ಭಾರತದಲ್ಲಿ ಸೋನಿ ಬ್ರಾವಿಯಾ XR X90L ಸರಣಿ ಅನಾವರಣ! ವಾವ್ಹ್‌ ಎನಿಸುವ ಫೀಚರ್ಸ್‌!

26-06-23 08:02 pm       Source: Gizbot   ಡಿಜಿಟಲ್ ಟೆಕ್

ಸೋನಿ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ತನ್ನ ಗುಣಮಟ್ಟದ ಸ್ಮಾರ್ಟ್‌ಟಿವಿಗಳ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಸೋನಿ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ತನ್ನ ಗುಣಮಟ್ಟದ ಸ್ಮಾರ್ಟ್‌ಟಿವಿಗಳ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಸೋನಿ ಬ್ರಾವಿಯಾ XR X90L ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ 55 ಇಂಚು, 65 ಇಂಚು ಮತ್ತು 75 ಇಂಚಿನ ಆಯ್ಕೆಗಳಲ್ಲಿ ಎಂಟ್ರಿ ನೀಡಿದೆ.

ಹೌದು, ಸೋನಿ ಬ್ರಾವಿಯಾ XR X90L ಸರಣಿ ಭಾರತದಲ್ಲಿ ಅನಾವರಣ ಮಾಡಿದೆ. ಇನ್ನು ಸ್ಮಾರ್ಟ್‌ಟಿವಿ ಸರಣಿ ಟ್ರೈಲುಮಿನೋಸ್ ಕ್ವಾಂಟಮ್ ಡಾಟ್ LED ಡಿಸ್‌ಪ್ಲೇ ಸ್ಕ್ರೀನ್‌ಗಳನ್ನು ಒಳಗೊಂಡಿದೆ. ಈ ಸರಣಿಯ ಎಲ್ಲಾ ರೂಪಾಂತರಗಳು ಡಾಲ್ಬಿ ವಿಷನ್‌ ಫಾರ್ಮ್ಯಾಟ್‌ ಅನ್ನು ಪಡೆದುಕೊಂಡಿವೆ. ಇನ್ನುಳಿದಂತೆ ಈ ಸರಣಿ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Google TV सपोर्ट के साथ Sony Bravia XR X90L स्मार्ट टीवी भारत में लॉन्च,  जानें कीमत - Pradesh Live

ಸೋನಿ ಬ್ರಾವಿಯಾ XR X90L ಸ್ಮಾರ್ಟ್‌ಟಿವಿ

ವಿಶೇಷತೆ ಸೋನಿ ಬ್ರಾವಿಯಾ XR X90L ಸರಣಿಯು ಮೂರು ವಿಭಿನ್ನ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಈ ಮೂರು ಮಾದರಿಗಳು ಕೂಡ 3840x2160-ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಜೊತೆಗೆ ಸೋನಿಯ ಟ್ರೈಲುಮಿನೋಸ್ ಕ್ವಾಂಟಮ್ ಟೆಕ್ನಾಲಜಿಯನ್ನು ಒಳಗೊಂಡಿವೆ. ಇನ್ನು ಸ್ಮಾರ್ಟ್‌ಟಿವಿಗಳು ಡಾಲ್ಬಿ ಅಟ್ಮಾಸ್ ಆಡಿಯೊ ಬೆಂಬಲಿಸಲಿದ್ದು, ಡಾಲ್ಬಿ ವಿಷನ್ ಫಾರ್ಮ್ಯಾಟ್‌ನವರೆಗೆ ಹೆಚ್ಚಿನ ಡೈನಾಮಿಕ್ ಶ್ರೇಣಿಯ ವಿಷಯವನ್ನು ಬೆಂಬಲಿಸಲಿವೆ.

ಇನ್ನು ಸೋನಿ ಬ್ರಾವಿಯಾ XR-X90L ಸ್ಮಾರ್ಟ್‌ಟಿವಿ ಸರಣಿಯು ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಗೂಗಲ್‌ ಟಿವಿ ಯೂಸರ್‌ ಇಂಟರ್ಫೇಸ್ ಅನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್‌ಟಿವಿ ಗೂಗಲ್‌ ಪ್ಲೇ ಸ್ಟೋರ್‌ ಮೂಲಕ 10,000 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಬ್ರಾವಿಯಾ ಎಕ್ಸ್‌ಆರ್ ಟೆಲಿವಿಷನ್ ಶ್ರೇಣಿಯಾಗಿರುವುದರಿಂದ ಬಳಕೆದಾರರು ಬ್ರಾವಿಯಾ ಕೋರ್ ಸ್ಟ್ರೀಮಿಂಗ್ ಸೇವೆಗೆ ಪ್ರವೇಶವನ್ನು ಕೂಡ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Sony's 2023 Bravia XR TVs Aim to Impress and Are Up for Preorder - TheStreet

ಇದರೊಂದಿಗೆ ಸೋನಿ XR X90L ಸ್ಮಾರ್ಟ್‌ಟಿವಿ ಸರಣಿಯು ಸೋನಿ ಕಾಗ್ನಿಟಿವ್ ಪ್ರೊಸೆಸರ್ XR ಇಮೇಜ್ ಪ್ರೊಸೆಸಿಂಗ್ ಅನ್ನು ಹೊಂದಿದೆ. ಜೊತೆಗೆ ಅಕೌಸ್ಟಿಕ್ ಮಲ್ಟಿ ಆಡಿಯೊ ಸೌಂಡ್, ಆಪಲ್‌ ಏರ್‌ಪ್ಲೇ 2 ಮತ್ತು ಹೋಮ್‌ಕಿಟ್‌ ಗೆ ಬೆಂಬಲ ಮತ್ತು ಸೋನಿ ಪ್ಲೇ ಸ್ಟೇಶನ್‌ 5 ಗೇಮಿಂಗ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಗೇಮಿಂಗ್‌ ಕನ್ಸೋಲ್‌ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ.

ಸೋನಿ ಬ್ರಾವಿಯಾ XR X90L ಬೆಲೆ ಮತ್ತು ಲಭ್ಯತೆ

ಸೋನಿ ಬ್ರಾವಿಯಾ XR X90L ಸರಣಿಯ 55 ಇಂಚಿನ XR-55X90L ಸ್ಮಾರ್ಟ್‌ಟಿವಿ 1,39,990ರೂ. ಬೆಲೆ ಹೊಂದಿದೆ. ಆದರೆ 65 ಇಂಚಿನ XR-65X90L ರೂಪಾಂತರವು 1,79,990ರೂ.ಬೆಲೆಯನ್ನು ಹೊಂದಿದೆ. ಆದರೆ 75 ಇಂಚಿನ ಆಯ್ಕೆಯನ್ನು ಇನ್ನು ಕೂಡ ಭಾರತದಲ್ಲಿ ಅನಾವರಣಗೊಳಿಸಿಲ್ಲ. ಸದ್ಯ ಈ ಎರಡು ಸ್ಮಾರ್ಟ್‌ಟಿವಿಗಳು ಕೂಡ ಭಾರತದಲ್ಲಿ ಸೋನಿ ಸೆಂಟರ್ ಸ್ಟೋರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳು ಮತ್ತು ಪ್ರಮುಖ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

Buy Sony X90L (65")164 cm Bravia XR 4K Full Array Smart LED Google TV -  ShopatSC – ShopAtSC

ಇನ್ನು ಸೋನಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಸೋನಿ ಬ್ರಾವಿಯಾ X82L ಸರಣಿಯನ್ನು ಪರಿಚಯಿಸಿತ್ತು. ಈ ಸರಣಿಯ ಸ್ಮಾರ್ಟ್‌ಟಿವಿಗಳು 55, 65 ಮತ್ತು 75 ಇಂಚಿನ ಸ್ಕ್ರೀನ್‌ ಗಾತ್ರದ ಆಯ್ಕೆಗಳಲ್ಲಿ ಬರುತ್ತವೆ. ಇದು 4K ರೆಸಲ್ಯೂಶನ್ ಮತ್ತು HDR ಫಾರ್ಮ್ಯಾಟ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಸ್ಮಾರ್ಟ್‌ಟಿವಿ 4K HDR ಪಿಕ್ಚರ್ ಎಂಜಿನ್ ಮತ್ತು ಟ್ರಿಲುಮಿನಸ್ ಪ್ರೊ ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್‌ಟಿವಿಗಳು IMAX ವರ್ಧಿತ ಪ್ರಮಾಣೀಕೃತವಾಗಿದ್ದು ಬೆರಗುಗೊಳಿಸುವ ದೃಶ್ಯಗಳು ಮತ್ತು ತಲ್ಲೀನಗೊಳಿಸುವ ಸೌಂಡ್‌ ಅನುಭವವನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿ ಡಾಲ್ಬಿ ಅಟ್ಮಾಸ್ ಮತ್ತು ಪ್ರಾದೇಶಿಕ ಧ್ವನಿಯೊಂದಿಗೆ ಎಕ್ಸ್-ಸಮತೋಲಿತ ಸ್ಪೀಕರ್ ಅನ್ನು ಹೊಂದಿದೆ. ಇದನ್ನು ಸ್ಮಾರ್ಟ್‌ಟಿವಿಯ ಮುಂಭಾಗದಲ್ಲಿ ಅಳವಡಿಸಲಾಗಿದೆ. ಜೊತೆಗೆ ಸ್ಮಾರ್ಟ್‌ಟಿವಿಗಳು X-ಪ್ರೊಟೆಕ್ಷನ್ PRO ಟೆಕ್ನಾಲಜಿಯನ್ನು ಒಳಗೊಂಡಿದ್ದು, ಧೂಳು ಮತ್ತು ತೇವಾಂಶ ನಿರೋಧಕವಾಗಿದೆ. ಜೊತೆಗೆ ಮಳೆಗಾಲದಲ್ಲಿ ಸಿಡಿಲು, ಗುಡುಗು, ವಿದ್ಯುತ್‌ ಅವಘಡಗಳಿಂದ ರಕ್ಷಣೆಯನ್ನು ನೀಡಲಿದೆ.

Sony Bravia xr x90l television series launched in india.