Microsoft ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಅವಿರೋಧ ಆಯ್ಕೆ!

18-06-21 10:33 am       GIZBOT Mantesh   ಡಿಜಿಟಲ್ ಟೆಕ್

Microsoft ಸಂಸ್ಥೆಯು ಬುಧವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರನ್ನು ಜಾನ್ ಥಾಂಪ್ಸನ್ ಬದಲಿಗೆ ತನ್ನ ಹೊಸ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ.

ಟೆಕ್ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಮೈಕ್ರೊಸಾಫ್ಟ್ ಕಾರ್ಪ್ (Microsoft) ಸಂಸ್ಥೆಯು ಬುಧವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರನ್ನು ಜಾನ್ ಥಾಂಪ್ಸನ್ ಬದಲಿಗೆ ತನ್ನ ಹೊಸ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ.

ಸ್ಟೀವ್ ಬಾಲ್ಮರ್ ಅವರಿಂದ 2014 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಸತ್ಯ ನಾಡೆಲ್ಲಾ (Satya Nadella), ಸಂಸ್ಥೆಯ ಲಿಂಕ್ಡ್ ಇನ್, ನ್ಯೂನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಬಿಲಿಯನ್ ಡಾಲರ್ ಸ್ವಾಧೀನಗಳು ಸೇರಿದಂತೆ ತನ್ನ ವ್ಯವಹಾರವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. 2014 ರಲ್ಲಿ ಸಾಫ್ಟ್ ವೇರ್ ದೈತ್ಯನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಥಾಂಪ್ಸನ್ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಕಂಪನಿ ಹೇಳಿದೆ.



53 ವರ್ಷದ ನಾಡೆಲ್ಲಾ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ, ಮಂಡಳಿಯ ಕಾರ್ಯಸೂಚಿಗಳಲ್ಲಿ ಸ್ವತಂತ್ರ ನಿರ್ದೇಶಕರ ಪರವಾಗಿ ಮಾಹಿತಿ ಒದಗಿಸುವುದು, ಸ್ವತಂತ್ರ ನಿರ್ದೇಶಕರ ಸಭೆಗಳನ್ನು ಕರೆಯುವುದು, ಕಾರ್ಯನಿರ್ವಾಹಕ ಅಧಿವೇಶನಗಳಿಗೆ ಕಾರ್ಯಸೂಚಿಗಳನ್ನು ನಿಗದಿಪಡಿಸುವುದು ಮತ್ತು ಪ್ರಮುಖ ಕಾರ್ಯಕ್ಷಮತೆಯ ಮೌಲ್ಯಮಾಪನಗಳು ಸೇರಿದಂತೆ ಮಹತ್ವದ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎಂದು ಮೈಕ್ರೋಸಾಫ್ಟ್ ಹೇಳಿದ್ದಾರೆ.



ಮಣಿಪಾಲ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಸತ್ಯ ನಾದೆಲ್ಲಾರವರು ಹೈದರಾಬಾದ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ಅಧ್ಯಯನಕ್ಕಾಗಿ ಮಣಿಪಾಲ್ ಯುನಿವರ್ಸಿಟಿಗೆ ತೆರಳಿದರು. 1988ರಲ್ಲಿ ಪದವೀಧರರಾದ ನಂತರ, ಮಿಲ್ವಾಕಿಯ ಯುನಿವರ್ಸಿಟಿ ಆಫ್ ವಿಸ್ಕನ್ಸಿನ್ ಅಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದರು. ಚಿಕಾಗೋ ಯುನಿವರ್ಸಿಟಿಯ 'ಬೂತ್ ಸ್ಕೂಲ್ ಅಫ್ ಬ್ಯುಸಿನೆಸ್' ಇಂದ ಎಂಬಿಎ ಪದವಿಯನ್ನು ಸಹ ಪಡೆದಿದ್ದಾರೆ. ಸತ್ಯ ನಾರಾಯಣ ನಾಡೆಲ್ಲ ಭಾರತೀಯ ಅಮೆರಿಕನ್. ಮೂಲತಃ ಆಂಧ್ರಪ್ರದೇಶದ ಹೈದರಾಬಾದ್​ನವರು. ಪತ್ನಿ ಅನುಪಮಾ ನಾಡೆಲ್ಲಾ. ಝೈನ್, ದಿವ್ಯಾ ಹಾಗೂ ತಾರಾ ಎಂಬ ಮೂರು ಮಕ್ಕಳಿದ್ದಾರೆ. 1992ರಲ್ಲಿ ಮೈಕ್ರೋಸಾಫ್ಟ್ ಗೆ ಸೇರ್ಪಡೆ ನಾದೆಲ್ಲಾರವರು 1992ರಲ್ಲಿ ಮೈಕ್ರೋಸಾಫ್ಟ್ ಸೇರುವ ಮುನ್ನ 'ಸನ್ ಮೈಕ್ರೋಸಿಸ್ಟಮ್ಸ್' (ಈಗ ಒರಾಕಲ್ ಕಾರ್ಪೋರೇಷನ್ ಒಡೆತನದಲ್ಲಿದೆ) ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

(Kannada Copy of Gizbot Kannada)