PF ಖಾತೆದಾರರೇ ಗುಡ್‌ನ್ಯೂಸ್; UANಗೆ ಅಧಾರ್ ಲಿಂಕ್ ಮಾಡಲು ಮತ್ತೆ ಕಾಲಾವಕಾಶ!

16-06-21 05:16 pm       GIZBOT Mantesh   ಡಿಜಿಟಲ್ ಟೆಕ್

ಕೋವಿಡ್ 19 ಎರಡನೇ ಅಲೆ ಇರುವ ಕಾರಣ ಸರ್ಕಾರದ ಕೋರಿಕೆಯ ಮೇರೆಗೆ ಆಧಾರ್-ಯುಎಎನ್‌ ಲಿಂಕ್ ಮಾಡಲು ಸೆಪ್ಟೆಂಬರ್ 1 2021ರ ವರೆಗೂ ಗಡುವನ್ನು ವಿಸ್ತರಣೆ ಮಾಡಲಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಕಡ್ಡಾಯವಾಗಿ ಆಧಾರ್ - ವೈಯಕ್ತಿಕ ಚಂದಾದಾರರ UAN (universal account number ) ನೊಂದಿಗೆ ಆಧಾರ್ ಲಿಂಕ್ ಮಾಡಲು ನೀಡಿದ್ದ ಜೂನ್ 1 ರಿಂದ 2021 ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ. ಕೋವಿಡ್ 19 ಎರಡನೇ ಅಲೆ ಇರುವ ಕಾರಣ ಸರ್ಕಾರದ ಕೋರಿಕೆಯ ಮೇರೆಗೆ ಆಧಾರ್-ಯುಎಎನ್‌ ಲಿಂಕ್ ಮಾಡಲು ಸೆಪ್ಟೆಂಬರ್ 1 2021ರ ವರೆಗೂ ಗಡುವನ್ನು ವಿಸ್ತರಣೆ ಮಾಡಲಾಗಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇಪಿಎಫ್ ಚಂದಾದಾರರು ಎದುರಿಸುತ್ತಿರುವ ಅನಾನುಕೂಲತೆ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರಿಗೆ ಹಲವಾರು ಪ್ರಾತಿನಿಧ್ಯ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಾದರೇ ಯುಎಎನ್‌ನೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.



UAN ಸಂಖ್ಯೆ

UAN-ಯುಎಎನ್ ಸಂಖ್ಯೆಯು ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ ಠೇವಣಿಗಳನ್ನು ಮಾಡುವ ಪ್ರತಿ ಉದ್ಯೋಗಿಗೆ ನಿಗದಿಪಡಿಸಿದ 12-ಅಂಕಿಯ ಖಾತೆ ಸಂಖ್ಯೆಯಾಗಿದೆ. ಸಾರ್ವತ್ರಿಕ ಖಾತೆ ಸಂಖ್ಯೆಯು ನೌಕರರಿಗೆ ಪಿಎಫ್ ಖಾತೆ ಸೇವೆಗಳನ್ನು ನಿರ್ವಹಿಸಲು ನೆರವಾಗಲಿದೆ. ಹಣ ಹಿಂಪಡೆಯುವುದು, ಪಿಎಫ್ ಸಾಲಗಳನ್ನು ಪಡೆಯುವುದು ಅಥವಾ ಇಪಿಎಫ್ ಬ್ಯಾಲೆನ್ಸ್‌ ಪರಿಶೀಲಿಸುವುದು ಖಾತೆದಾರರಿಗೆ ಸುಲಭ ಮತ್ತು ಅನುಕೂಲಕರವಾಗಿಸುತ್ತದೆ.



PF ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?

  • ಹಂತ 1: https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಿ
  • ಹಂತ 2: ಲಾಗಿನ್ ಮಾಡಲು ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ
  • ಹಂತ 3: ಈಗ, ಮೆಂಬರ್ ಮುಖಪುಟ ತೆರೆಯುತ್ತದೆ. ಪುಟದಲ್ಲಿ ಉಲ್ಲೇಖಿಸಲಾದ ವಿವರಗಳಿಂದ ಆಧಾರ್ ಅನ್ನು ಹುಡುಕಿ.
  • ಹಂತ 4: ನಿಮ್ಮ ಆಧಾರ್ ಸಂಖ್ಯೆ Verified ( DEMOGRAPHIC) ಎಂದು ಕಾಣಿಸಿದರೇ, ನಿಮ್ಮ ಆಧಾರ್ ನಿಮ್ಮ ಇಪಿಎಫ್ ಖಾತೆಗೆ ಲಿಂಕ್ ಆಗಿದೆ ಮತ್ತು ಯುಐಡಿಎಐ ಪರಿಶೀಲಿಸಿದೆ ಎಂದರ್ಥ.

ಆಧಾರ್ ಅನ್ನು EPF ಖಾತೆಯೊಂದಿಗೆ ಲಿಂಕ್ ಮಾಡಲು ಈ ಕ್ರಮ ಅನುಸರಿಸಿ:

  • ಹಂತ 1. EPF ವೆಬ್‌ಸೈಟ್ https://unifiedportal-mem.epfindia.gov.in/memberinterface/ ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
  • ಹಂತ 2. ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ನಿಮ್ಮ ಖಾತೆಗೆ ಲಾಗಿನ್ ಮಾಡಿ.
  • ಹಂತ 3. Manage ವಿಭಾಗದಲ್ಲಿ, ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 4. ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿಂದ ನಿಮ್ಮ EPF ಖಾತೆಯೊಂದಿಗೆ ಲಿಂಕ್ ಮಾಡಲು Aadhaar ಆಯ್ಕೆ ಮಾಡಬಹುದು.
  • ಹಂತ 5. ಈಗ, Aadhaar ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ಕಾರ್ಡ್ ಪ್ರಕಾರ ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ನಮೂದಿಸಿ ಮತ್ತು ಸೇವ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಹಂತ 6. ನಿಮ್ಮ ಆಧಾರ್ ವಿವರಗಳನ್ನು ನೀವು ಒಮ್ಮೆ ಉಳಿಸಿದ ನಂತರ, ನಿಮ್ಮ ಆಧಾರ್ ಅನ್ನು ಯುಐಡಿಎಐ ಡೇಟಾದಿಂದ ಪರಿಶೀಲಿಸಲಾಗುತ್ತದೆ.
  • ಹಂತ 7. ನಿಮ್ಮ ಕೆವೈಸಿ ಡಾಕ್ಯುಮೆಂಟ್‌ನ ಯಶಸ್ವಿ ಅನುಮೋದನೆಯ ಮೇರೆಗೆ, ನೀವು ಯಶಸ್ವಿಯಾಗಿ ಆಧಾರ್ ಅನ್ನು EPF ಖಾತೆಯೊಂದಿಗೆ ಲಿಂಕ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಆಧಾರ್ Verified ಆಗಿರುವುದನ್ನು ಕಾಣಬಹುದು.

(Kannada Copy of Giz)