ಬ್ರೇಕಿಂಗ್ ನ್ಯೂಸ್
03-07-23 07:35 pm Source: Gizbot ಡಿಜಿಟಲ್ ಟೆಕ್
ಟೆಕ್ ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್‌ವಾಚ್‌ಗಳು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಿದ್ದು, ಅದರಂತೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಸಹ ಈ ವಾಚ್‌ಗಳಿಗೆ ಆಗಾಗ್ಗೆ ದೊಡ್ಡ ರಿಯಾಯಿತಿ ಘೋಷಣೆ ಮಾಡುವ ಮೂಲಕ ಕೈಗೆಟಕುವ ದರದಲ್ಲಿ ಅತ್ಯುತ್ತಮ ವಾಚ್‌ಗಳನ್ನು ಖರೀದಿ ಮಾಡುವ ಅವಕಾಶ ಕಲ್ಪಿಸಿಕೊಡುತ್ತಿವೆ.
ಹೌದು, ಸ್ಮಾರ್ಟ್‌ವಾಚ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಉತ್ತಮ ಸಮಯವಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಬೋಟ್ ವೇವ್ ಲೈಟ್ ಸ್ಮಾರ್ಟ್‌ವಾಚ್ (boAt Wave Lite Smartwatch) ಬರೋಬ್ಬರಿ 81% ಡಿಸ್ಕೌಂಟ್ ಪಡೆದುಕೊಂಡಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್ ಏನು?, ಇದರ ಸಾಮಾನ್ಯ ದರ ಹಾಗೂ ಆಫರ್ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.
ಬೋಟ್ ವೇವ್ ಲೈಟ್ ಸ್ಮಾರ್ಟ್‌ವಾಚ್ ಫೀಚರ್ಸ್: ಈ ವಾಚ್ ಅನ್ನು ಆಫರ್ ಬೆಲೆಗೆ ಕೊಂಡುಕೊಳ್ಳುವ ಮುನ್ನ ಇದರ ಫೀಚರ್ಸ್ ಕಡೆ ಸಹ ಕಣ್ಣಾಯಿಸುವುದು ಉತ್ತಮ. ಅದರಂತೆ ಈ ವಾಚ್ 1.69 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಸ್ಲಿಮ್ ಬೆಜೆಲ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 550 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇದರಲ್ಲಿದ್ದು, ಉತ್ತಮ ವೀಕ್ಷಣೆಯ ಅನುಭವ ನೀಡಲು 70% RGB ಬಣ್ಣದ ಹರವು ಸೌಲಭ್ಯ ನೀಡಲಾಗಿದೆ.
ಇದರೊಂದಿಗೆ ಈ ಸ್ಮಾರ್ಟ್ ವಾಚ್ ಮೆಟಾಲಿಕ್ ಫಿನಿಶ್‌ನೊಂದಿಗೆ ಸೊಗಸಾದ ಸ್ಕ್ವಾರಿಕ್ ಡಯಲ್ ಅನ್ನು ಆಯ್ಕೆ ಒಡೆದುಕೊಂಡಿದ್ದು, ಹಗುರವಾದ ಅನುಭವ ನೀಡಲಿದೆ. ಅಂದರೆ ಇದು 44.8 ಗ್ರಾಂಗಳ ತೂಕ ಹೊಂದಿದೆ. ಇದಿಷ್ಟು ಮಾತ್ರವಲ್ಲದೆ ವಿವಿಧ ಬಣ್ಣಗಳಲ್ಲಿ ಬದಲಾಯಿಸಬಹುದಾದ ಗಡಿಯಾರ ಲಿಸ್ಟ್‌ಗಳ ಆಯ್ಕೆಯನ್ನೂ ಸಹ ಇದು ಪಡೆದುಕೊಂಡಿದೆ. ಇನ್ನುಳಿದಂತೆ ಒಳಬರುವ ಕರೆಗಳು ಮತ್ತು ಮೆಸೆಜ್‌ಗಳಿಗಾಗಿ ಸ್ಮಾರ್ಟ್ ನೋಟಿಫಿಕೇಶನ್ ಆಯ್ಕೆ ಹೊಂದಿದೆ.
ಫೈಂಡ್ ಮೈ ಫೋನ್, ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡುವ ಆಯ್ಕೆ, ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ, ಅಲಾರಾಂ, ಸ್ಟಾಪ್‌ವಾಚ್ ಸೇರಿದಂತೆ ಇನ್ನಿತರೆ ಅಗತ್ಯ ಫೀಚರ್ಸ್ ಆಯ್ಕೆಯನ್ನು ಈ ವಾಚ್‌ನಲ್ಲಿ ನೀಡಲಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ ನಿಮ್ಮ ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಹಲವಾರು ಅನುಕೂಲಕರ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು, ಸುಟ್ಟ ಕ್ಯಾಲೊರಿಗಳು ಮತ್ತು ಅದಕ್ಕೆ ತೆಗೆದುಕೊಂಡ ಕ್ರಮಗಳು. ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಕ್ಲೈಂಬಿಂಗ್, ಯೋಗ, ಬಾಸ್ಕೆಟ್‌ಬಾಲ್, ಫುಟ್‌ಬಾಲ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುವ ಬಹು ಸ್ಪೋರ್ಟ್ ಮೋಡ್‌ಗಳ ಆಯ್ಕೆ ನೀಡಲಾಗಿದೆ.
ಇನ್ನು ಈ ವಾಚ್ ಗೂಗಲ್ ಫಿಟ್ ಮತ್ತು ಆಪಲ್ ಹೆಲ್ತ್ ಗೆ ಬೆಂಬಲ ನೀಡಲಿದ್ದು, ನಿಮ್ಮ ಆರೋಗ್ಯವನ್ನು ಅಗತ್ಯ ಬಿದ್ದಾಗ ಈ ಮೂಲಕ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದಾಗಿದೆ. ಇದರೊಂದಿಗೆ IP68 ರೇಟಿಂಗ್ ಹೊಂದಿದ್ದು, ಈ ಮೂಲಕ ಈ ವಾಚ್ ಧೂಳು, ಬೆವರು ಮತ್ತು ಸ್ಪ್ಲಾಶ್ ರೆಸಿಸ್ಟೆಂಟ್ ಆಗಿದೆ. ಈ ಮೂಲಕ ನೀವು ಈ ವಾಚ್ ಅನ್ನು ಎಲ್ಲಾ ಸಮಯದಲ್ಲೂ ಬಳಕೆ ಮಾಡಬಹುದು.
ಬೋಟ್ ವೇವ್ ಲೈಟ್ ಸ್ಮಾರ್ಟ್‌ವಾಚ್ ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಅಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಒಂದು ವಾರ ಅಂದರೆ ಏಳು ದಿನಗಳು ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಬಹುದು. ಅಷ್ಟು ಮಾತ್ರವಲ್ಲದೆ ಫಾಸ್ಟ್ ಚಾರ್ಜಿಂಗ್‌ಗೆ ಅನುಕೂಲ ಮಾಡಿಕೊಟ್ಟಿದ್ದು, ಇದರಿಂದ ಪದೇ ಪದೇ ಚಾರ್ಜ್ ಮಾಡುವ ಹಾಗೂ ದೀರ್ಘವಾಗಿ ಚಾರ್ಜಿಂಗ್‌ಗೆ ಇಡುವ ಅವಶ್ಯಕತೆ ಇರುವುದಿಲ್ಲ.
ಬೋಟ್ ವೇವ್ ಲೈಟ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಇನ್ನು ಇದರ ಪ್ರಮುಖ ವಿಚಾರವಾದ ಬೆಲೆ ವಿಚಾರಕ್ಕೆ ಬರುವುದಾದರೆ ಈ ವಾಚ್ 6,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಇದನ್ನು ನೀವು ಈಗ 1,299ರೂ.ಗಳಿಗೆ ಕೊಂಡುಕೊಳ್ಳಬಹುದು. ಅಂದರೆ ಅಮೆಜಾನ್‌ನಲ್ಲಿ ಈ ವಾಚ್‌ಗೆ ಬರೋಬ್ಬರಿ 81% ರಿಯಾಯಿತಿ ನೀಡಲಾಗಿದೆ. ಇದಿಷ್ಟು ಮಾತ್ರವಲ್ಲದೆ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಆಫರ್ ಅನ್ನು ಸಹ ಬಳಕೆ ಮಾಡಿಕೊಳ್ಳಬಹುದಾಗಿದ್ದು. ಇನ್ನೂ ಕಡಿಮೆ ದರದಲ್ಲಿ ಈ ವಾಚ್ ಖರೀದಿ ಮಾಡಬಹುದಾಗಿದೆ.
Boat Wave lite Smartwatch get Big Discount in Amazon know Offer Price Specs.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm