ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ ಅಂಶ ಗಮನಿಸಿ!

03-07-21 11:24 am       GIZBOT Mantesh   ಡಿಜಿಟಲ್ ಟೆಕ್

ಜನರು ಆನ್‌ಲೈನ್ ಮೂಲಕ ಪ್ಯಾನ್ ಅನ್ನು ಸುಲಭವಾಗಿ ಪಡೆಯಬಹುದು, ಆದಾಗ್ಯೂ, ನಿಮ್ಮ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮತ್ತು ಸ್ವೀಕರಿಸುವ ನಡುವೆ ಇದು ಸ್ವಲ್ಪ ಸಮಯವಾಗಿರುತ್ತದೆ.

ಪ್ಯಾನ್ ಕಾರ್ಡ್‌ ಹಲವು ಹಣಕಾಸಿನ ಕೆಲಸಗಳಿಗೆ ಒಂದು ಪ್ರಮುಖ ಬುನಾದಿ ಎನ್ನಬಹುದಾಗಿದೆ. ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು, ಹೊಸ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಆದಾಯ ತೆರಿಗೆ ಪಾವತಿಸುವುದು, ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆ ತೆರೆಯುವುದು ಈ ರೀತಿಯ ಹಲವು ಹಣಕಾಸಿನ ವಹಿವಾಟು ನಡೆಸಲು ಸಹ ಇದು ಅವಶ್ಯಕವಾಗಿದೆ.

ಪ್ಯಾನ್‌ ಕಾರ್ಡ್‌ ಹೊಂದುವುದು ಈಗ ಸುಲಭವಾಗಿದೆ. ಜನರು ಆನ್‌ಲೈನ್ ಮೂಲಕ ಪ್ಯಾನ್ (Pan Card) ಅನ್ನು ಸುಲಭವಾಗಿ ಪಡೆಯಬಹುದು, ಆದಾಗ್ಯೂ, ನಿಮ್ಮ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮತ್ತು ಸ್ವೀಕರಿಸುವ ನಡುವೆ ಇದು ಸ್ವಲ್ಪ ಸಮಯವಾಗಿರುತ್ತದೆ. ಆದ್ದರಿಂದ ನೀವು ಪ್ಯಾನ್ ಹೊಂದಿಲ್ಲದಿದ್ದರೆ ಆನ್‌ಲೈನ್‌ ಮೂಲಕ ಇನ್‌ಸ್ಟಂಟ್/ ಇ-ಪ್ಯಾನ್‌ ಕಾರ್ಡ್‌ಗಾಗಿ ಕ್ಷಣದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.



ಇನ್‌ಸ್ಟಂಟ್ ಇ-ಪ್ಯಾನ್‌ ಕಾರ್ಡ್ (Instant e-PAN)

ಇನ್‌ಸ್ಟಂಟ್ ಇ-ಪ್ಯಾನ್ ಕಾರ್ಡ್ಎನ್ನುವುದು ಮಾನ್ಯ ಆಧಾರ್ ಸಂಖ್ಯೆಯನ್ನು ಹೊಂದಿರುವ ಅರ್ಜಿದಾರರಿಗೆ ವಿಸ್ತರಿಸಿದ ಸೌಲಭ್ಯವಾಗಿದೆ. 2020 ರ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪರಿಚಯಿಸಿದ್ದು, ವಿವರವಾದ ಫಾರ್ಮ್ ಅನ್ನು ಭರ್ತಿ ಮಾಡದೆಯೇ ಅರ್ಜಿದಾರರಿಗೆ ಪ್ಯಾನ್ ಸುಲಭವಾಗಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶವನ್ನು ಇದು ಹೊಂದಿತ್ತು.



ಇನ್‌ಸ್ಟಂಟ್ ಇ-ಪ್ಯಾನ್‌ಗೆ ಅರ್ಜಿ

* ಪ್ಯಾನ್‌ನೊಂದಿಗೆ ಸಂಪರ್ಕ ಹೊಂದಿದ ಆಧಾರ್ ಹೊಂದಿರುವ ಜನರು. ಪ್ಯಾನ್(PAN) ಮತ್ತು ಆಧಾರ್ ಲಿಂಕ್ ಮಾಡದವರು ಇದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

* ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಪೂರ್ಣ ಜನ್ಮ ದಿನಾಂಕದ ಅಗತ್ಯವಿದೆ. ಅಪ್ರಾಪ್ತ ವಯಸ್ಕರಿಗೆ ಇನ್‌ಸ್ಟಂಟ್ ಇ-         ಪ್ಯಾನ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

* ಅರ್ಜಿದಾರರು ತಮ್ಮ ಮೊಬೈಲ್ ಫೋನ್ ಸಂಖ್ಯೆಗಳನ್ನು ತಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.



ಅರ್ಜಿ ಸಲ್ಲಿಸಲು ಈ ಕ್ರಮ ಅನುಸರಿಸಿ

ಹಂತ 1: ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ, https://www.incometax.gov.in/iec/foportal

ಹಂತ 2: ಮುಖಪುಟದಲ್ಲಿ ಆನ್‌ಲೈನ್ ಸೇವೆಗಳ ವಿಭಾಗಕ್ಕೆ ಹೋಗಿ ಮತ್ತು ತ್ವರಿತ ಇ-ಪ್ಯಾನ್ ಕ್ಲಿಕ್ ಮಾಡಿ. ತತ್ಕ್ಷಣ ಇ-ಪ್ಯಾನ್ ಆಯ್ಕೆಯು ನಿಮ್ಮ ಪರದೆಯಲ್ಲಿ ಮೊದಲಿಗೆ ಕಾಣಿಸದಿದ್ದರೆ 'ಇನ್ನಷ್ಟು ತೋರಿಸು' ಕ್ಲಿಕ್ ಮಾಡಿ.

ಹಂತ 3: ಹೊಸ ಇ-ಪ್ಯಾನ್ ಕ್ಲಿಕ್ ಮಾಡಿ

ಹಂತ 4: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ

ಹಂತ 5: 'ಸ್ವೀಕರಿಸಿ' ಒತ್ತುವ ಮೊದಲು ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ

ಹಂತ 6: ನಿಮ್ಮ ಆಧಾರ್ ಸಂಖ್ಯೆಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ನೀವು ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ಸ್ವೀಕರಿಸುತ್ತೀರಿ.

ಹಂತ 7: ನಿಮ್ಮ ಇ-ಮೇಲ್ ಐಡಿಯನ್ನು ನಮೂದಿಸಿ ಮತ್ತು 'ದೃಡೀಕರಿಸಿ' ಕ್ಲಿಕ್ ಮಾಡಿ. ತ್ವರಿತ ಇ-ಪ್ಯಾನ್ ಅನ್ನು ನಿಮ್ಮ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ ಮತ್ತು ಅದನ್ನು ಪಿಡಿಎಫ್ ರೂಪದಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಬಹುದು.