ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಮಾರ್ಟ್‌ವಾಚ್‌! ನೀರಿನೊಳಗೆ ಮುಳುಗಿದ್ರು ಏನಾಗಲ್ಲ!

27-06-23 06:29 pm       Source: Gizbot   ಡಿಜಿಟಲ್ ಟೆಕ್

ಟೆಕ್‌ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಸ್ಮಾರ್ಟ್‌ವಾಚ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದರ ನಡುವೆ ಯುವಜನರನ್ನು ಆಕರ್ಷಿಸುವ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವ ಮೂಲಕ ಬೋಟ್‌ ಕಂಪೆನಿ ಕೂಡ ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದೆ.

ಟೆಕ್‌ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಸ್ಮಾರ್ಟ್‌ವಾಚ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದರ ನಡುವೆ ಯುವಜನರನ್ನು ಆಕರ್ಷಿಸುವ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವ ಮೂಲಕ ಬೋಟ್‌ ಕಂಪೆನಿ ಕೂಡ ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದೆ. ಇದೀಗ ಹೊಸ ಬೋಟ್‌ ಅಲ್ಟಿಮಾ ಕನೆಕ್ಟ್‌ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು, ಬೋಟ್‌ ಕಂಪೆನಿ ಹೊಸ ಬೋಟ್ ಅಲ್ಟಿಮಾ ಕನೆಕ್ಟ್ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ಕಸ್ಟಮೈಸ್‌ ಮಾಡುವುದಾದ ವಾಚ್‌ಫೇಸ್‌ಗಳನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಗಳ ಮೇಲೆ ಸ್ಮಾರ್ಟ್‌ವಾಚ್‌ ಅನ್ನು ಕಸ್ಟಮೈಸ್‌ ಮಾಡಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Boat Ultima Connect smartwatch launched in India|ಮಾರುಕಟ್ಟೆಗೆ ಎಂಟ್ರಿ ಕೊಟ್ಟ  ಆಕರ್ಷಕ ಸ್ಮಾರ್ಟ್‌ವಾಚ್‌! ನೀರಿನೊಳಗೆ ಮುಳುಗಿದ್ರು ಏನಾಗಲ್ಲ! - Kannada Gizbot

ಬೋಟ್ ಅಲ್ಟಿಮಾ ಕನೆಕ್ಟ್ ಸ್ಮಾರ್ಟ್ ವಾಚ್ ಫೀಚರ್ಸ್‌ ವಿವರ: ಬೋಟ್ ಅಲ್ಟಿಮಾ ಕನೆಕ್ಟ್ ಸ್ಮಾರ್ಟ್‌ವಾಚ್ 1.83 ಇಂಚಿನ HD 2.5D ಕರ್ವ್ಡ್‌ ಡಿಸ್‌ಪ್ಲೇಯನ್ನು ಹೊಂದಿದೆ. 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಹೆಲ್ತ್‌ ಫೀಚರ್ಸ್‌ ವಿಚಾರದಲ್ಲಿ ಹಾರ್ಟ್‌ಬೀಟ್‌ ಸೆನ್ಸಾರ್‌, SpO2 ಸೆನ್ಸಾರ್‌ ಮತ್ತು 700+ ಸ್ಪೋರ್ಟ್ಸ್‌ ಮೋಡ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ರೇಟಿಂಗ್‌ ಅನ್ನು ಹೊಂದಿದೆ. ಇದರಿಂದ ಎಂತಹದ್ದೇ ಸವಾಲಿನ ಪರಿಸ್ಥಿತಿಯಲ್ಲಿದ್ದರೂ ಸಹ ಸ್ಮಾರ್ಟ್‌ವಾಚ್‌ ಸುರಕ್ಷತೆಯ ಭರವಸೆಯನ್ನು ನೀಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನ ಬ್ಯಾಟರಿ ಬ್ಯಾಕ್‌ಅಪ್‌ ಕೂಡ ಉತ್ತಮವಾಗಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 7 ದಿನಗಳ ಬಾಳಿಕೆಯನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 100 ಕ್ಕೂ ಹೆಚ್ಚು ಕಸ್ಟಮೈಸ್‌ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಹೊಂದಿದ್ದು, ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ವಾಚ್‌ ಅನ್ನು ಕಸ್ಟಮೈಸ್‌ ಮಾಡಬಹುದಾಗಿದೆ.

boat ultima connect bluetooth calling smartwatch launched in india check  price - Tech news hindi - आ गई बड़े डिस्प्ले वाली सस्ती कॉलिंग वॉच, फुल  चार्ज में पूरे 7 दिन चलेगी; देखें कीमत

ಇದಲ್ಲದೆ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಹೊಂದಿದೆ. ಇದರಿಂದ ಸ್ಮಾರ್ಟ್‌ವಾಚ್‌ ಮೂಲಕವೇ ಸ್ಮಾರ್ಟ್‌ಫೋನ್‌ ಕರೆಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದಕ್ಕಾಗಿ ಸ್ಮಾರ್ಟ್‌ವಾಚ್‌ನಲ್ಲಿ ಉತ್ತಮ ಗುಣಮಟ್ಟದ ಮೈಕ್ರೊಫೋನ್‌ ಮತ್ತು ಡಯಲ್‌ ಪ್ಯಾಡ್‌ ಅನ್ನು ನೀಡಲಾಗಿದೆ. ಇದಲ್ಲದೆ ತ್ವರಿತ ಮತ್ತು ಸುಲಭ ಕರೆಗಾಗಿ 10 ಕಂಟ್ಯಾಕ್ಟ್‌ಗಳನ್ನು ನೀವು ಸ್ಮಾರ್ಟ್‌ವಾಚ್‌ನಲ್ಲಿಯೇ ಸೇವ್‌ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಕ್ರೆಸ್ಟ್ ಪ್ಲಸ್ ಓಎಸ್‌ನಲ್ಲಿ ರನ್‌ ಆಗಲಿದ್ದು, ಬಳಕೆದಾರರಿಗೆ ತಡೆರಹಿತ ಅನುಭವವನ್ನು ನೀಡಲಿದೆ. ಇದು ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್‌, ವೆದರ್‌ ಅಪ್ಡೇಟ್‌, ಅಲಾರಂ, ಕೌಂಟ್‌ಡೌನ್‌ ಟೈಮರ್‌ ಹಾಗೂ ಸ್ಟಾಪ್‌ವಾಚ್‌, ಡೋಂಟ್‌ ಡಿಸ್ಟರ್ಬ್‌ ಮೋಡ್‌ನಂತಹ ಫೀಚರ್ಸ್‌ಗಳನ್ನು ನೀಡಲಿದೆ. ಇದರಿಂದ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಹೊಸ ರೀತಿಯ ಅನುಭವ ದೊರೆಯಲಿದೆ ಎಂದು ಹೇಳಲಾಗಿದೆ.

Buy boAt Wave Ultima | Bluetooth Calling Smart Watch with 1.8” Curve Display

ಬೆಲೆ ಮತ್ತು ಲಭ್ಯತೆ

ಬೋಟ್ ಅಲ್ಟಿಮಾ ಕನೆಕ್ಟ್ ಸ್ಮಾರ್ಟ್‌ವಾಚ್ ಜೂನ್ 28 ರಂದು ಭಾರತದಲ್ಲಿ ಲಾಂಚ್‌ ಆಗಲಿದೆ. ಇದನ್ನು ಪರಿಚಯಾತ್ಮಕ ಬೆಲೆಯಲ್ಲಿ 1,799ರೂ.ಗಳಿಗೆ ಖರೀದಿಸಬಹುದಾಗಿದೆ. ಇದು ನಿಮಗೆ ಆಕ್ಟಿವ್‌ ಬ್ಲ್ಯಾಕ್‌, ಕೂಲ್ ಗ್ರೇ, ಚೆರ್ರಿ ಬ್ಲಾಸಮ್, ಡೀಪ್ ಬ್ಲೂ ಮತ್ತು ಬ್ಲ್ಯಾಕ್ ಮೆಟಲ್ ಮೆಶ್ (ಮೆಟಾಲಿಕ್ ಸ್ಟ್ರಾಪ್) ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದನ್ನು ಆಸಕ್ತ ಗ್ರಾಹಕರು ಅಧಿಕೃತ ಬೋಟ್‌ ವೆಬ್‌ಸೈಟ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದಾಗಿದೆ.

ಇದಲ್ಲದೆ ಬೋಟ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ 'ಬೋಟ್‌ ಅಲ್ಟಿಮಾ ಕಾಲ್' (boAt Ultima Call) ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಕಾಂಟ್ಯಾಕ್ಟ್‌ ಸ್ಟೋರೇಜ್‌ ಹಾಗೂ ಡಯಲ್ ಪ್ಯಾಡ್‌ ಸೌಲಭ್ಯ ಪಡೆದಿರುವುದು ವಿಶೇಷವಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ 700 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದೆ.

Boat ultima connect smartwatch launched in India.