ಬ್ರೇಕಿಂಗ್ ನ್ಯೂಸ್
29-06-23 07:40 pm Source: Gizbot ಡಿಜಿಟಲ್ ಟೆಕ್
ಆಪಲ್ ಸ್ಮಾರ್ಟ್ ಡಿವೈಸ್‌ಗಳು ಬಳಕೆದಾರರಿಗೆ ಇಷ್ಟವಾಗಲು ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಎಂದರೆ ಬಳಕೆದಾರರ ಜೀವವನ್ನೇ ರಕ್ಷಣೆ ಮಾಡುವ. ಈ ಮೂಲಕ ಈಗಾಗಲೇ ಸಾಕಷ್ಟು ಜನರು ಕಳೆದುಕೊಳ್ಳುತ್ತಿದ್ದ ಜೀವವನ್ನು ಮರಳಿ ಪಡೆದುಕೊಂಡಿದ್ದಾರೆ. ಅಂತಹುದೇ ಘಟನೆ ಮತ್ತೆ ಈಗ ವರದಿಯಾಗಿದೆ.
ಹೌದು, ಆಪಲ್ ವಾಚ್ ಈಗಾಗಲೇ ಸಾಕಷ್ಟು ಜನರ ಪ್ರಾಣವನ್ನು ಉಳಿಸುವ ಮೂಲಕ ಇತರೆ ಸ್ಮಾರ್ಟ್‌ವಾಚ್‌ಗಳಿಗಿಂತ ಈ ವಿಷಯದಲ್ಲಿ ಶ್ರೇಷ್ಠ ಸ್ಥಾನ ಪಡೆದುಕೊಂಡಿದೆ. ಈ ನಡುವೆ ಆಪಲ್ ವಾಚ್ ಸಾಯುವ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಯ ಪತ್ನಿಗೆ ಕರೆ ಮಾಡಿ ಆತನ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಗಿದ್ರೆ ಏನಿದು ಘಟನೆ?, ಇದು ಹೇಗೆ ಪತ್ನಿಗೆ ಕರೆ ಮಾಡಿ ಮಾಹಿತಿ ನೀಡಿತು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಜೀವ ರಕ್ಷಿಸಿದ ಆಪಲ್ ವಾಚ್ ಸರಣಿ 8: ಕೆನಡಾ ಮೂಲದ ವ್ಯಕ್ತಿ ಅಲೆಕ್ಸಾಂಡರ್ ಲೇಸರ್ಸನ್ ಎಂಬುವರು ಏಣಿಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಅವರು ಧರಿಸಿದ್ದ ಆಪಲ್ ವಾಚ್ ಸರಣಿ 8 ತುರ್ತು ಸೇವೆ ಮೂಲ ಅವರ ಜೀವ ಉಳಿಸಿದೆ. ಅಂದರೆ ಲೇಸರ್ಸನ್ ಏಣಿಯಿಂದ ಬಿದ್ದಾಗ ಅವರ ಆಪಲ್ ವಾಚ್ ಸರಣಿ 8 ತುರ್ತು ಸೇವೆಗಳಿಗೆ ಹಾಗೂ ಅವರ ಹೆಂಡತಿಗೆ ಕರೆ ಮಾಡಿ ಮಾಹಿತಿ ನೀಡಿದೆ.
ಇದನ್ನು ಅರಿತ ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಹಾಗೂ ಅವರ ಪತ್ನಿ ಗಾಯಗೊಂಡ ವ್ಯಕ್ತಿಯನ್ನು ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್‌ನಲ್ಲಿ ತುರ್ತು ಕೊಠಡಿಗೆ ಕರೆದೊಯ್ದಿದ್ದಾರೆ. ಇನ್ನು ಅವರ ತಲೆಗೆ ಏಳು ಹೊಲಿಗೆಗಳನ್ನು ಹಾಕಲಾಗಿದ್ದು, ಈ ಮೂಲಕ ಅವರು ಆಪಲ್‌ನ ಈ ಸೇವೆಗೆ ತಲೆಬಾಗಿ ಧನ್ಯವಾದ ಹೇಳಿದ್ದಾರೆ. ಇದೇ ರೀತಿಯ ಅದೆಷ್ಟೋ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿದ್ದು, ಜನರ ಜೀವರಕ್ಷಕವಾಗಿ ಈ ವಾಚ್ ಕೆಲಸ ಮಾಡುತ್ತಿದೆ.
ಅಂತಹುದ್ದೇನಿದೆ ಈ ವಾಚ್‌ನಲ್ಲಿ?: ಸ್ಮಾರ್ಟ್‌ವಾಚ್ ಅಂದಾಕ್ಷಣ ಎಲ್ಲಾ ವಾಚ್‌ಗಳಲ್ಲೂ ಸಹ ಒಂದೇ ರೀತಿಯ ಫೀಚರ್ಸ್ ಇರುವುದಿಲ್ಲ. ಅದರಲ್ಲೂ ಈ ಆಪಲ್ ವಾಚ್‌ಗಳಲ್ಲಿ ಮಾತ್ರ ಭಿನ್ನ ಫೀಚರ್ಸ್ ಇದ್ದು, ಇವು ಬಳಕೆದಾರರ ಆರೊಗ್ಯದ ಮೇಲೆ ನಿರಂತರವಾಗಿ ಕಣ್ಣಿಟ್ಟಿರುತ್ತವೆ. ಈ ಕಾರಣಕ್ಕಾಗಿಯೇ ಇಂದು ಆಪಲ್‌ವಾಚ್‌ಗಳಿಗೆ ಬೇಡಿಕೆ ಜಾಸ್ತಿ ಆಗಿದ್ದು, ಹೊಸ ಹೊಸ ಆವೃತ್ತಿಯ ಆಪಲ್ ವಾಚ್‌ಗಳು ಲಾಂಚ್ ಆಗುತ್ತಲೇ ಇವೆ.
ಅದರಂತೆ ಆಪಲ್ ವಾಚ್ ಹಲವು ಇನ್‌ಬಿಲ್ಟ್ ಫೀಚರ್ಸ್ ಹೊಂದಿದ್ದು, ಇದು ಬಳಕೆದಾರರನ್ನು ಮಾರಣಾಂತಿಕ ಸನ್ನಿವೇಶಗಳಿಂದ ಪಾರು ಮಾಡಲಿದೆ. ಅದರಲ್ಲೂ ಆಪಲ್ ವಾಚ್ 4 ಅಥವಾ ಅದರ ಮುಂದಿನ ಸಣಿಯ ವಾಚ್‌ಗಳಲ್ಲಿ ಫಾಲ್ ಡಿಟೆಕ್ಷನ್ ಫೀಚರ್ಸ್ ನೀಡಲಾಗಿದ್ದು. ಈ ಮೂಲಕ ಬಳಕೆದಾರರು ಎಲ್ಲೇ ಸಮಸ್ಯೆಗೆ ಸಿಲುಕಿದರೂ ಸಹ ಫಾಲ್ ಡಿಟೆಕ್ಷನ್ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡಲು ಮುಂದಾಗುತ್ತದೆ.
ಬಳಕೆದಾರರು ಸಮಸ್ಯೆಗೆ ಒಳಗಾದಾಗ ಹಾಗೂ ಅವರು ಏನನ್ನೂ ಮಾಡದ ಪರಿಸ್ಥಿತಿಯಲ್ಲಿ ಇರುವಾಗ ತುರ್ತು ಸೇವೆಗಳನ್ನು ಮತ್ತು ಸಂಪರ್ಕಗಳನ್ನು ಆಟೋಮ್ಯಾಟಿಕ್ ಆಗಿ ಅದು ಸಂಪರ್ಕಿಸುತ್ತದೆ. ಇದು ನೀಡುವ ಸಂದೇಶವನ್ನು ಸ್ವೀಕಾರ ಮಾಡುವ ಇತರರು ಬಳಕೆದಾರರ ಕಠಿಣ ಪರಿಸ್ಥಿತಿಯಲ್ಲಿ ಇದ್ದಾನೆ ಎಂದು ಸುಲಭವಾಗಿ ಕಂಡುಕೊಳ್ಳಬಹುದು. ಅದರಲ್ಲೂ 55 ವರ್ಷಕ್ಕಿಂತ ಮೇಲ್ಪಟ್ಟ ಬಳಕೆದಾರರಿಗೆ ಈ ಫೀಚರ್ಸ್ ಅನ್ನು ಆಟೋಮ್ಯಾಟಿಕ್ ಆಗಿ ಬಳಕೆ ಆಗುವಂತೆ ಮಾಡಲಾಗಿದೆ.
ಈ ನಡುವೆ ಸ್ಮಾರ್ಟ್‌ವಾಚ್ ಮಾರುಕಟ್ಟೆ ಗಾತ್ರವು 2022 ರಿಂದ 2027 ರವರೆಗೆ USD 31,385.89 ಮಿಲಿಯನ್‌ಗಳಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಉತ್ತರ ಅಮೆರಿಕಾವು 2022 ರಲ್ಲಿ ಜಾಗತಿಕ ಮಾರುಕಟ್ಟೆಯ ಅತಿದೊಡ್ಡ ಪಾಲನ್ನು ಹೊಂದಿದೆ. ಅಂದರೆ ಇಲ್ಲಿ 42% ರಷ್ಟು ಹೆಚ್ಚುತ್ತಿರುವ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಆಪಲ್, ಫಿಟ್‌ಬಿಟ್ ಮತ್ತು ಗಾರ್ಮಿನ್ ಈ ಪ್ರದೇಶದಲ್ಲಿ ಪ್ರಮುಖವಾಗಿ ಜನಪ್ರಿಯವಾಗಿವೆ.
Apple watch series 8 saved the life of a man with a serious head injury details.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm