ಬ್ರೇಕಿಂಗ್ ನ್ಯೂಸ್
28-06-23 06:33 pm Source: Gizbot ಡಿಜಿಟಲ್ ಟೆಕ್
ಸ್ಮಾರ್ಟ್ ಗ್ಯಾಜೆಟ್‌ಗಳು ಇಂದು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಆಗುತ್ತಿವೆ. ಅದರಂತೆ ಪ್ರಮುಖ ಕ್ಯಾಮೆರಾ ತಯಾರಿಕಾ ಸಂಸ್ಥೆಗಳು ಈ ತಲೆಮಾರಿಗೆ ತಕ್ಕ ಹಾಗೂ ವಿಶೇಷ ಸುಧಾರಿತ ಫೀಚರ್ಸ್ ಇರುವ ಕ್ಯಾಮೆರಾಗಳನ್ನು ಪರಿಚಯಿಸಿಕೊಂಡು ಬರುತ್ತಿವೆ. ಈ ನಡುವೆ ವಿಶ್ವದ ಚಿಕ್ಕ ಹಾಗೂ ಹಗುರ ಹೊಸ ಕ್ಯಾಮೆರಾ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ.
ಹೌದು, ಕ್ಯಾಮರಾ ಕಂಪನಿ ಇನ್‌ಸ್ಟಾ 360 (Insta360) ಇಂದು ಇನ್‌ಸ್ಟಾ 360 ಗೋ 3 (Insta360 GO 3) ಕ್ಯಾಮೆರಾವನ್ನು ಅನಾವರಣ ಮಾಡಿದೆ. ಈ ಕ್ಯಾಮೆರಾ ಅಲ್ಟ್ರಾ-ಪೋರ್ಟಬಿಲಿಟಿ ಆಗಿದ್ದು, ಫ್ಲಿಪ್ ಟಚ್‌ಸ್ಕ್ರೀನ್ ಹೊಂದಿರುವ ಆಕ್ಷನ್ ಪಾಡ್‌ನೊಂದಿಗೆ ಕಂಡು ಬಂದಿದೆ. ಜೊತೆಗೆ ನೀರಿನ ಒಳಗೂ ಇದನ್ನು ಬಳಕೆ ಮಾಡಬಹುದು. ಹಾಗಿದ್ರೆ, ಬನ್ನಿ ಇದರ ಪ್ರಮುಖ ಫೀಚರ್ಸ್ ಹಾಗೂ ವಿನ್ಯಾಸ ಬೆಲೆ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಇನ್‌ಸ್ಟಾ360 ಗೋ 3 ಫೀಚರ್ಸ್: ಈ ಸ್ಮಾರ್ಟ್ ಕ್ಯಾಮೆರಾ ತುಂಬಾ ಚಿಕ್ಕದಾಗಿದ್ದು, ಇದು ಕೇವಲ 35 ಗ್ರಾಂ ತೂಗುತ್ತದೆ. ಇದರಿಂದಾಗಿ ನೀವು ಇದನ್ನು ಎಲ್ಲಿ ಬೇಕಾದರೂ ಸಹ ಸುಲಭವಾಗಿ ಒಯ್ಯಬಹುದು. ಉಳಿದಂತೆ ಈ ಕ್ಯಾಮೆರಾದ ಮೂಲಕ INSP ಮತ್ತು DNG ಸ್ವರೂಪಗಳಲ್ಲಿ ಫೋಟೋಗಳನ್ನು ತೆಗೆಯಬಹುದಾಗಿದೆ ಹಾಗೂ MP4 ಫಾರ್ಮ್ಯಾಟ್‌ನಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ.
ಹಲವು ರೆಕಾರ್ಡಿಂಗ್ ಮೋಡ್: ಈ ಕ್ಯಾಮೆರಾದಲ್ಲಿ ವಿಶೇಷವಾಗಿ ಮೂರು ಮೋಡ್ ಆಯ್ಕೆ ಇದ್ದು, ಯಾವ ಸಮಯದಲ್ಲಾದರೂ ನಿಮಗೆ ಅಗತ್ಯ ಎನಿಸುವ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು. ಅಂದರೆ ಸೂರ್ಯೋದಯ ಟೈಮ್‌ಲ್ಯಾಪ್ಸ್ ಅನ್ನು ಸೆರೆಹಿಡಿಯಲು ನೀವು ಬೆಳಿಗ್ಗೆ ಬೇಗನೆ ನಿಮ್ಮ ಗಾಢ ನಿದ್ರೆಯಿಂದ ಏಳಲೇಬೇಕು ಎಂದೇನಿಲ್ಲ. ಇದಕ್ಕಾಗಿ ಟೈಮ್ಡ್ ಕ್ಯಾಪ್ಚರ್ ಮೋಡ್ ಆಯ್ಕೆ ಇದೆ. ಇನ್ನುಳಿದಂತೆ ಪ್ರಿ-ರೆಕಾರ್ಡಿಂಗ್, ಲೂಪ್ ರೆಕಾರ್ಡಿಂಗ್ ವಿಶೇಷ ಎನಿಸಿದೆ.
ಫ್ರೀಫ್ರೇಮ್ ಮೋಡ್ : ನೀವು ಈ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ನಂತರ ಆಕಾರ ಅನುಪಾತವನ್ನು ಸೆಟ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಅಂದರೆ ನೀವು ಯಾವ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡುತ್ತೀರೋ ಆ ಪ್ಲಾಟ್‌ಫಾರ್ಮ್‌ಗೆ ತಕ್ಕ ಅನುಪಾತವನ್ನು ಹೊಂದಿಸಬಹುದು. ಅಂದರೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಅಪ್ಲೋಡ್ ಮಾಡಲು 9:16 ಆಕಾರ ಅನುಪಾತ ಹಾಗೂ ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಲು 16:9 ಆಕಾರ ಅನುಪಾತದಲ್ಲಿ ರೆಕಾರ್ಡ್ ಮಾಡಬಹುದು.
ಇನ್ನುಳಿದಂತೆ ಈ ಕ್ಯಾಮೆರಾ 6 ಆಕ್ಸಿಸ್ ಗೈರೊಸ್ಕೋಪ್ ಅನ್ನು ಹೊಂದಿದೆ. ಇದರೊಂದಿಗೆ ಫ್ಲೋಸ್ಟೇಟ್ ಸ್ಟೆಬಿಲೈಸೇಶನ್ ಮತ್ತು 360 ಹಾರಿಜಾನ್ ಲಾಕ್ ಆಯ್ಕೆ ಇರುವುದು ವಿಶೇಷ ಎನಿಸಿದೆ. ಇದರಿಂದಾಗಿ ಆಕ್ಷನ್-ಪ್ಯಾಕ್ಡ್ ಸನ್ನಿವೇಶಗಳಲ್ಲಿಯೂ ಸಹ ಟಿಲ್ಟಿಂಗ್ ಅಥವಾ ಅಸ್ಪಷ್ಟತೆ ಇಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಇದು ಅನುವು ಮಾಡಿಕೊಡುತ್ತದೆ. ಇದಿಷ್ಟು ಮಾತ್ರವಲ್ಲದೆ ಉತ್ತಮವಾದ ಆಡಿಯೋದೊಂದಿಗೆ ರೆಕಾರ್ಡ್ ಮಾಡಲು ಡ್ಯುಯಲ್ ಮೈಕ್ರೊಫೋನ್‌ಗಳ ಆಯ್ಕೆ ನೀಡಲಾಗಿದೆ.
ರಿಮೋಟ್ ಕಂಟ್ರೋಲ್ ಆಯ್ಕೆ: ಈ ಎಲ್ಲಾ ಫೀಚರ್ಸ್ ನೊಂದಿಗೆ 2.2 ಫ್ಲಿಪ್ ಟಚ್‌ಸ್ಕ್ರೀನ್ ಹೊಂದಿರುವ ಈ ಕ್ಯಾಮೆರಾ 96.3g ತೂಕದ ಆಕ್ಷನ್ ಪಾಡ್ ಆಯ್ಕೆ ಪಡೆದಿದ್ದು, ನೈಜ-ಸಮಯದ ರಿಮೋಟ್ ಕಂಟ್ರೋಲ್ ಮತ್ತು ಲೈವ್ ಪೂರ್ವವೀಕ್ಷಣೆಗೂ ಅನುವು ಮಾಡಿಕೊಡುತ್ತದೆ. ಹಾಗೆಯೇ ಹ್ಯಾಂಡ್ಸ್-ಫ್ರೀ ಕಾರ್ಯಾಚರಣೆಗಾಗಿ ಧ್ವನಿ ಆಜ್ಞೆಗಳ ಫೀಚರ್ಸ್ ಅನ್ನು ಸಹ ಹೊಂದಿದೆ. ಇನ್ನು ಆಕ್ಷನ್ ಕ್ಯಾಮೆರಾ IPX8 ರೇಟಿಂಗ್‌ನೊಂದಿಗೆ ಬಂದಿದ್ದು, ಆಕ್ಷನ್ ಪಾಡ್ IPX4 ರೇಟಿಂಗ್ ಹೊಂದಿದೆ.
ಇನ್‌ಸ್ಟಾ 360ಗೋ 3 ಬ್ಯಾಟರಿ ಸಾಮರ್ಥ್ಯ: ಆಕ್ಷನ್ ಪಾಡ್ 1,270mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕಾಗಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಹೊಂದಿದೆ. ಅದರಂತೆ 65 ನಿಮಿಷಗಳಲ್ಲಿ 100% ವರೆಗೆ ಚಾರ್ಜ್ ಆಗುತ್ತದೆ. ಇನ್ನು ಆಕ್ಷನ್ ಕ್ಯಾಮೆರಾ 310mAhಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ಪೂರ್ಣವಾಗಿ ಚಾರ್ಜ್ ಆಗಲು 35ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆಕ್ಷನ್ ಕ್ಯಾಮೆರಾ 45ನಿಮಿಷಗಳ ರನ್-ಟೈಮ್ ಅನ್ನು ಹೊಂದಿದೆ ಎಂದು ಹೇಳಲಾಗಿದ್ದು, ಆಕ್ಷನ್ ಪಾಡ್‌ನೊಂದಿಗೆ ಜೋಡಿಸಿದಾಗ 170ನಿಮಿಷಗಳಿಗೆ ಹೆಚ್ಚಾಗುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.
ಇನ್‌ಸ್ಟಾ 360 ಗೋ 3 ಬೆಲೆ ಹಾಗೂ ಲಭ್ಯತೆ: ಇದು ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಮ್ಯಾಗ್ನೆಟ್ ಪೆಂಡೆಂಟ್, ಈಸಿ ಕ್ಲಿಪ್, ಪಿವೋಟ್ ಸ್ಟ್ಯಾಂಡ್ ಮತ್ತು ಲೆನ್ಸ್ ಗಾರ್ಡ್‌ನೊಂದಿಗೆ ಪ್ಯಾಕ್ ಆಗಿದೆ. ಜೊತೆಗೆ ಮಂಕಿ ಟೈಲ್ ಮೌಂಟ್, ಮಿನಿ 2-ಇನ್-1 ಟ್ರೈಪಾಡ್ ಮತ್ತು ಸ್ಕ್ರೀನ್ ಪ್ರೊಟೆಕ್ಟರ್ ಸಹ ಇವೆ. ಇದೆಲ್ಲವನ್ನೂ ಸೇರಿದಂತೆ ಮೂರು ಸ್ಟೋರೇಜ್ ಸಾಮರ್ಥ್ಯದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ 32GB, 64GB ಹಾಗೂ 128GB ಸ್ಟೋರೇಜ್ ಕ್ಯಾಮರಾಗಳಿಗೆ ಕ್ರಮವಾಗಿ 36,890, 38,940 ಹಾಗೂ 42,630ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.
Insta360 go 3 with Flip Screen Action Pod launched price specs details.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm