ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್‌ ಬಿಡುಗಡೆ!..ಆನ್‌ಲೈನ್‌ ಕಲಿಕೆಗೆ ವೇದಿಕೆ!

17-08-21 11:31 am       Gizbot, Mantesh   ಡಿಜಿಟಲ್ ಟೆಕ್

ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಎನ್ನುವ ಉದ್ದೇಶದಿಂದ ಡಾ. ರಾಜ್ ಕುಮಾರ್ ಅಕಾಡೆಮಿಯು 'ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್‌' ಅನ್ನು ತಯಾರು ಮಾಡಿದೆ.

ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಎನ್ನುವ ಉದ್ದೇಶದಿಂದ ಡಾ. ರಾಜ್ ಕುಮಾರ್ ಅಕಾಡೆಮಿಯು 'ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್‌' ಅನ್ನು ತಯಾರು ಮಾಡಿದೆ. Dr.Rajkumar's Learning App) ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್‌ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.

ಬೆಂಗಳೂರಿನ ಶೆರ್ಟನ್ ಹೊಟೆಲ್ ನಲ್ಲಿ ನೋಮವಾರ (ಆ.16) ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್‌ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಈಗಾಗಲೇ ಡಾ. ರಾಜ್ ಕುಮಾರ್ ಅಕಾಡೆಮಿ ನಾಗರೀಕ ಸೇವಾ ಪರೀಕ್ಷೆ ತರಬೇತಿಯಲ್ಲಿ ಹೆಸರು ಮಾಡಿದೆ. ಪ್ರಸ್ತುತ ಕೊರೊನಾ ಸಾಂಕ್ರಾಮಿಕದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಷ್ಟ ಆಗುತ್ತಿದೆ. ಈ ಆಪ್‌ ಮೂಲಕ ಪಿಯುಸಿ ವಿದ್ಯಾರ್ಥಿಗಳಿಂದ ಎಲ್ಲರೂ ಉಪಯೋಗಿಸಿಕೊಳ್ಳಬಹುದು.

ಕೋವಿಡ್‌ ಸಾಂಕ್ರಾಮಿಕದ ನಂತರ ಶಿಕ್ಷಣ ಮತ್ತು ಕಲಿಕಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಆಗಿವೆ. ವರ್ಷದಿಂದ ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಕಲಿಕೆ ಮುಂದುವರಿಸಿದ್ದಾರೆ. ಇತರೆ ಕೋರ್ಸ್‌ಗಳು, ಪರೀಕ್ಷೆಗಳೂ ಸಹ ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ಆರ್ಥಿಕ ಪರಿಸ್ಥಿತಿಯ ಕಾರಣಗಳಿಂದ ಕೆಲವು ವಿದ್ಯಾರ್ಥಿಗಳು ವ್ಯಾಸಂಗದಿಂದ ದೂರ ಉಳಿದಿದ್ದಾರೆ, ದುಡಿಮೆ ಶುರು ಮಾಡಿದ್ದಾರೆ. ಈ ಎಲ್ಲರ ಓದಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್‌ಕುಮಾರ್‌ ಕಲಿಕಾ ಆಪ್‌ ಸಹಕಾರಿಯಾಗಬಹುದಾಗಿದೆ.

ಕನ್ನಡ ಕಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ, ಪಿಯುಸಿ ಶಿಕ್ಷಣ ಸೇರಿದಂತೆ ಹಲವು ಹಂತದ ಕಲಿಕೆಗಳಿಗೆ ಆಪ್‌ ವೇದಿಕೆಯಾಗಿದೆ. ನಿಗದಿತ ಶುಲ್ಕ ಪಾವತಿಸಿ ಆಪ್‌‌ನಲ್ಲಿ ಕಲಿಕೆಗೆ ನೋಂದಾಯಿಸಿಕೊಳ್ಳಬಹುದು.

ಆಪ್‌ ಕುರಿತ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಪುನೀತ್‌, ಹಲವು ಸನ್ನಿವೇಶನಗಳ ಜೊತೆಗೆ ಆಪ್‌ ಬಗ್ಗೆ ಪರಿಚಯ ಕೊಟ್ಟಿದ್ದಾರೆ. '' ಬಡತನ ಓದಿಸೋರಿಗೆ ಇರುತ್ತೆ, ಓದುವವರಿಗೆ ಅಲ್ಲ, 'ಕೆಲವು ಊರುಗಳಲ್ಲಿ ವಿದ್ಯಾರ್ಥಿಗಳು ಇರ್ತಾರೆ, ವಿದ್ಯಾ ಸಂಸ್ಥೆಗಳು ಇರೋದಿಲ್ಲ', 'ನಿಮ್ಮ ಕನಸಿನ ಜೊತೆಗೆ ನಿಮ್ಮ ಅಪ್ಪ-ಅಮ್ಮನ ಕನಸೂ ಈಡೇರಿಸಬಹುದು', 'ಓದಿದ ಮೇಲೆ ಕೆಲಸ ಮಾಡ್ತಾರೆ, ಕೆಲವರು ಕೆಲಸ ಮಾಡಿಕೊಂಡೂ ಓದುತ್ತಾರೆ..' ಇರೋ ಜಾಗದಲ್ಲೇ, ನಿಮ್ಮ ದುಡಿಮೆಯಲ್ಲೇ ಕನಸನ್ನು ಸಾಕಾರಗೊಳಿಸಬಹುದು'' ಎಂದಿದ್ದಾರೆ. 'ಯಾಕೆ, ಏನು, ಎಲ್ಲಿ, ಎಂತು, ಎಷ್ಟು? ಈ ಐದು ಮಂತ್ರಗಳನ್ನು ಇಟ್ಟುಕೊಂಡು ಮಕ್ಕಳಿಗೆ ಬೋಧನೆ ಮಾಡಬೇಕು. ಮಕ್ಕಳಲ್ಲಿ ತರ್ಕಬದ್ಧ ಚಿಂತನೆಯನ್ನು ಬೆಳೆಸಲು ಪ್ರಯತ್ನಿಸಬೇಕು. ಈ ಆಪ್‌ ಮೂಲಕ ಇಡಿ ಭಾರತಕ್ಕೆ ಜ್ಞಾನ ಪಸರಿಸುವ ಕೆಲಸ ಆಗಲಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.

ಮಕ್ಕಳಿಗೆ ಕೇವಲ ಬೋಧನೆ ಮಾಡಿದ್ರೆ ಪ್ರಯೋಜನವಿಲ್ಲ. ಚಿಂತನೆಗೆ ಹಚ್ಚಬೇಕು. ಆಗ ಮಾತ್ರ ಕಲಿಕೆ‌ ಸಾಧ್ಯ.. ರಾಜ್ ಕುಮಾರ್ ಅಕಾಡೆಮಿ ಬಹಳ ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ. ನೀವು ಇಡೀ ಜಗತ್ತಿಗೆ ರೀಚ್ ಆಗುತ್ತೀರಿ. ಪ್ರಧಾ‌ನ ಮಂತ್ರಿಗಳು ನ್ಯೂ ಎಜ್ಯೂಕೇಷನ್ ಪಾಲಿಸಿ ಮಾಡಿದ್ದಾರೆ ರಾಜ್ ಕುಮಾರ್ ಲರ್ನಿಂಗ್ ಆಪ್ ನ್ಯೂ ಎಜ್ಯೂಕೇಷನ್ ಪಾಲಿಸಿ ಬಹಳ ಉಪಯೋಗ ಆಗುತ್ತೆ. ಕರ್ನಾಟಕದಲ್ಲಿ ನ್ಯೂ ಎಜ್ಯೂಕೇಷನ್ ಪಾಲಿಸಿಯನ್ನ ಮೊದಲು ಅಡಾಪ್ಟ್ ಮಾಡಿಕೊಳ್ಳುತ್ತದೆ ಎಂದು ತಿಳಿಸಿದರು.

(Kannada Copy of Gizbot Kannada)