೆಗೆ ಮ್ಯೂಸಿಕ್‌ ಕಂಟ್ರೋಲ್‌ ಮತ್ತು ಕರೆಗಳನ್ನು ಸ್ವೀಕರಿಸುವ ಆಯ್ಕೆಯನ್ನು ಸಹ ಹೊಂದಿದೆ. ಹೆಚ್ಚು ಗಂಟೆಗಳ ಕಾಲ ಮ್ಯೂಸಿಕ್‌ ಪ್ಲೇ ಮಾಡಲು ಬಯಸುವವರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ.

noise be gone earbuds for Sale OFF 72%

ಒನ್‌ಪ್ಲಸ್‌ ನಾರ್ಡ್ ಬಡ್ಸ್

ಒನ್‌ಪ್ಲಸ್‌ ನಾರ್ಡ್ ಬಡ್ಸ್ ನಿಮಗೆ 2,499ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ನಿಮಗೆ ಒಟ್ಟು 24 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಅನ್ನು ನೀಡಲಿದೆ. ಈ ಇಯರ್‌ಬಡ್ಸ್‌ ಮ್ಯೂಸಿಕ್‌ ಕಂಟ್ರೋಲ್‌, ಸ್ಮಾರ್ಟ್‌ಫೋನ್‌ ಕಾಲ್‌ ಕಂಟ್ರೋಲ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಮ್ಯೂಸಿಕ್‌ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿರುವ ಈ ಇಯರ್‌ಬಡ್ಸ್‌ ಇತ್ತಿಚಿಗೆ ರಿಯಾಯಿತಿ ದರದಲ್ಲಿ ಕೂಡ ಲಭ್ಯವಾಗ್ತಿದೆ. ಆದರೆ ಇದು ಒಮ್ಮೊಮ್ಮೆ ಡೀಫಾಲ್ಟ್ ಆಡಿಯೊ ಪ್ರೊಫೈಲ್ ಬಾಸ್-ಹೆವಿ ಸೌಂಡ್ ಕಡೆಗೆ ವಾಲುತ್ತದೆ, ಇದು ಕೆಲವರಿಗೆ ಇಷ್ಟವಾಗದಿರುವ ಸಾದ್ಯತೆ ಕೂಡ ಇದೆ.

JBL ವೇವ್ 200

ಮ್ಯೂಸಿಕ್‌ ಪ್ರಿಯರ ಹಾಟ್‌ಫೇವರಿಟ್‌ ಇಯರ್‌ಬಡ್ಸ್‌ಗಳಲ್ಲಿ ಇದು ಕೂಡ ಒಂದಾಗಿದೆ. ಇದು ಬ್ಲೂಟೂತ್ 5.0, ವಾಯ್ಸ್‌ ಅಸಿಸ್ಟೆಂಟ್‌ , ಟಚ್‌ ಕಂಟ್ರೋಲ್‌ ಮತ್ತು ಡ್ಯುಯಲ್ ಕನೆಕ್ಟಿವಿಟಿಯನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ ಈ ಇಯರ್‌ಬಡ್ಸ್ ಕೇಸ್ ಚಾರ್ಜಿಂಗ್‌ಗಾಗಿ USB-C ಪೋರ್ಟ್ ಅನ್ನು ಹೊಂದಿದೆ. ಇದು ನಿಮಗೆ ಒಟ್ಟು 20 ಗಂಟೆಗಳ ಪ್ಲೇಬ್ಯಾಕ್ ಭರವಸೆ ನೀಡುತ್ತದೆ.

Top 5 Best Earbuds under rs 2,500 in india right now.