ಪ್ರಸಕ್ತ ವರ್ಷ ಭರ್ಜರಿ ಬೆಲೆ ಇಳಿಕೆ ಕಂಡಿರುವ 5 ಹೈ ಎಂಡ್‌ ಫೋನ್‌ಗಳು!

16-06-21 11:32 am       GIZBOT Mantesh   ಡಿಜಿಟಲ್ ಟೆಕ್

ಪ್ರಮುಖ ಮೊಬೈಲ್‌ ಕಂಪನಿಗಳ ಹೈಎಂಡ್‌ ಫೀಚರ್ಸ್‌ನ ಕೆಲವು ಜನಪ್ರಿಯ ಫೋನ್‌ಗಳು 2021ರಲ್ಲಿ ಭರ್ಜರಿ ಬೆಲೆ ಇಳಿಕೆಯನ್ನು ಕಂಡು ಗ್ರಾಹಕರನ್ನು ಮತ್ತೆ ಸೆಳೆದಿವೆ.

ಪ್ರಸ್ತುತ ಅಗತ್ಯ ಸಾಧನಗಳ ಪಟ್ಟಿಯಲ್ಲಿ ಸ್ಮಾರ್ಟ್‌ಫೋನ್ ಮೊದಲನೇಯದ್ದಾಗಿ ಕಾಣಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತಿ ಮೊಬೈಲ್ ಕಂಪನಿಗಳು ಹೊಸ ಹೊಸ ಮಾಡೆಲ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತ ಸಾಗಿವೆ. ಅವುಗಳಲ್ಲಿ ಮೀಡ್‌ರೇಂಜ್‌ ಹಾಗೂ ಫ್ಲ್ಯಾಗ್‌ಶಿಪ್‌ ಮಾದರಿಯ ಫೋನ್‌ಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತವೆ. ಅಂತಹ ಕೆಲವು ಫೋನ್‌ಗಳು 2021ರಲ್ಲಿ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಿವೆ.

ಹೌದು, ಪ್ರಮುಖ ಮೊಬೈಲ್‌ ಕಂಪನಿಗಳ ಹೈಎಂಡ್‌ ಫೀಚರ್ಸ್‌ನ ಕೆಲವು ಜನಪ್ರಿಯ ಫೋನ್‌ಗಳು 2021ರಲ್ಲಿ ಭರ್ಜರಿ ಬೆಲೆ ಇಳಿಕೆಯನ್ನು ಕಂಡು ಗ್ರಾಹಕರನ್ನು ಮತ್ತೆ ಸೆಳೆದಿವೆ. ಆ ಪೈಕಿ ಶಿಯೋಮಿ, ಸ್ಯಾಮ್‌ಸಂಗ್, ಒಪ್ಪೊ ಹಾಗೂ ಆಸೂಸ್ ಕಂಪನಿಯ ಫೋನ್‌ಗಳು ಸೇರಿವೆ. ಹಾಗಾದರೇ 2021 ರಲ್ಲಿ ಬೆಲೆ ಇಳಿಕೆಯನ್ನು ಪಡೆದ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.



ASUS ROG ಫೋನ್ 3

ಆಸುಸ್ ಈ ವರ್ಷ ROG ಫೋನ್ 5 ಅನ್ನು ಆಕರ್ಷಕ ಫೀಚರಸ್‌ ಮತ್ತು ಹೊಸ ಕೂಲಿಂಗ್ ಸಾಮರ್ಥ್ಯಗಳೊಂದಿಗೆ ಬಿಡುಗಡೆ ಮಾಡಿತು. ಇದು ಗೇಮರುಗಳಿಗಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ನೀವು ಗೇಮಿಂಗ್ ಸ್ಮಾರ್ಟ್‌ಫೋನ್‌ಗಾಗಿ 50,000ರೂ ಖರ್ಚು ಮಾಡಲು ಬಯಸದಿದ್ದರೆ, ಈ ಫೋನ್ ಉತ್ತಮ. ಆಸುಸ್ ROG ಫೋನ್ 3 ಇನ್ನೂ ಸ್ನ್ಯಾಪ್‌ಡ್ರಾಗನ್ 865 ನೊಂದಿಗೆ ಅತ್ಯಂತ ಸಮರ್ಥ ಸಾಧನವಾಗಿದ್ದು, ಇದನ್ನು 49,999ರೂ. ಗಳ ದಲ್ಲಿ ಮಾರಾಟ ಮಾಡಲು ಬಳಸಲಾಗುತ್ತಿತ್ತು. ಆದ್ರೆ ASUS ROG ಫೋನ್ 3 ಬೆಲೆ ಈಗ 8GB / 128GB RAM ರೂಪಾಂತರಕ್ಕೆ ಆನ್‌ಲೈನ್‌ನಲ್ಲಿ 41,999ರೂ. ಆಗಿದೆ.



ಶಿಯೋಮಿ ಮಿ 10

ಶಿಯೋಮಿ ಕಂಪನಿಯ ಈ ಶಿಯೋಮಿ ಮಿ 10 ಆಕರ್ಷಕ ಫೀಚರ್ಸ್‌ ಪಡೆದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್, 8 ಜಿಬಿ RAM ಮತ್ತು 12 ಜಿಬಿ ಸಂಗ್ರಹದೊಂದಿಗೆ ಬರುತ್ತದೆ. ಇದರ ಲಾಂಚ್ ಬೆಲೆಯು 50,000ರೂ ಆಗಿತ್ತು. ಶಿಯೋಮಿ ಮಿ 10 ಬೆಲೆಯಲ್ಲಿ 5,000ರೂ. ದರ ಇಳಿಕೆಯಿಂದಾಗಿ ಈಗ 44,999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. 256GB ಶೇಖರಣಾ ರೂಪಾಂತರದ ಬೆಲೆ 49,999ರೂ. ಆಗಿದೆ.



ಮೊಟೊರೊಲಾ ಎಡ್ಜ್ ಪ್ಲಸ್

ಮೊಟೊರೊಲಾ ಸಂಸ್ಥೆಯ ಮೊಟೊರೊಲಾ ಎಡ್ಜ್ ಪ್ಲಸ್ ಫೋನ್ ವೇಗದ ಪ್ರೊಸೆಸರ್‌ನಿಂದ ಗಮನ ಸೆಳೆದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಮತ್ತು 12 ಜಿಬಿ RAM ಅನ್ನು ಹೊಂದಿದೆ. ಭಾರತದಲ್ಲಿ ಮೋಟೋ ಎಡ್ಜ್ ಪ್ಲಸ್ ಬೆಲೆಯನ್ನು ಗಮನಾರ್ಹವಾಗಿ ಇಳಿಕೆ ಆಗಿದೆ. ಸದ್ಯ ಮೊಟೊರೊಲಾ ಎಡ್ಜ್ ಪ್ಲಸ್ 64,999ರೂ. ಆಗಿದೆ.



ಒಪ್ಪೋ ಫೈಂಡ್ ಎಕ್ಸ್ 2

ಒಪ್ಪೋ ಫೈಂಡ್ ಎಕ್ಸ್ 2 ಕಳೆದ ವರ್ಷ ಕಂಪನಿಯಿಂದ ಬಿಡುಗಡೆ ಮಾಡಿದ ದುಬಾರಿ ಫೋನ್ ಆಗಿದೆ. ಈ ಫೋನ್ 12 ಜಿಬಿ RAM ಮತ್ತು 256 ಜಿಬಿ ಸಂಗ್ರಹವನ್ನು ಹೊಂದಿದೆ. ದಿನನಿತ್ಯದ ಕಾರ್ಯಗಳಿಗಾಗಿ ಸ್ನಾಪ್ಡ್ರಾಗನ್ 865 ಪ್ರೊಸೆಸರ್ ಹೊಂದಿದೆ. ಸ್ಮಾರ್ಟ್ಫೋನ್ ಪ್ರಭಾವಶಾಲಿ 65W ನಲ್ಲಿ ಚಾರ್ಜ್ ಮಾಡುತ್ತದೆ. ಒಪ್ಪೋ ಫೈಂಡ್ ಎಕ್ಸ್ 2 ಬೆಲೆ ಈಗ, 57,990 ಆಗಿದೆ.



ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 2

ದುಬಾರಿ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 2 ಗುರುತಿಸಿಕೊಂಡಿದೆ. ಈ ಫೋನ್ ಡ್ಯುಯಲ್ ಸ್ಕ್ರೀನ್ ರಚನೆಯನ್ನು ಹೊಂದಿದೆ. ಸ್ಕ್ರೀನ್ ಸೂಪರ್ ಅಮೋಲೆಡ್ ಜೊತೆ ಎಫ್‌ಹೆಚ್‌ಡಿ ಪ್ಲಸ್ ಸಾಮರ್ಥ್ಯ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ 2 ಫೋನ್ ಸ್ನಾಪ್‌ಡ್ರಾಗನ್ 865+ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದರೊಂದಿಗೆ 12 ಜಿಬಿ RAM ಪಡೆದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ 2 ಫೋನ್ 15,000ರೂ. ದರ ಕಡಿತ ಕಂಡಿದ್ದು, ಈಗ 1.35 ಲಕ್ಷ ಬೆಲೆಯಲ್ಲಿ ಕಾಣಿಸಿಕೊಂಡಿದೆ.

(Kannada Copy of  Gizbot Kannada)