ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ಮತ್ತು A7 ಲೈಟ್‌ನ ಬೆಲೆ ಬಹಿರಂಗ!

18-06-21 10:50 am       GIZBOT Mutthuraju H M   ಡಿಜಿಟಲ್ ಟೆಕ್

ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಗ್ಯಾಲಕ್ಸಿ ಟ್ಯಾಬ್ A7 ಲೈಟ್‌ ಟ್ಯಾಬ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಲು ಡೇಟ್‌ ಫಿಕ್ಸ್‌ ಮಾಡಿದೆ.

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ ಟ್ಯಾಬ್‌ಗಳಲ್ಲೂ ಜನಪ್ರಿಯತೆಯನ್ನು ಸಾಧಿಸಿದೆ. ಈಗಾಗಲೇ ಹಲವು ಆಕರ್ಷಕ ಟ್ಯಾಬ್ಲೆಟ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಸದ್ಯ ಇದೀಗ ಹೊಸ ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಗ್ಯಾಲಕ್ಸಿ ಟ್ಯಾಬ್ A7 ಲೈಟ್‌ ಟ್ಯಾಬ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಲು ಡೇಟ್‌ ಫಿಕ್ಸ್‌ ಮಾಡಿದೆ. ಇನ್ನು ಈ ಟ್ಯಾಬ್‌ಗಳು ಇದೇ ಜೂನ್ 18 ರಂದು ಭಾರತಕ್ಕೆ ಎಂಟ್ರಿ ನೀಡಲಿದ್ದು, ಬಿಡುಗಡೆಗೂ ಮುನ್ನವೇ ಇವುಗಳ ಬೆಲೆ ಹಾಗೂ ವಿಶೇಷತೆ ಏನು ಅನ್ನೊದು ಬಹಿರಂಗವಾಗಿದೆ.

ಹೌದು, ಸ್ಯಾಮ್‌ಸಂಗ್‌ ಸಂಸ್ಥೆ ಇದೇ ಜೂನ್‌ 18 ರಂದು ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಟ್ಯಾಬ್ A7 ಲೈಟ್‌ ಅನ್ನು ಲಾಂಚ್‌ ಮಾಡಲಿದೆ. ಬಿಡುಗಡೆಯ ದಿನಾಂಕ ಫಿಕ್ಸ್‌ ಆದ ನಂತರ ಈ ಎರಡು ಟ್ಯಾಬ್‌ಗಳ ವಿಶೇಷತೆ ಹಾಗೂ ಬೆಲೆ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇನ್ನು ಟ್ಯಾಬ್‌ಗಳು ಇದೇ ಜೂನ್ 23 ರಿಂದ ಮಾರಾಟಕ್ಕೆ ಬರಲಿದೆ. ಹಾಗಾದ್ರೆ ಗ್ಯಾಲಕ್ಸಿ ಟ್ಯಾಬ್ S7 FE ಮತ್ತು ಟ್ಯಾಬ್ A7 ಲೈಟ್‌ ಬೆಲೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.



ಗ್ಯಾಲಕ್ಸಿ ಟ್ಯಾಬ್ S7 FE

ಗ್ಯಾಲಕ್ಸಿ ಟ್ಯಾಬ್ S7 FE 12.4-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಟ್ಯಾಬ್ಲೆಟ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಹಾಗೆಯೇ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 10,090mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.


ಗ್ಯಾಲಕ್ಸಿ ಟ್ಯಾಬ್ A7 ಲೈಟ್‌

ಈ ಟ್ಯಾಬ್‌ 8.7-ಇಂಚಿನ ಡಬ್ಲ್ಯುಎಕ್ಸ್‌ಜಿಎ + ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 15:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ ಪಿ 22 ಟಿ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 3GB RAM+ 32GB ಮತ್ತು 4GB RAM + 64 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಟ್ಯಾಬ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ರಿಯರ್‌ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಇದು 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುವ ನಿರೀಕ್ಷೆ ಇದೆ.

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ ಟ್ಯಾಬ್ S7 FE ಅಂದಾಜು 60,900 ರೂ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ. ಇನ್ನು ಈ ಟ್ಯಾಬ್‌ ಮಿಸ್ಟಿಕ್ ಬ್ಲ್ಯಾಕ್, ಮಿಸ್ಟಿಕ್ ಸಿಲ್ವರ್, ಮಿಸ್ಟಿಕ್ ಗ್ರೀನ್ ಮತ್ತು ಮಿಸ್ಟಿಕ್ ಪಿಂಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಇನ್ನು ಗ್ಯಾಲಕ್ಸಿ ಟ್ಯಾಬ್ A7 ಲೈಟ್‌ ಭಾರತದಲ್ಲಿ 14,999ರೂ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಇದು ಗ್ರೇ ಹಾಗೂ ಸಿಲ್ವರ್‌ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಇನ್ನು ಈ ಟ್ಯಾಬ್‌ಗಳು ಇದೇ ಜೂನ್‌ 18 ರಂದು ಬಿಡುಗಡೆ ಆಗಲಿದ್ದು, ಜೂನ್‌ 23 ರಿಂದ ಖರೀದಿಗೆ ಲಭ್ಯವಾಗಲಿವೆ.

(Kannada Copy of Gizbot Kannada)