ಶಿಯೋಮಿ ಮಿ 11 ಅಲ್ಟ್ರಾ ಫೋನ್‌ ಖರೀದಿಸುವ ಮೊದಲು ಈ ಅಂಶ ಗಮನಿಸಿ!

07-07-21 05:14 pm       GIZBOT Mantesh   ಡಿಜಿಟಲ್ ಟೆಕ್

ಶಿಯೋಮಿ ಕಂಪನಿಯು ನೂತನವಾಗಿ ಬಿಡುಗಡೆ ಮಾಡಿರುವ ಶಿಯೋಮಿ ಮಿ 11 ಅಲ್ಟ್ರಾ ಆಕರ್ಷಕ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ.

ಶಿಯೋಮಿ ಕಂಪನಿಯು ನೂತನವಾಗಿ ಬಿಡುಗಡೆ ಮಾಡಿರುವ ಶಿಯೋಮಿ ಮಿ 11 ಅಲ್ಟ್ರಾ ಆಕರ್ಷಕ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಇನ್ನು ಈ ಫೋನ್ ಈಗ ಖರೀದಿಗೆ ಸಹ ಲಭ್ಯವಾಗಿದೆ. ಶಿಯೋಮಿ ಮಿ 11 ಅಲ್ಟ್ರಾ ಫೋನ್ ಸ್ಯಾಮ್‌ಸಂಗ್, ಒನ್‌ಪ್ಲಸ್‌, ಆಪಲ್‌ನ ಹೈ ಎಂಡ್‌ ಫೋನ್‌ಗಳಿಗೆ ಪೈಪೋಟಿ ನೀಡುವಂತಹ ಲಕ್ಷಣಗಳನ್ನು ಹೊಂದಿದೆ. ನೀವೇನಾದರೂ ಶಿಯೋಮಿ ಮಿ 11 ಅಲ್ಟ್ರಾ ಫೋನ್‌ ಅನ್ನು ಖರೀದಿಸಲು ಇಚ್ಛಿಸಿದರೇ, ಅದಕ್ಕೂ ಮುನ್ನ ಶಿಯೋಮಿ ಮಿ 11 ಅಲ್ಟ್ರಾ ಫೋನ್‌ ಬಗ್ಗೆ ಕೆಲವು ಅಂಶಗಳನ್ನು ನೀವು ತಿಳಿಯಬೇಕು.

ಶಿಯೋಮಿ ಮಿ 11 ಅಲ್ಟ್ರಾ

ಫೋನಿನ ಬೆಲೆ ಶಿಯೋಮಿ ಮಿ 11 ಅಲ್ಟ್ರಾ ಫೋನಿನ ಬೆಲೆ 74,999ರೂ. ಆಗಿದೆ. ಶಿಯೋಮಿ ಕಂಪನಿಯು ಭಾರತದಲ್ಲಿ ಇದುವರೆಗೆ ಬಿಡುಗಡೆ ಮಾಡಿದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್ ಇದಾಗಿದೆ. ಸದ್ಯ ಕಂಪನಿಯು 5000 ರೂ.ಗಳ ಇನ್‌ಸ್ಟಂಟ್ ರಿಯಾಯಿತಿಯನ್ನು ನೀಡುತ್ತಿದ್ದು, ಇದರ ಬೆಲೆಯನ್ನು 69,999ರೂ.ಗೆ ಇಳಿಕೆ ಮಾಡಿದೆ.



ಭಾರತದಲ್ಲಿ ಸೀಮಿತ ಬಿಡುಗಡೆಯಾಗಿದೆ

ಹೊಸ ಶಿಯೋಮಿ ಮಿ 11 ಅಲ್ಟ್ರಾ ಫೋನ್‌ ಭಾರತದಲ್ಲಿ ಸೀಮಿತ ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಕಂಪನಿಯು ಹೇಳಿದೆ. ಹಾಗೆಯೇ ‘ಸೂಪರ್‌ಫ್ಯಾನ್ ಲಿಮಿಟೆಡ್ ಕ್ವಾಂಟಿಟಿ ಸೇಲ್' ಎಂದು ಕರೆಯುತ್ತಿದೆ.



ಶಿಯೋಮಿ ಮಿ 11 ಅಲ್ಟ್ರಾ ಫೋನ್‌ ಯಾವ ಕಲರ್‌ನಲ್ಲಿ ಲಭ್ಯ

ಶಿಯೋಮಿ ಮಿ 11 ಅಲ್ಟ್ರಾ ಸೆರಾಮಿಕ್ ವೈಟ್ ಮತ್ತು ಸೆರಾಮಿಕ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಬರುತ್ತದೆ. ಸೆರಾಮಿಕ್ ಬಾಡಿ ವಿನ್ಯಾಸದಲ್ಲಿ ಕಂಪನಿಯಿಂದ ಬಂದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.



ಶಿಯೋಮಿ ಮಿ 11 ಅಲ್ಟ್ರಾದ ವೇರಿಯಂಟ್‌ಗಳು

ಶಿಯೋಮಿ ಮಿ 11 ಅಲ್ಟ್ರಾ ಫೋನ್ ಒಂದೇ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿದೆ. ಅದು 12GB RAM ಮತ್ತು 256GBRAM ಸ್ಟೋರೇಜ್‌ ಆಯ್ಕೆ ಆಗಿದ್ದು, ಜೊತೆಗೆ ಈ ಫೋನ್ ಕ್ವಾಲ್ಕಾಮ್ನ ಉನ್ನತ-ಮಟ್ಟದ SoC ಸ್ನಾಪ್ಡ್ರಾಗನ್ 888 ಅನ್ನು ಹೊಂದಿದೆ.



ಶಿಯೋಮಿ ಮಿ 11 ಅಲ್ಟ್ರಾ ಫೋನ್ ಕ್ಯಾಮೆರಾ

ಶಿಯೋಮಿ ಮಿ 11 ಅಲ್ಟ್ರಾ ಫೋನಿನ ಪ್ರಮುಖ ಅಂಶಗಳಲ್ಲಿ ಕ್ಯಾಮೆರಾ ರಚನೆಯು ಸಹ ಒಂದಾಗಿದೆ. ಕಂಪನಿಯು ಪ್ರೊಫೆಷನಲ್ ಟ್ರಿಪಲ್ ಪ್ರೈಮರಿ ಕ್ಯಾಮೆರಾ ಸಿಸ್ಟಮ್ ಎಂದು ಕರೆಯುತ್ತದೆ. ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು 50 ಎಂಪಿ ಟ್ರೂಪಿಕ್ಸೆಲ್ ಕಸ್ಟಮ್ ಜಿಎನ್ 2 ಸೆನ್ಸಾರ್, 48 ಎಂಪಿ ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು 48 ಎಂಪಿ ಟೆಲಿಫೋಟೋ ಸೆನ್ಸಾರ್. ಮುಂಭಾಗವು 20 ಎಂಪಿ ಸೆಲ್ಫಿ ಶೂಟರ್ ನೆಲೆಯಾಗಿದೆ.



ಬ್ಯಾಟರಿ ಮತ್ತು ವಾಯರ್‌ಲೆಸ್‌ ಚಾರ್ಜಿಂಗ್ ಪವರ್ ಏನು?

ಶಿಯೋಮಿ ಮಿ 11 ಅಲ್ಟ್ರಾ ಫೋನ್ 67W ವೈರ್‌ಲೆಸ್ ಸಪೋರ್ಟ್‌ ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. 

(Kannada Copy of Gizbot Kannada)