ಸ್ಮಾರ್ಟ್‌ಫೋನ್ ಬಳಕೆದಾರರೇ ಈ ಟಿಪ್ಸ್‌ ಖಂಡಿತಾ ಉಪಯುಕ್ತ!

07-07-21 02:52 pm       GIZBOT Mantesh   ಡಿಜಿಟಲ್ ಟೆಕ್

ಸ್ಮಾರ್ಟ್‌ಫೋನ್ ತಂತ್ರಜ್ಞಾನ ಹರಿಯುವ ನೀರಿನಂತೆ ಸದಾ ಅಪ್‌ಡೇಟ್‌ ಆಗುತ್ತಲೇ ಇದ್ದು, ಫೋನ್ ಸೇರುವ ನೂತನ ಫೀಚರ್ಸ್‌ಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತವೆ.

ಸದ್ಯ ಪ್ರತಿಯೊಬ್ಬರ ಕೈಯಲ್ಲಿಯೂ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಬಹುತೇಕರು ಸ್ಮಾರ್ಟ್‌ಫೋನಿನಲ್ಲಿ ಇಂಟರ್ನೆಟ್‌, ಕರೆಗಳು, ಕ್ಯಾಮೆರಾ ಮತ್ತು ಸಾಮಾಜಿಕ ಆಪ್ಸ್‌ಗಳು ಸೇರಿದಂತೆ ಅಗತ್ಯ ಫೀಚರ್‌ಗಳನ್ನು ಮಾತ್ರ ಬಳಸುತ್ತಿರುತ್ತಾರೆ. ಆದರೆ ಕೆಲವರು ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಲಭ್ಯವಿರುವ ಹಾಗೂ ಇತ್ತೀಚಿನ ಹೊಸ ಅಪ್‌ಡೇಟ್‌ ಫೀಚರ್‌ಗಳನ್ನು ಜಾಲಾಡಿ ಬಿಟ್ಟಿರುತ್ತಾರೆ. ಏಕೆಂದರೇ ಹೊಸ ಫೀಚರ್‌ಗಳು ಸ್ಮಾರ್ಟ್‌ಫೋನ್‌ ಬಳಕೆಯನ್ನು ಮತ್ತಷ್ಟು ಸ್ಮಾರ್ಟ್‌ ಮಾಡಲಿದೆ.

ಹೌದು, ಸ್ಮಾರ್ಟ್‌ಫೋನ್ ತಂತ್ರಜ್ಞಾನ ಹರಿಯುವ ನೀರಿನಂತೆ ಸದಾ ಅಪ್‌ಡೇಟ್‌ ಆಗುತ್ತಲೇ ಇದ್ದು, ಫೋನ್ ಸೇರುವ ನೂತನ ಫೀಚರ್ಸ್‌ಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತವೆ. ಆದ್ರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗುವ ವಿಶೇಷ ಫೀಚರ್‌, ಸೆಟ್ಟಿಂಗ್, ಅಗತ್ಯ ಆಪ್ಸ್‌ಗಳನ್ನು ಬಳಸಿಕೊಳ್ಳುವ ಬಳಕೆದಾರರ ಸಂಖ್ಯೆ ಕಡಿಮೆ. ಅಂತಹ ಫೀಚರ್‌ಗಳ ಬಳಕೆಯು ಸ್ಮಾರ್ಟ್‌ಫೋನ್ ಹೆಚ್ಚು ಸ್ಮಾರ್ಟ್ ಮಾಡಲಿದೆ. ಆಪರೇಟಿಂಗ್‌ಗೆ ಡಿಜಿಟಲ್‌ ಲುಕ್ ನೀಡಲಿದೆ. ನಿಮ್ಮ ಸ್ಮಾರ್ಟ್‌ಫೋನ್‌ ಇನ್ನಷ್ಟು ಸ್ಮಾರ್ಟ್‌ ಎನಿಸುವ ಕೇಲವು ಫೀಚರ್ಸ್‌ಗಳ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.



ಫೋನ್ ಸ್ಪೀಡ್‌ ಚಾರ್ಜ್‌ಗೆ ಹೀಗೆ ಮಾಡಿ

ಸ್ಮಾರ್ಟ್‌ಫೋನ್‌ ಬಳಕೆದಾರರ ದೊಡ್ಡ ಸಮಸ್ಯೆ ಎಂದರೇ ಬ್ಯಾಟರಿ ಬಾಳಿಕೆ ಹೆಚ್ಚು ಕಾಲ ಬರುತ್ತಿಲ್ಲ ಎನ್ನುವುದೇ ಆಗಿದೆ. ಆದ್ರೆ, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಫೋನ್‌ಗೆ ವೇಗವಾಗಿ ಚಾರ್ಜ್ ಒದಗಿಸುತ್ತವೆ. ಫಾಸ್‌ ಚಾರ್ಜರ್‌ ಆಯ್ಕೆ ಇಲ್ಲದಿದ್ದರೇ ಬಳಕೆದಾರರು ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಸ್ಮಾರ್ಟ್‌ಫೋನ್‌ ಅನ್ನು ಏರೋಪ್ಲೇನ್‌ ಮೋಡ್‌ಗೆ ಹಾಕುವದು ಉತ್ತಮ. ಇದು ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್ ಪಡೆದುಕೊಳ್ಳಲು ನೆರವಾಗಲಿದೆ.



ದಾಖಲೆಗಳಿಗೆ ಡಿಜಿಟಲ್‌ ಟಚ್‌

ಪ್ರಸ್ತುತ ಪ್ರತಿ ಕೆಲಸಕ್ಕೂ ದಾಖಲೆಗಳು ಅಗತ್ಯವಾಗಿದ್ದು, ಮುಖ್ಯವಾಗಿ ಆಧಾರ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್‌, ಪಾನ್‌ ಕಾರ್ಡ್‌, ಅತೀ ಅವಶ್ಯವಾಗಿವೆ. ಇವುಗಳನ್ನು ಯಾವಾಗಲು ಜೊತೆಯಲ್ಲಿಯೇ ಇಟ್ಟುಕೊಳ್ಳುವದರಿಂದ ಕೆಲವೊಮ್ಮೆ ದಾಖಲಾತಿಗಳು ಕಳೆಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಈ ದಾಖಲೆಗಳಿಗೆ ಡಿಜಿಟಲ್ ಟಚ್‌ ನೀಡಿ ಫೋನ್‌ನಲ್ಲಿ ಸೇವೆ ಮಾಡಿಕೊಳ್ಳಿರಿ. ಅದಕ್ಕಾಗಿ ಹಲವು ಆಪ್ಸ್‌ಗಳು ಲಭ್ಯ ಇದ್ದು, ಗೂಗಲ್‌ ಡ್ರೈವ್, ಕ್ಯಾಮ್‌ಸ್ಕ್ಯಾನರ್‌, ಎವರ್‌ನೋಟ್‌ ಸೂಕ್ತ ಆಪ್ಸ್‌ಗಳಾಗಿವೆ.



ವಾಯಿಸ್‌ ಮೂಲಕ ವೈಫೈ ಆಫ್‌ ಮಾಡಿ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಅಸಿಸ್ಟಂಟ್‌, ಆಪಲ್‌ ಐಫೋನ್‌ಗಳಲ್ಲಿ ಸಿರಿ ವಾಯಿಸ್‌ ಅಸಿಸ್ಟಂಟ್‌ ಹೆಚ್ಚಿನ ಅನುಕೂಲ ಮಾಡಿಕೊಟ್ಟಿವೆ. ಬಹುತೇಕ ಆಪರೇಟಿಂಗ್ ಕೆಲಸಗಳನ್ನು ಬಳಕೆದಾರರು ವಾಯಿಸ್‌ ಕಮಾಂಡ್‌ ಮೂಲಕವೇ ನಿಯಂತ್ರಿಸಬಹುದು. ಹಾಗೇ ವಾಯಿಸ್‌ ಅಸಿಸ್ಟಂಟ್‌ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿನ ವೈಫೈ ಅನ್ನು ಸಹ ಟರ್ನ್‌ ಆಫ್‌ ಮಾಡಬಹುದಾಗಿವೆ. ಇದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸ್ಮಾರ್ಟ್‌ ಟಚ್‌ ಅನಿಸಲಿದೆ.



ZIP ಫೈಲ್‌ ಬಳಸಿ

ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಅನೇಕ ಅಗತ್ಯ ಕೆಲಸಗಳಿಗಾಗಿ ಆಪ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಅಸಲಿಗೆ ಎಷ್ಟು ಆಪ್ಸ್‌ಗಳನ್ನು ಹೆಚ್ಚಾಗಿ ಬಳಸುವುದೇ ಇಲ್ಲ. ಆದ್ರೆ, ಬಳಕೆಯಲ್ಲಿರದ ಆಪ್ಸ್‌ಗಳು ಸಹ ಫೋನಿನ ಸ್ಥಳ ಕಬಳಿಸುತ್ತವೆ. ಹೀಗಾಗಿ ಹೆಚ್ಚಾಗಿ ಬಳಸದ ಆಪ್ಸ್‌ಗಳನ್ನು ಬಳಕೆದಾರರು ಜೀಪ್‌ ಫೈಲ್‌ನಲ್ಲಿ ಮೂವ್‌ ಮಾಡುವುದು ಉತ್ತಮ. ಇದರಿಂದ ಫೋನ್‌ ಸ್ಥಳಾವಕಾಶ ಉಳಿಯುತ್ತದೆ ಜೊತೆಗೆ ಆಪ್ಸ್‌ಗಳು ಸಹ ಜೀಪ್‌ ಫೈಲ್‌ನಲ್ಲಿ ಇರುತ್ತವೆ.

(Kannada Copy of Gizbot Kannada)