ಬ್ರೇಕಿಂಗ್ ನ್ಯೂಸ್
16-07-21 12:55 pm GIZBOT Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಮೆಸೇಜಿಂಗ್ ವಾಟ್ಸಾಪ್ ಭಾರತದ 2021 ರ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಅನುಸಾರವಾಗಿ ತನ್ನ ಮೊದಲ ಮಧ್ಯವರ್ತಿ ಮಾರ್ಗಸೂಚಿಗಳ ವರದಿಯನ್ನು ಪ್ರಕಟಿಸಿದೆ. ಮೇ 15 ರಿಂದ ಜೂನ್ 15 ರ ನಡುವೆ ಹೊಸ ಐಟಿ ನಿಯಮದ ಅನ್ವಯ 29 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಅನ್ನೊ ಮಾಹಿತಿಯನ್ನು ವಾಟ್ಸಾಪ್ ಬಹಿರಂಗಪಡಿಸಿದೆ. ಅಲ್ಲದೆ ವಾಟ್ಸಾಪ್ ಖಾತೆಗಳ ನಿಷೇಧದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದೆ.

ಹೌದು, ಭಾರತದಲ್ಲಿ ಜಾರಿಯಾದ ಹೊಸ ಮಾಹಿತಿ ತಂತ್ರಜ್ಞಾನದ ನಿಯಮ 2021ರ ಅನ್ವಯ ಮಾರ್ಗಸೂಚಿ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ 29 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದೆ. ಅಂತಹ ಖಾತೆ ನಿಷೇಧದ ಶೇಕಡಾ 95 ಕ್ಕಿಂತಲೂ ಹೆಚ್ಚು ಸ್ವಯಂಚಾಲಿತ ಅಥವಾ ಬೃಹತ್ ಸಂದೇಶಗಳ ಅನಧಿಕೃತ ಬಳಕೆಯಿಂದಾಗಿ ಇದನ್ನು ಸ್ಪ್ಯಾಮ್ ಎಂದು ವರ್ಗೀಕರಿಸಬಹುದು. ಜಾಗತಿಕ ಮಾಸಿಕ ಸರಾಸರಿ ಸುಮಾರು 8 ಮಿಲಿಯನ್ ಖಾತೆಗಳನ್ನು ಪ್ರತಿ ತಿಂಗಳು ನಿಷೇಧಿಸಲಾಗಿದೆ ಎಎಂದಿದೆ. ಹಾಗಾದ್ರೆ ವಾಟ್ಸಾಪ್ ಹೊಸ ಐಟಿ ನಿಯಮದ ಅನ್ವಯ 29 ಲಕ್ಷ ಖಾತೆಗಳನ್ನು ಬ್ಲಾಕ್ ಮಾಡಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್ 2021 ರ ಮೇ 15 ರಿಂದ ಜೂನ್ 15 ರವರೆಗೆ ವಿವಿಧ ವಲಯಗಳಿಂದ ಪಡೆದ ಕುಂದುಕೊರತೆಗಳ ವಿಘಟನೆಯನ್ನು ಹಂಚಿಕೊಂಡಿದೆ. ಮೊದಲ ಮಧ್ಯವರ್ತಿ ಮಾರ್ಗಸೂಚಿಗಳ ವರದಿಯ ಪ್ರಕಾರ, ಮೆಸೇಜಿಂಗ್ ಅಪ್ಲಿಕೇಶನ್ ಖಾತೆ ಬೆಂಬಲಕ್ಕಾಗಿ 70 ವಿನಂತಿಗಳನ್ನು ಮತ್ತು 204 ನಿಷೇಧ ಮೇಲ್ಮನವಿಗಳನ್ನು ಸ್ವೀಕರಿಸಿದೆ. ಇದರಲ್ಲಿ ಅಪ್ಲಿಕೇಶನ್ 63 ಖಾತೆಗಳನ್ನು ನಿಷೇಧಿಸಿದೆ. ಕುಂದುಕೊರತೆ ಎಂದು ಪರಿಗಣಿಸಿದ ಪ್ರಕರಣಗಳಿಗೆ ವಾಟ್ಸಾಪ್ ಸ್ಪಂದಿಸಿದೆ. ಒಮ್ಮೆ ಖಾತೆಯನ್ನು ನಿಷೇಧಿಸಿದರೆ ಅಥವಾ ದೂರಿನ ಪರಿಣಾಮವಾಗಿ ಹಿಂದೆ ನಿಷೇಧಿಸಲಾದ ಖಾತೆಯನ್ನು ಮರುಸ್ಥಾಪಿಸಿದರೆ ಖಾತೆಯನ್ನು ಕಾರ್ಯಗತಗೊಳಿಸಲಾಗುತ್ತದ ಎಂದು ವಾಟ್ಸಾಪ್ ತನ್ನ ವರದಿಯಲ್ಲಿ ಹೇಳಿದೆ.

ಇದಲ್ಲದೆ, ಅದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ದುರುಪಯೋಗ ಪತ್ತೆಹಚ್ಚುವಿಕೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ವಿವರಿಸುತ್ತದೆ. "ಖಾತೆಯ ಜೀವನಶೈಲಿಯ ಮೂರು ಹಂತಗಳಲ್ಲಿ ನಿಂದನೆ ಪತ್ತೆಹಚ್ಚುವಿಕೆ ಕಾರ್ಯನಿರ್ವಹಿಸುತ್ತದೆ. ಅಂದರೆ ನೋಂದಣಿಯಲ್ಲಿ, ಸಂದೇಶ ಕಳುಹಿಸುವ ಸಮಯದಲ್ಲಿ ಮತ್ತು ಋಣಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ, ನಾವು ಬಳಕೆದಾರರ ರೂಪದಲ್ಲಿ ಸ್ವೀಕರಿಸುತ್ತೇವೆ ಎಂದು ಹೇಳಿದೆ. ಮೆಸೇಜಿಂಗ್ ಅಪ್ಲಿಕೇಶನ್ ನಿಷೇಧಿತ ಖಾತೆಗಳಲ್ಲಿ ಭಾರತೀಯ ಸಂಖ್ಯೆಗಳನ್ನು ಒಳಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
(Kannada Copy of Gizbot Kannada)
23-09-26 05:14 pm
HK News Staffer
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 08:12 pm
HK News Staffer
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm
ರೌಡಿಶೀಟರ್ ಜೊತೆಗೆ ಹುಟ್ಟುಹಬ್ಬ ಪಾರ್ಟಿಯಲ್ಲಿ ಕುಡಿದ...
23-09-26 05:10 pm
ಸೈಬರ್ ಕ್ರೈಮ್ ಪೊಲೀಸರೆಂದು ಹೇಳಿ ವೈದ್ಯರಿಂದಲೇ 1.19...
23-09-26 09:32 am
Inspector Balakrishna Arrest, Police: ಮೇಲಧಿಕಾ...
22-09-26 09:00 pm