ಇಂದು ನಡೆಯಲಿದೆ ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌! ಬೆಲೆ ಎಷ್ಟು?

30-06-21 10:58 am       GIZBOT Mutthuraju H M   ಡಿಜಿಟಲ್ ಟೆಕ್

ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಬಾರಿಗೆ ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಅನ್ನು ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 15,999 ರೂ. ಆಗಿದೆ.

ಜನಪ್ರಿಯ ರಿಯಲ್‌ಮಿ ಕಂಪೆನಿ ಇತ್ತೀಚಿಗಷ್ಟೇ ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಇಂದು(ಜೂ.30) ಮಧ್ಯಾಹ್ನ 12ರಿಂದ ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಬಾರಿಗೆ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 15,999 ರೂ. ಆಗಿದ್ದು, ಇದು ರೇಸಿಂಗ್ ಬ್ಲೂ ಮತ್ತು ರೇಸಿಂಗ್ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಹೌದು, ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಇಂದು ಫಸ್ಟ್‌ ಸೇಲ್‌ ಆರಂಭಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.



ಡಿಸ್‌ಪ್ಲೇ ರಚನೆ

ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 90.5% ಸ್ಕ್ರೀನ್‌ ಟು ಬಾಡಿ ಅನುಪಾತ ಹೊಂದಿದೆ. ಈ ಡಿಸ್‌ಪ್ಲೇ 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ.



ಪ್ರೊಸೆಸರ್‌ ಯಾವುದು?

ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.



ಟ್ರಿಪಲ್‌ ಕ್ಯಾಮೆರಾ

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.



ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದು ಸ್ಟ್ಯಾಂಡ್‌ಬೈನಲ್ಲಿ ಒಂದು ತಿಂಗಳ ಕಾಲ ಉಳಿಯಬಹುದು, ಆನ್‌ಲೈನ್ ವೀಡಿಯೊಗಳನ್ನು 16 ಗಂಟೆಗಳ ಕಾಲ ನಿರಂತರವಾಗಿ ಸ್ಟ್ರೀಮ್ ಮಾಡಬಹುದು ಅಥವಾ ಒಂದೇ ಚಾರ್ಜ್‌ನಲ್ಲಿ 11 ಗಂಟೆಗಳ ಕಾಲ ಆಟಗಳನ್ನು ಆಡಲು ಬಳಸಬಹುದು ಎಂದು ರಿಯಲ್‌ಮಿ ಹೇಳಿಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G ಎಲ್ ಟಿಇ, ವೈ-ಫೈ, ಬ್ಲೂಟೂತ್ ವಿ 5.1, ಜಿಪಿಎಸ್ / ಎ-ಜಿಪಿಎಸ್, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ.



ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ ನಾರ್ಜೊ 30 5G ಭಾರತದಲ್ಲಿ 6GB RAM + 128GB ಶೇಖರಣಾ ಆಯ್ಕೆಗೆ 15,999 ರೂ. ಬೆಲೆ ಹೊಂದಿದೆ. ಇನ್ನು ರಿಯಲ್‌ಮಿ ನಾರ್ಜೊ 30 ಭಾರತದಲ್ಲಿ 4GB RAM+ 64GB ಶೇಖರಣಾ ಆಯ್ಕೆಗೆ 12,499ರೂ. ಬೆಲೆ ಹೊಂದಿದೆ. ಅಲ್ಲದೆ 6GB RAM + 128GB ಶೇಖರಣಾ ಮಾದರಿಗೆ 14,499 ರೂ. ಬೆಲೆಯನ್ನು ಹೊಂದಿದೆ. ಇನ್ನು ಫಸ್ಟ್‌ ಸೇಲ್‌ ಪ್ರಯುಕ್ತ ರಿಯಲ್‌ಮಿ.ಕಾಂನಲ್ಲಿ 500 ರೂ. ಕ್ಯಾಶ್‌ಬ್ಯಾಕ್‌ ದೊರೆಯಲಿದೆ. ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್ಕಾರ್ಟ್‌ನಿಂದ ಸಹ ಖರೀದಿಸಬಹುದು.

(Kannada Copy of Gizbot Kannada)