ಒಪ್ಪೋ ಕಂಪೆನಿಯಿಂದ ಹೊಸ ಫೋಲ್ಡ್‌ ಸ್ಮಾರ್ಟ್‌ಫೋನ್‌ ಲಾಂಚ್‌! ಫೀಚರ್ಸ್‌ ಹೇಗಿದೆ?

29-08-23 07:36 pm       Source: Gizbot Kannada   ಡಿಜಿಟಲ್ ಟೆಕ್

ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿರುವ ಮೊದಲ ಕ್ಲಾಮ್‌ಶೆಲ್‌ ಶೈಲಿಯ ಫೋಲ್ಡಬಲ್‌ ಫೋನ್‌ ಇದಾಗಿದೆ.

ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿರುವ ಮೊದಲ ಕ್ಲಾಮ್‌ಶೆಲ್‌ ಶೈಲಿಯ ಫೋಲ್ಡಬಲ್‌ ಫೋನ್‌ ಇದಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಅನಾವರಣಗೊಂಡಿದೆ. 3.26-ಇಂಚಿನ ಕವರ್ ಡಿಸ್‌ಪ್ಲೇ ಹೊಂದಿರುವ ಈ ಫೋನ್‌ 6.80 ಇಂಚಿನ ಮೇನ್‌ ಡಿಸ್‌ಪ್ಲೇ ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆಯನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Oppo Find N3 Flip With 3.26-Inch Cover Display, Triple Rear Cameras Launched:  Price, Specifications | Technology News

ಒಪ್ಪೋ ಫೈಂಡ್‌ N3 ಫ್ಲಿಪ್ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ 6.80 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಮೇನ್‌ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇದು 2520 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 1600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ 3.26 ಇಂಚಿನ ಕವರ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಮತ್ತು 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಪ್ರೊಸೆಸರ್‌ ಯಾವುದು?

ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ.

Exclusive] OPPO Find N3 Flip render shows off cover design; camera specs  revealed

ಒಪ್ಪೋ ಫೈಂಡ್‌ N3 ಫ್ಲಿಪ್ ಕ್ಯಾಮೆರಾ ಸೆಟ್‌ಅಪ್‌

ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮರಾ 50-ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್‌ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

Oppo Now Also Has A Flip Phone And It Is Called Oppo Find N2 Flip - SHOUTS

ಒಪ್ಪೋ ಫೈಂಡ್‌ N3 ಫ್ಲಿಪ್ ಬ್ಯಾಟರಿ ಮತ್ತು ಇತರೆ

ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ ಮತ್ತು NFC ಸೇರಿವೆ. ಹೆಚ್ಚುವರಿಯಾಗಿ, ಫೋನ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಗೈರೊಸ್ಕೋಪ್ ಅನ್ನು ಹೊಂದಿದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಬೆಲೆ ಮತ್ತು ಲಭ್ಯತೆ

ಒಪ್ಪೋ ಫೈಂಡ್‌ N3 ಫ್ಲಿಪ್ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಚೀನಾದಲ್ಲಿ 12GB + 256GB ಸ್ಟೋರೇಜ್‌ ಆಯ್ಕೆಗೆ CNY 6,799 (ಸುಮಾರು 77,000ರೂ)ಬೆಲೆಯನ್ನು ಹೊಂದಿದೆ. ಇದನ್ನು ಮಿರರ್ ನೈಟ್, ಮಿಸ್ಟ್ ರೋಸ್ ಮತ್ತು ಮೂನ್‌ಲೈಟ್ ಮ್ಯೂಸ್ ಬಣ್ಣದ ಆಯ್ಕೆಗಳಲ್ಲಿ ಸೇಲ್‌ ಆಗಲಿದೆ. ಇದು ಭಾರತಕ್ಕೆ ಯಾವಾಗ ಎಂಟ್ರಿ ನೀಡಲಿದೆ ಅನ್ನೊದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Oppo find N3 Flip with 3 26 Inch cover Display Launched price and Specifications Details.