ನೋಕಿಯಾ C20 ಪ್ಲಸ್ ಲಾಂಚ್: ಅಧಿಕ ಬ್ಯಾಟರಿ!

10-08-21 11:17 am       Gizbot, Mutthuraju H M   ಡಿಜಿಟಲ್ ಟೆಕ್

ನೋಕಿಯಾ ಕಂಪೆನಿ ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರಾಂಡ್‌ ಎನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ವಲಯದಲ್ಲಿ ತನ್ನ ಕೈಚಳಕ ತೋರಿಸಿರುವ ನೋಕಿಯಾ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ.

ನೋಕಿಯಾ ಕಂಪೆನಿ ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರಾಂಡ್‌ ಎನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ವಲಯದಲ್ಲಿ ತನ್ನ ಕೈಚಳಕ ತೋರಿಸಿರುವ ನೋಕಿಯಾ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ನೋಕಿಯಾ C20 ಪ್ಲಸ್ ಅನ್ನು ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಆಕ್ಟಾ-ಕೋರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಹೌದು, ನೋಕಿಯಾ ಕಂಪೆನಿ ಹೊಸ ನೋಕಿಯಾ C20 ಪ್ಲಸ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 4,950mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಅಗ್ಗದ ಬೆಲೆಯನ್ನು ಹೊಂದಿದ್ದು, 8,999 ರೂ ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.



ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ನೋಕಿಯಾ C20 ಪ್ಲಸ್ ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 81.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.



ಪ್ರೊಸೆಸರ್‌ ಯಾವುದು?

ಇದು ಆಕ್ಟಾ-ಕೋರ್ ಯುನಿಸೋಕ್ SC9863a SoC ಪ್ರೊಸೆಸರ್‌ ಅನ್ನು ಪಡದುಕೊಂಡಿದ್ದು, ಆಂಡ್ರಾಯ್ಡ್ 11 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೆ ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ.



ಕ್ಯಾಮೆರಾ ವಿಶೇಷ

ನೋಕಿಯಾ C20 ಪ್ಲಸ್ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಜೊತೆಗೆ ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆಟಪ್ ಹೊಂದಿದೆ.



ಬ್ಯಾಟರಿ ಮತ್ತು ಇತರೆ

ನೋಕಿಯಾ C20 ಪ್ಲಸ್ ಸ್ಮಾರ್ಟ್‌ಫೋನ್‌ 4,950mAh ಬ್ಯಾಟರಿಯನ್ನು ಒದಗಿಸಿದ್ದು ಅದು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬಳಕೆಯನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್ v4.2, FM ರೇಡಿಯೋ, ಮೈಕ್ರೋ- USB, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.



ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನೋಕಿಯಾ C20 ಪ್ಲಸ್ ಸ್ಮಾರ್ಟ್‌ಫೋನ್‌ 2GB RAM + 32GB ಸ್ಟೋರೇಜ್ ರೂಪಾಂತರಕ್ಕೆ 8,999.ರೂ ಬೆಲೆ ಹೊಂದಿದೆ. ಅಲ್ಲದೆ 3GB + 32GB ಸ್ಟೋರೇಜ್ ಆಯ್ಕೆಯ ಬೆಲೆ 9,999ರೂ,ಆಗಿದೆ. ಇದು ನೋಕಿಯಾ ಇಂಡಿಯಾ ವೆಬ್‌ಸೈಟ್, ಪ್ರಮುಖ ಮೊಬೈಲ್ ಚಿಲ್ಲರೆ ವ್ಯಾಪಾರಿಗಳು, ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಪಾಯಿಂಟ್ ಮಳಿಗೆಗಳ ಮೂಲಕ ನೀಲಿ ಮತ್ತು ಬೂದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನು ಲಾಂಚ್‌ ಆಫರ್‌ನಲ್ಲಿ 10% ರಿಯಾಯಿತಿ ದೊರೆಯಲಿದೆ. ಹಾಗೆಯೇ ನಿರ್ದಿಷ್ಟವಾಗಿ ರಿಲಯನ್ಸ್ ಜಿಯೋ ಗ್ರಾಹಕರಿಗೆ 4,000ವರೆಗೆ ರಿಯಾಯಿತಿ ಸಿಗಲಿದೆ.

(Kannada Copy of Gizbot Kannada)