ಭಾರತದಲ್ಲಿ ಅಗ್ಗದ ಬೆಲೆಯ ನೋಕಿಯಾ G20 ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?

06-07-21 04:55 pm       GIZBOT Mutthuraju H M   ಡಿಜಿಟಲ್ ಟೆಕ್

ನೋಕಿಯಾ G20 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇಂದು ಅಮೆಜಾನ್‌ ಇಂಡಿಯಾದಲ್ಲಿ ಲಾಂಚ್‌ ಆಗಿದ್ದು, 12,999 ರೂ. ಬೆಲೆಯನ್ನು ಪಡೆದುಕೊಂಡಿದೆ.

ನೋಕಿಯಾ ಕಂಪೆನಿ ಮೊಬೈಲ್‌ ಜಗತ್ತಿನ ಎವರ್‌ಗ್ರೀನ್‌ ಬ್ರಾಂಡ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಬಹುನಿರೀಕ್ಷಿತ ನೋಕಿಯಾ G20 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇಂದು ಅಮೆಜಾನ್‌ ಇಂಡಿಯಾದಲ್ಲಿ ಲಾಂಚ್‌ ಆಗಿದ್ದು, 12,999 ರೂ. ಬೆಲೆಯನ್ನು ಪಡೆದುಕೊಂಡಿದೆ.

ಹೌದು, ನೋಕಿಯಾ ಕಂಪೆನಿ ಭಾರತದಲ್ಲಿ ನೋಕಿಯಾ G20 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ವಾಸ್ತವವಾಗಿ, ಅಮೆಜಾನ್ ಇಂಡಿಯಾ ಹೇಳುವಂತೆ ನೋಕಿಯಾ G20 ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿದ್ದು ಜುಲೈ 7 ರಂದು ಮಾರಾಟವಾಗಲಿದೆ. ಆದಾಗ್ಯೂ, ಫೋನ್ ನೋಕಿಯಾದ ಆನ್‌ಲೈನ್ ಅಂಗಡಿಯಲ್ಲಿಯೂ ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ನೈಟ್‌ ಮತ್ತು ಗ್ಲೇಸಿಯರ್‌ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.



ಡಿಸ್‌ಪ್ಲೇ

ನೋಕಿಯಾ G20 ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 81.9% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಜೊತೆಗೆ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.



ಪ್ರೊಸೆಸರ್‌

ನೋಕಿಯಾ G20 ಸ್ಮಾರ್ಟ್‌ಫೋನ್‌ ಚಿಪ್‌ಸೆಟ್ ಮೀಡಿಯಾ ಟೆಕ್ ಹಿಲಿಯೊ G35 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.



ಕ್ಯಾಮೆರಾ ವಿಶೇಷ

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌-ಸೆನ್ಸಾರ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.



ಬ್ಯಾಟರಿ ಮತ್ತು ಇತರೆ

ನೋಕಿಯಾ G20 ಸ್ಮಾರ್ಟ್‌ಫೋನ್‌ 5050mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಯುಎಸ್‌ಬಿ-ಸಿ ಚಾರ್ಜರ್‌ನೊಂದಿಗೆ ಬರುತ್ತದೆ. ಸಿಂಗಲ್‌ ಚಾರ್ಜ್‌ನಲ್ಲಿ ಮೂರು ದಿನಗಳವರೆಗೆ ಹೋಗಬಹುದು ಎಂದು ಹೇಳಿದೆ. ಇದಲ್ಲದೆ ಬಯೋಮೆಟ್ರಿಕ್ ಪರಿಶೀಲನೆಗಾಗಿ ಪವರ್ ಕೀ-ಆರೋಹಿತವಾದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದೆ.



ಬೆಲೆ ಮತ್ತು ಲಭ್ಯತೆ

ಇನ್ನು ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ 12,999 ರೂ. ಬೆಲೆಯನ್ನು ಪಡೆದುಕೊಂಡಿದೆ. ಇದು ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿದ್ದು ಜುಲೈ 7 ರಂದು ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ನೈಟ್‌ ಮತ್ತು ಗ್ಲೇಸಿಯರ್‌ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

(Kannada Copy of Gizbot Kannada)