ಭಾರತದಲ್ಲಿ ಹುವಾವೇ ಬ್ಯಾಂಡ್‌ 6 ಡಿವೈಸ್‌ ಖರೀದಿಗೆ ಲಭ್ಯ!..ಬೆಲೆ 3,999ರೂ!

14-06-21 03:10 pm       GIZBOT Mutthuraju H M   ಡಿಜಿಟಲ್ ಟೆಕ್

ಹುವಾವೇ ಬ್ಯಾಂಡ್‌ 6 ಫಿಟ್ನೆಸ ಡಿವೈಸ್‌ ಇಂದು ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಸೇಲ್ ಆರಂಭಿಸಿದೆ.

ಜನಪ್ರಿಯ ಟೆಕ್ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಹುವಾವೇ ಕಂಪೆನಿ ಫೋನ್‌ಗಳ ಜೊತೆಗೆ ಫಿಟ್ನೆಸ್‌ ಡಿವೈಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹುವಾವೇ ಬ್ಯಾಂಡ್‌ 6 ಫಿಟ್ನೆಸ ಡಿವೈಸ್‌ ಇಂದು (ಜೂ.14) ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಸೇಲ್ ಆರಂಭಿಸಿದೆ. ಇನ್ನು ಈ ಫಿಟ್ನೆಸ ಡಿವೈಸ್‌ನ ಬೆಲೆಯು 3,999ರೂ.ಗಳು ಆಗಿದೆ.

ಹೌದು, ಹುವಾವೇ ಸಂಸ್ಥೆ ಇತ್ತೀಚಿಗಷ್ಟೆ ದೇಶದಲ್ಲಿ ಪರಿಚಯಿಸಿರುವ ಹುವಾವೇ ಬ್ಯಾಂಡ್‌ 6 ಈಗ ಖರೀದಿಗೆ ಲಭ್ಯವಾಗಿದೆ. ಹಾನರ್ ಬ್ಯಾಂಡ್ 5 ರ ಉತ್ತರಾಧಿಕಾರಿಯಾಗಿ ಬಿಂಬಿತವಾಗಿರುವ ಈ ಡಿವೈಸ್ ಹಲವು ಆಕರ್ಷಕ ಫೀಚರ್ಸ್‌ಗಳಿಂದ ಫಿಟ್ನೆಸ್‌ ಪ್ರಿಯ ಗ್ರಾಹಕರನ್ನು ಸೆಳೆದಿದೆ. ಹಲವು ಫಿಟ್ನೆಸ್ ಟ್ರಾಕಿಂಗ್ ಮೋಡ್ ಆಯ್ಕೆಗಳನ್ನು ಒಳಗೊಂಡಿರುವ ಈ ಡಿವೈಸ್ ಅಂಬರ್ ಸನ್‌ರೈಸ್, ಫಾರೆಸ್ಟ್ ಗ್ರೀನ್ ಮತ್ತು ಗ್ರ್ಯಾಫೈಟ್ ಬ್ಲ್ಯಾಕ್ ಕಲರ್ ಆಯ್ಕೆಗಳನ್ನು ಪಡೆದಿದೆ. ಈ ಡಿವೈಸ್‌ನ ಇನ್ನಷ್ಟು ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.



ಡಿಸ್‌ಪ್ಲೇ ರಚನೆ

ಹುವಾವೇ ಬ್ಯಾಂಡ್ 6 194x368 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.47-ಇಂಚಿನ ಅಮೋಲೆಡ್ ಫುಲ್-ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 64 % ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಈ ಹುವಾವೇ ಬ್ಯಾಂಡ್ 6 ರ ಡಿಸ್‌ಪ್ಲೇ ಹಿಂದಿನ ಹುವಾವೇ ಬ್ಯಾಂಡ್ 4 ಗಿಂತ 148% ದೊಡ್ಡದಾಗಿದೆ ಎಂದು ಹೇಳಲಾಗಿದೆ. ಇದು ಸ್ಕಿನ್‌-ಫ್ರೆಂಡ್ಲಿ ಯುವಿ-ಟ್ರಿಟೆಡ್‌ ಸಿಲಿಕೋನ್ ಸ್ಟ್ರಾಪ್‌ ಅನ್ನು ಒಳಗೊಂಡಿದೆ.



ಹಲವು ಮೋಡ್‌ಗಳ ಆಯ್ಕೆ

ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ ಋತುಚಕ್ರ ಸೈಕಲ್ ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ ಅಲ್ಲದೆ ಫೋನ್ ಮೂಲಕ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವಿದೆ. ಆದರೆ ಈ ಎರಡೂ ವೈಶಿಷ್ಟ್ಯಗಳು ಆಂಡ್ರಾಯ್ಡ್‌ನಲ್ಲಿ ಮಾತ್ರ ಬೆಂಬಲಿತವಾಗಿದೆ. ಇದ್ಯ ಈ ಫಿಟ್ನೆಸ್‌ ಬ್ಯಾಂಡ್‌ನಲ್ಲಿ 96 ಕ್ಕೂ ಹೆಚ್ಚು ವರ್ಕೌಟ್‌ ಮೋಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ರನ್ನಿಂಗ್‌, ಸ್ವಿಮ್ಮಿಂಗ್‌, ಎಲಿಪ್ಟಿಕಲ್, ರೋಯಿಂಗ್, ಟ್ರೆಡ್‌ಮಿಲ್ ಮುಂತಾದ ಮೋಡ್‌ಗಳನ್ನು ನೀಡಲಾಗಿದೆ.



ಜೊತೆಗೆ ಫಿಟ್ನೆಸ್‌ ಬ್ಯಾಂಡ್‌ನಲ್ಲಿ ಅಪ್ಲಿಕೇಶನ್ ಅಧಿಸೂಚನೆಗಳು, ಒಳಬರುವ ಕರೆಗಳು ಮತ್ತು ಮೆಸೇಜ್‌ ಆಲರ್ಟ್‌, ಹವಾಮಾನ ನವೀಕರಣಗಳು ಮತ್ತು ಧರಿಸಬಹುದಾದ ಸಾಧನಗಳಿಗೆ ಸಂಪರ್ಕಗೊಂಡಿರುವ ಫೋನ್‌ನ ಕ್ಯಾಮೆರಾಕ್ಕಾಗಿ ರಿಮೋಟ್ ಶಟರ್ ಮುಂತಾದ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಫಿಟ್‌ನೆಸ್ ಬ್ಯಾಂಡ್ 5ATM (50 ಮೀಟರ್ ವರೆಗೆ) ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿದೆ. ಇದು ಮ್ಯಾಗ್ನೆಟಿಕ್ ಚಾರ್ಜಿಂಗ್ ಥಿಂಬಲ್ ಅನ್ನು ಹೊಂದಿದೆ ಮತ್ತು ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸುತ್ತದೆ ಮತ್ತು ನ್ಯಾವಿಗೇಷನ್ ಬೆಂಬಲಕ್ಕಾಗಿ ಸೈಡ್-ಬಟನ್ ಹೊಂದಿದೆ.



ಬ್ಯಾಟರಿ ಲೈಫ್

ಈ ಫಿಟ್ನೆಸ್‌ ಬ್ಯಾಂಡ್‌ ಎರಡು ವಾರಗಳ ಬ್ಯಾಟರಿ ಅವಧಿಯನ್ನು ಅಥವಾ 10 ದಿನಗಳವರೆಗೆ ಭಾರೀ ಬಳಕೆಯೊಂದಿಗೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಕೇವಲ ಐದು ನಿಮಿಷಗಳ ಚಾರ್ಜಿಂಗ್‌ನಲ್ಲಿ ಹುವಾವೇ ಬ್ಯಾಂಡ್ 6 ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಹುವಾವೆಯ ಟ್ರೂಸೀನ್ 4.0 24x7 ಹೃದಯ ಬಡಿತ ಮಾನಿಟರಿಂಗ್, ಟ್ರೂಸ್ಲೀಪ್ 2.0 ಸ್ಲೀಪ್ ಮಾನಿಟರಿಂಗ್ ಮತ್ತು ಕಂಪನಿಯ ಟ್ರುರೆಲ್ಯಾಕ್ಸ್ ಒತ್ತಡ ಮೇಲ್ವಿಚಾರಣಾ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.

(Kannada Copy of  Gizbot Kannada)