ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 12 ಮಿನಿ ಫೋನಿಗೆ ಭಾರೀ ಡಿಸ್ಕೌಂಟ್‌!

09-08-21 03:39 pm       Gizbot, Mantesh   ಡಿಜಿಟಲ್ ಟೆಕ್

ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಈ ಸೇಲ್‌ನಲ್ಲಿ ಆಯ್ದ ಐಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ತಿಳಿಸಿದೆ.

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸೇಲ್ ಆಯೋಜಿಸುತ್ತದೆ. ಅದೇ ರೀತಿ ಈಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ ಸೇಲ್ ಆಯೋಜಿಸಿದ್ದು, ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಈ ಸೇಲ್‌ನಲ್ಲಿ ಆಯ್ದ ಐಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ತಿಳಿಸಿದೆ. ಅವುಗಳಲ್ಲಿ ಆಪಲ್‌ನ ಇತ್ತೀಚಿಗಿನ ಹೊಸ ಐಫೋನ್ 12 ಮಿನಿ ದೊಡ್ಡ ಮೊತ್ತದ ರಿಯಾಯಿತಿಯ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣವು ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ ಸೇಲ್ ಸದ್ಯ ಚಾಲ್ತಿ ಇದೆ. ಈ ಸೇಲ್‌ ಮೇಳವು ಇದೇ (ಇಂದು) ಆಗಷ್ಟ್ 9 ರ ವರೆಗೂ ಚಾಲ್ತಿ ಇರಲಿದೆ. ಸೇಲ್‌ನಲ್ಲಿ ಇತ್ತೀಚಿಗಿನ ಹೊಸ ಐಫೋನ್ 12 ಮಿನಿ ಫೋನ್ 10,000ರೂ. ರಿಯಾಯಿತಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಹಕರು ಐಫೋನ್ 12 ಫೋನ್‌ ಅನ್ನು 59,999ರೂ.ಗಳ ರಿಯಾಯಿತಿ ದರದಲ್ಲಿ ಪಡೆಯಬಹುದು.



ಫ್ಲಿಪ್‌ಕಾರ್ಟ್ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಕಾರ್ಡ್‌ಗಳಿಗೆ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಿದ್ದು, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳು ಸೇರಿದಂತೆ 1,000 ರೂಪಾಯಿಗಳ ರಿಯಾಯಿತಿ ನೀಡುತ್ತದೆ. ಐಎಂಐ ಖರೀದಿ ಆಯ್ಕೆಯೂ ಇದೆ. ಐಫೋನ್ 12 ಮಿನಿ ತಿಂಗಳಿಗೆ 2,051ರೂ.ನಂತೆ 26 ತಿಂಗಳವರೆಗೆ ಇಎಮ್‌ಐ ಆಯ್ಕೆ ಲಭ್ಯವಿದೆ. ಆದಾಗ್ಯೂ, ಇದು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲ ಎಂಬುದನ್ನು ಗಮನಿಸಿ. ಗ್ರಾಹಕರು ಯಾವುದೇ ಬಡ್ಡಿದರವಿಲ್ಲದೆ ಪಡೆಯಬಹುದು ಎನ್ನಲಾಗಿದೆ.

69,900ರೂ. ಬೆಲೆಯ ಐಫೋನ್ 12 ಮಿನಿ ಫೋನ್ 64 ಜಿಬಿ ಸ್ಟೋರೇಜ್ ಮಾಡೆಲ್ ರೆಡ್ ಕಲರ್ ರೂಪಾಂತರವು ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಾಯಿತಿಯ ನಂತರ 59,999ರೂ.ಗಳ ಪ್ರೈಸ್‌ ಟ್ಯಾಗ್‌ ಕಾಣಿಸಿಕೊಂಡಿದೆ. ಹಾಗಾದರೇ ಐಫೋನ್ 12 ಮಿನಿ ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.



ಐಫೋನ್ 12 ಮಿನಿ-ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಸದ್ಯ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಈ ಐಫೋನ್ 12 ಮಿನಿ ಬೆಲೆಯು 59,999ರೂ. ಆಗಿದೆ. ಇತರೆ ಫೀಚರ್ಸ್ ಆಪಲ್ ಐಫೋನ್ 12 ಮಿನಿ ಐಓಎಸ್‌ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 64GB ಮತ್ತು 4GB RAM, 128GB ಮತ್ತು 4GB RAM, 256GB ಮತ್ತು 4GB RAM ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಎರಡು ಕ್ಯಾಮೆರಾಗಳು 12 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿವೆ. 2227 mAh ಬ್ಯಾಟರಿ ಬ್ಯಾಕ್‌ಅಪ್‌ ಇದ್ದು, ಫಾಸ್ಟ್‌ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಫೇಸ್‌ ಐಡಿ, ಆಲ್ಸಲರೋಮೀಟಿರ್ ಆಯ್ಕೆ ಇದೆ. ಇನ್ನು ಈ ಫೋನ್ ಬ್ಲ್ಯಾಕ್, ವೈಟ್, ರೆಡ್, ಗ್ರೀನ್, ಬ್ಲೂ ಮತ್ತು ಪರ್ಪಲ್ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

(Kannada Copy of Gizbot Kannada)