ಭಾರತದಲ್ಲಿ ಮತ್ತೊಂದು ಟ್ಯಾಬ್‌ ಪರಿಚಯಿಸಿದ ಲೆನೊವೊ.. ಈ ಭಾರಿ ವಿಶೇಷತೆ ಏನು?

31-08-23 07:16 pm       Source: Gizbot Kannada   ಡಿಜಿಟಲ್ ಟೆಕ್

ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ ಟ್ಯಾಬ್‌ಗಳು ಕೂಡ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದರಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ ಟ್ಯಾಬ್‌ಗಳು ಸಾಕಷ್ಟು ಸೌಂಡ್‌ ಮಾಡುತ್ತಿವೆ.

ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ ಟ್ಯಾಬ್‌ಗಳು ಕೂಡ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದರಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ ಟ್ಯಾಬ್‌ಗಳು ಸಾಕಷ್ಟು ಸೌಂಡ್‌ ಮಾಡುತ್ತಿವೆ. ಇವುಗಳಲ್ಲಿ ಲೆನೊವೊ ಕಂಪೆನಿಯ ಟ್ಯಾಬ್‌ಗಳು ಕೂಡ ಒಂದಾಗಿದೆ. ಇದೀಗ ಲೆನೊವೊ ಕಂಪೆನಿ ಮತ್ತೊಂದು ಹೊಸ ಲೆನೊವೊ ಟ್ಯಾಬ್‌ P12 ಅನ್ನು ಬಿಡುಗಡೆ ಮಾಡಿದೆ.

ಹೌದು, ಲೆನೊವೊ ಟ್ಯಾಬ್‌ P12 ಭಾರತದಲ್ಲಿ ಬಿಡುಗಡೆ ಆಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಟ್ಯಾಬ್ಲೆಟ್ JBL ನಿಂದ ಕ್ವಾಡ್ ಸ್ಪೀಕರ್ ಸೆಟಪ್ ಅನ್ನು ಹೊಂದಿದ್ದು, ಇದು ಡಾಲ್ಬಿ ಅಟ್ಮೋಸ್‌ ಬೆಂಬಲವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ ಟ್ಯಾಬ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Lenovo Tab P12 Coming Soon In India With 12.7" 3K Display And JBL Speakers  | BDPrice.com.bd

ಲೆನೊವೊ ಟ್ಯಾಬ್‌ P12 ಫೀಚರ್ಸ್‌ ಹೇಗಿದೆ?

ಲೆನೊವೊ ಟ್ಯಾಬ್‌ P12 12.7 ಇಂಚಿನ LTPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2944x1840 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 400 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಜೊತೆಗೆ 96% DCI-P3 ಬಣ್ಣದ ಹರವು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡಲಿದೆ.

ಲೆನೊವೊ ಟ್ಯಾಬ್‌ P12 ಟ್ಯಾಬ್ಲೆಟ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಆದರೆ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಷ್‌ ಅನ್ನು ಸಹ ಜೋಡಿಸಲಾಗಿದೆ. ಇನ್ನು ಈ ಟ್ಯಾಬ್ಲೆಟ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ. ಈ ಟ್ಯಾಬ್‌ ಮೆಮೊರಿ ಕಾರ್ಡ್‌ ಬಳಸುವುದಕ್ಕೆ ಕೂಡ ಅವಕಾಶ ಕಲ್ಪಿಸಿದೆ.

ಇದರಿಂದ ನೀವು ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಆಡಿಯೋಗಾಗಿ JBLನ ಕ್ವಾಡ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಇದು Dolby Atmos ಬೆಂಬಲವನ್ನು ಒಳಗೊಂಡಿದೆ. ಇದಲ್ಲದೆ ಈ ಟ್ಯಾಬ್ಲೆಟ್‌ 10,200mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಾಗಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 10 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಕ್ಲೈಮ್ ಮಾಡಲಿದೆ.

The Latest Lenovo Tab P12 Launching Soon in India: Sale Starts on 5th  September 2023

ಇನ್ನು ಕನೆಕ್ಟಿವಿಟ ಆಯ್ಕೆಗಳಲ್ಲಿ ವೈ-ಫೈ 6 ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಆಂಡ್ರಾಯ್ಡ್ 13 ಓಎಸ್ ಮತ್ತು ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಲೆನೊವೊ ಟ್ಯಾಬ್‌ P12 ಬೆಲೆ ಮತ್ತು ಲಭ್ಯತೆ

ಲೆನೊವೊ ಟ್ಯಾಬ್‌ P12 ಟ್ಯಾಬ್ಲೆಟ್‌ ಭಾರತದಲ್ಲಿ 34,999ರೂ. ಬೆಲೆಯನ್ನು ಹೊಂದಿದೆ. ಆದರೆ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಸೀಮಿತ ಸಮಯದ ರಿಯಾಯಿತಿಯಲ್ಲಿ ಸೇಲ್‌ ಆಗಲಿದೆ. ಇನ್ನು ಈ ಟ್ಯಾಬ್‌ ಸ್ಟಾರ್ಮ್ ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದರೊಂದ ಲೆನೊವೊ ಸ್ಟೈಲಸ್ ಪೆನ್ ಅನ್ನು ಸಹ ನೀಡುತ್ತಿದೆ, ಆದರೆ ಇದನ್ನು ಪ್ರತ್ಯೇಕವಾಗಿ ಖರೀದಿಸಬೇಕಿದೆ.

Lenovo Xiaoxin Pad Pro 12.7's Xizi Green variant up for pre-sale in China,  pricing starts at 1699 yuan ($232) - Gizmochina

ಇನ್ನು ಇತ್ತೀಚಿಗೆ ಲೆನೊವೊ ಕಂಪೆನಿ ಭಾರತದಲ್ಲಿ ಲೆನೊವೊ ಸಂಸ್ಥೆಯು ಹೊಸ M10 5G ಟ್ಯಾಬ್‌ ಬಿಡುಗಡೆ ಮಾಡಿತ್ತು. ಇದು 10.61 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು ಐಪಿಎಸ್ ಎಲ್‌ಸಿಡಿ ಸ್ಕ್ರೀನ್‌ ಆಗಿದೆ. ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB + 128GB ಮತ್ತು 6GB + 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

Lenovo Tab p12 with 12 7 3k Display Launched in India.