ಜುಲೈ 15 ರಿಂದ ಶಿಯೋಮಿ ಮಿ 11 ಅಲ್ಟ್ರಾ ಫೋನ್‌ ಓಪನ್‌ ಸೇಲ್‌!

13-07-21 10:56 am       GIZBOT Mantesh   ಡಿಜಿಟಲ್ ಟೆಕ್

ಶಿಯೋಮಿ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಓಪೆನ್‌ ಸೇಲ್‌ಗೆ ಪ್ರಾರಂಭಿಸಲಿದ್ದು, ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ.

ಶಿಯೋಮಿ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಓಪೆನ್‌ ಸೇಲ್‌ಗೆ ಪ್ರಾರಂಭಿಸಲಿದ್ದು, ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಈ ಫೋನ್‌ ಇದೇ ಜುಲೈ 15 ರಂದು ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಖರೀದಿಗೆ ದೊರೆಯಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿರುವುದು ಗಮನ ಸೆಳೆದಿದೆ.

ಶಿಯೋಮಿ ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಜುಲೈ 15 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಶಿಯೋಮಿಯ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಮುಕ್ತ ಮಾರಾಟಕ್ಕೆ ಬರಲಿದೆ. ಇನ್ನು ಈ ಫ್ಲ್ಯಾಗ್‌ಶಿಪ್ ಫೋನ್ 12 ಜಿಬಿ RAM + 256GB ಶೇಖರಣಾ ಆಯ್ಕೆಯ ಒಂದೇ ರೂಪಾಂತರ ಹೊಂದಿದ್ದು, ಅದರ ಬೆಲೆಯು 69,999 ರೂ. ಆಗಿದೆ. ಹಾಗೆಯೇ ಈ ಫೋನ್ ಸೆರಾಮಿಕ್ ಬ್ಲ್ಯಾಕ್ ಮತ್ತು ಸೆರಾಮಿಕ್ ವೈಟ್ ಕಲರ್ ಆಯ್ಕೆಗಳನ್ನು ಪಡೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.



ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ 1,440x3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.81-ಇಂಚಿನ WQHD + E4 ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 120 Hz ರಿಫ್ರೆಶ್ ರೇಟ್‌, 480Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 515 PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದು 1,700 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌, 5,000,000: 1 ಕಾಂಟ್ರಾಸ್ಟ್ ಅನುಪಾತ ಮತ್ತು 100 ಪ್ರತಿಶತ DCI ​​-P 3 ಬಣ್ಣದ ಹರವು ಹೊಂದಿದೆ. ಇನ್ನು ಈ ಡಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಹೊಂದಿದೆ. ಜೊತೆಗೆ ಇದು ಹಿಂಭಾಗದಲ್ಲಿ ಕೂಡ 1.1-ಇಂಚಿನ ಡಿಸ್‌ಪ್ಲೇ ಹೊಂದಿದೆ.



ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌

ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ MIUI 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.



ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ಯಾಮೆರಾ

ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಎಫ್ / 2.2 ಲೆನ್ಸ್, ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದ್ದು, ಇದು 120x ಡಿಜಿಟಲ್ ಜೂಮ್ ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.



ಬ್ಯಾಟರಿ ಮತ್ತು ಇತರೆ

ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67 Wವೈರ್ಡ್ ಮತ್ತು ವಾಯರ್‌ಲೆಸ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಜೊತೆಗೆ 10 Wರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಅನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ 6, ಬ್ಲೂಟೂತ್ ವಿ 5.2, GPS, AGPS, ನ್ಯಾವಿಕ್ ಸಪೋರ್ಟ್, NFC ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

(Kannada Copy of Gizbot Kannada)